ಬೆಳ್ತಂಗಡಿ ತಾಲೂಕಿನ 13 ಗ್ರಾ.ಪಂ. ವ್ಯಾಪ್ತಿಯಲ್ಲಿ 543 ಹಕ್ಕುಪತ್ರಗಳ ವಿತರಣೆ
ಬೆಳ್ತಂಗಡಿ: ಹಲವಾರು ವರ್ಷಗಳಿಂದ ಮನೆ ನಿರ್ಮಾಣ ಮಾಡುವ ಕನಸ್ಸನ್ನು ಹೊಂದಿರುವ ಬಡ ಕುಟುಂಬಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಬಡವರು ಇಲಾಖೆಯಿಂದ ಇಲಾಖೆಗಳಿಗೆ ಅಲೆದಾಟ ಮಾಡಬಾರದು ಎಂಬ ನಿಟ್ಟಿನಲ್ಲಿ ಇದೀಗ 94 ಸಿ ಅಡಿಯಲ್ಲಿ ನೀಡುವ ಹಕ್ಕುಪತ್ರದ ಜತೆಗೆ ಪಹಣಿ ಪತ್ರವನ್ನು ನೀಡುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಸೋಮವಾರ ಬೆಳ್ತಂಗಡಿ ತಾಲೂಕಿನ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 545 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಹಿಂದಿನ ಸರಕಾರ ಮನೆ ಕಟ್ಟಲು 1.40 ಲಕ್ಷ ರೂ. ಅನುದಾನ ನೀಡುತ್ತಿದ್ದು, ಇದೀಗ ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಯಡಿಯೂರಪ್ಪ ಆಡಳಿತ ಸರಕಾರ ಎರಡು ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಅಲ್ಲದೆ ನಗರ ವ್ಯಾಪ್ತಿಯಲ್ಲಿ ಮೂರು ಲಕ್ಷ ರೂ.ಗಳನ್ನು ನೀಡುತ್ತಿದೆ. ಬೆಳ್ತಂಗಡಿಗೂ ಬಸವ ವಸತಿಯಲ್ಲಿ ಮನೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು ಇದರಿಂದ ಹಲವಾರು ಕುಟುಂಬಗಳಿಗೆ ಪ್ರಯೋಜನವಾಗಿದೆ ಎಂದರು.
ಬೆಳ್ತಂಗಡಿ ತಾಲೂಕಿನ 13 ಗ್ರಾ.ಪಂ. ವ್ಯಾಪ್ತಿಯಲ್ಲಿ 543 ಹಕ್ಕುಪತ್ರಗಳ ವಿತರಣೆ
ಹಲವಾರು ವರ್ಷಗಳಿಂದ ಮನೆ ನಿರ್ಮಾಣ ಮಾಡುವ ಕನಸ್ಸನ್ನು ಹೊಂದಿರುವ ಬಡ ಕುಟುಂಬಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಬಡವರು ಇಲಾಖೆಯಿಂದ ಇಲಾಖೆಗಳಿಗೆ ಅಲೆದಾಟ ಮಾಡಬಾರದು ಎಂಬ ನಿಟ್ಟಿನಲ್ಲಿ ಇದೀಗ 94 ಸಿ ಅಡಿಯಲ್ಲಿ ನೀಡುವ ಹಕ್ಕುಪತ್ರದ ಜತೆಗೆ ಪಹಣಿ ಪತ್ರವನ್ನು ನೀಡುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಸೋಮವಾರ ಬೆಳ್ತಂಗಡಿ ತಾಲೂಕಿನ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 545 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
Upayuktha News यांनी वर पोस्ट केले सोमवार, २ मार्च, २०२०
ಜಿಪಂ ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ ಸದಸ್ಯರಾದ ಸುಧೀರ್ ಸುವರ್ಣ, ಜಯಶೀಲ, ಸುಶೀಲ, ತಹಸೀಲ್ದಾರ್ ಗಣಪತಿ ಶಾಸ್ತ್ರೀ, ಪಡಂಗಡಿ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಸಂತೋಷ್ ಪಡಂಗಡಿ, ಅಳದಂಗಡಿ ಗ್ರಾಪಂ ಅಧ್ಯಕ್ಷ ಸತೀಶ ಮಿತ್ತಮಾರು, ಸುಲ್ಕೇರಿ ಗ್ರಾಪಂ ಅಧ್ಯಕ್ಷೆ ಯಶೋಧ, ನಾರಾವಿ ಗ್ರಾಪಂ ಅಧ್ಯಕ್ಷ ರವೀಂದ್ರ ಪೂಜಾರಿ, ಉಪಾಧ್ಯಕ್ಷೆ ಯಶೋಧ, ಅಂಡಿಂಜೆ ಗ್ರಾಪಂ ಅಧ್ಯಕ್ಷ ಮೋಹನ್ ಅಂಡಿಂಜೆ, ಉಪಾಧ್ಯಕ್ಷೆ ಭವಾನಿ, ಹೊಸಂಗಡಿ ಗ್ರಾಪಂ ಅಧ್ಯಕ್ಷೆ ಹೇಮಾ ವಸಂತ್, ಲಲಿತಾ ಟಿ,ಹೆಗ್ಡೆ, ಆರಂಬೋಡಿ ಗ್ರಾ.ಪಂ ಅಧ್ಯಕ್ಷ ಪ್ರಭಾಕರ್, ಉಪಾಧ್ಯಕ್ಷೆ ಆಶಾ ಶೆಟ್ಟಿ, ಶಿರ್ಲಾಲು ಗ್ರಾಪಂ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಸಂಜೀವ ದೇವಾಡಿಗ, ಮೇಲಂತಬೆಟ್ಟು ಗ್ರಾಪಂ ಅಧ್ಯಕ್ಷೆ ನಳಿನಿ, ಉಪಾಧ್ಯಕ್ಷ ಶಿವರಾಮ ಗೌಡ, ಕಾಶಿಪಟ್ಣ ಗ್ರಾಪಂ ಅಧ್ಯಕ್ಷ ಸತೀಶ್ ಕೆ, ಉಪಾಧ್ಯಕ್ಷೆ ಮಮತಾ, ಕುಕ್ಕೇಡಿ, ಬಳಂಜ, ಮರೋಡಿ ಹಾಗೂ ಗ್ರಾಪಂನ ಜನಪ್ರತಿನಿಧಿಗಳು, ಕಂದಾಯ ಅಧಿಕಾರಿ ಪವಾಡಪ್ಪ ದೊಡ್ಡಮಣಿ, ಪ್ರಮುಖರಾದ ಸದಾನಂದ ಪೂಜಾರಿ ಉಂಗಿಲಬೈಲು, ನವೀನ್ ಸಾಮಾನಿ, ಸುಂದರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಸೋಮವಾರ ಬೆಳ್ತಂಗಡಿ ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ 545 ಹಕ್ಕುಪತ್ರ ವಿತರಣೆ ನಡೆಯಿತು. ಪಡಂಗಡಿ ಗ್ರಾಪಂ-48, ಕುಕ್ಕೇಡಿ ಗ್ರಾ.ಪಂ- 68, ಅಳದಂಗಡಿ ಗ್ರಾಪಂ ಮತ್ತು ಸುಲ್ಕೇರಿ ಗ್ರಾಪಂ-75, ನಾರಾವಿ ಗ್ರಾಪಂ-42, ಅಂಡಿಂಜೆ ಗ್ರಾಪಂ-52, ಶಿರ್ಲಾಲು ಗ್ರಾಪಂ-62, ಮೆಲಂತಬೆಟ್ಟು ಗ್ರಾಪಂ-66, ಬಳಂಜ ಗ್ರಾಪಂ-24, ಮರೋಡಿ ಗ್ರಾಪಂ-27, ಕಾಶಿಪಟ್ಣ ಗ್ರಾಪಂ-12, ಹೊಸಂಗಡಿ ಗ್ರಾಪಂ-35, ಆರಂಬೋಡಿ ಗ್ರಾ.ಪಂ-40 ಹಕ್ಕುಪತ್ರಗಳನ್ನು ವಿತರಿಸಲಾಯಿತು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ