ದೇಶ-ವಿದೇಶ ಪ್ರಮುಖ ವಾಣಿಜ್ಯ

ಪ್ರಮುಖ ಹೆದ್ದಾರಿಗಳಲ್ಲಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಆಹ್ವಾನ

ಹೊಸದಿಲ್ಲಿ: ಕೇಂದ್ರ ಸರಕಾರವು ದೇಶದ ಪ್ರಮುಖ ಹೆದ್ದಾರಿಗಳು ಹಾಗೂ ರೈಲು ಮಾರ್ಗಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನು ಪ್ರಮುಖ ಸಂಸ್ಥೆಗಳ ಮುಂದಿಟ್ಟಿದೆ.

ಬೃಹತ್ ಕೈಗಾರಿಕಾ ಶಾಖೆಗಳು ಈ ಪ್ರಸ್ತಾಪದಲ್ಲಿ ಆಸಕ್ತಿ ತೋರಿದ್ದು ಸರಕಾರಿ ಸಂಘಟನೆಗಳು, ಸಾರ್ವಜನಿಕ ಉದ್ಯಮ ಕ್ಷೇತ್ರ ಗಳು, ರಾಜ್ಯ ಅಧೀನ DISCOM ಗಳು, ಆಯಿಲ್ ಪಿ.ಎಸ್.ಯು ಗಳು , ಮೊದಲಾದವುಗಳಿಂದ ಈ ನಿಲ್ದಾಣಗಳ ಸ್ಥಾಪನೆಯ ಆಸಕ್ತಿಯನ್ನು ಎದುರು ನೋಡುತ್ತಿದೆ.

ಆಸಕ್ತ ಸಂಸ್ಥೆಗಳು ಮುಂಬಯಿ – ಪುಣೆ, ಅಹ್ಮದಾಬಾದ್ – ವಡೋದರ, ದೆಹಲಿ- ಆಗ್ರಾ ಯಮುನಾ, ಬೆಂಗಳೂರು – ಮೈಸೂರು, ಬೆಂಗಳೂರು‌ – ಚೆನ್ನೈ, ಸೂರತ್ – ಮುಂಬಯಿ, ಆಗ್ರಾ – ಲಕ್ನೋ ಮುಂತಾದ ಕ‌ಡೆಗಳಲ್ಲಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಸೆಂಟರ್ ಸ್ಥಾಪಿಸಲು ಉದ್ದೇಶಿಸಿದೆ.

ಇದಲ್ಲದೆ ದೆಹಲಿ – ಶ್ರೀನಗರ, ದೆಹಲಿ – ಕೋಲ್ಕತಾ, ಆಗ್ರಾ – ನಾಗಪುರ, ಮೀರತ್ – ಗಂಗೋತ್ರಿ ಧಾಮ, ಮುಂಬಯಿ – ದೆಹಲಿ, ಮುಂಬಯಿ – ಪುಣೆ , ಮುಂಬಯಿ – ನಾಗಪುರ, ಮುಂಬಯಿ – ಬೆಂಗಳೂರು ಹಾಗೂ ಕೋಲ್ಕತಾ – ಭುವನೇಶ್ವರ್ ಹೆದ್ದಾರಿಗಳಲ್ಲೂ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.

ಕೇಂದ್ರ ಸರಕಾರವು FAM (ಫಾಸ್ಟರ್ ಅಡಾಪ್ಷನ್ ಮತ್ತು ಹೈಬ್ರಿಡ್ ಹಾಗೂ ವಿದ್ಯುತ್ ವಾಹನಗಳ ತಯಾರಿ) ನ ಎರಡನೇ ಮಜಲಿನ ಮೂರು ವರ್ಷಗಳ ಕಾರ್ಯ ಯೋಜನೆಯನ್ನು ಏಪ್ರಿಲ್ 1 , 2019 ರಿಂದ ಈಗಾಗಲೇ ಕೈಗೆತ್ತಿಕೊಂಡಿದೆ.ಈ ಎರಡನೆಯ ಹಂತದಲ್ಲಿ ವಿದ್ಯುತ್ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯನ್ನು ಉತ್ತೇಜಿಸುತ್ತಿದೆ. ಸಾರ್ವಜನಿಕ ಸಾರಿಗೆ ಸಂಪರ್ಕ ವನ್ನು ವಿದ್ಯುದೀಕರಣಗೊಳಿಸುವುದು ಮತ್ತು ಸಾರಿಗೆಯ ವಿಸ್ತರಣಾ ಹಂಚಿಕೆ ಇದರ ಮುಖ್ಯ ಉದ್ದೇಶವಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ, ಬಾಂಬ್ ಶಂಕೆ, ಕಟ್ಟೆಚ್ಚರ

Upayuktha

ರಾಮ ಮಂದಿರಕ್ಕಾಗಿ 28 ವರ್ಷಗಳಿಂದ ಉಪವಾಸ ವ್ರತದಲ್ಲಿರುವ ಈ ಅಜ್ಜಿ

Upayuktha News Network

ಕೊರೊನಾ ವಿರುದ್ಧ ಸಮರ: ರಾಷ್ಟ್ರವನ್ನುದ್ದೇಶಿಸಿ ಇಂದು ರಾತ್ರಿ ಪ್ರಧಾನಿ ಮೋದಿ ಭಾಷಣ

Upayuktha

Leave a Comment