ಲೇಖನಗಳು

*ಮಹಾನ್ ಗಾಯಕ ಎಸ್ ಪಿ ಬಿ*

*ಮ* ಧುರ ಗೀತೆಗಳ ಹಾಡಿದ ಗಾನವಂತ|
*ಮಾ* ಧುರ್ಯಭರಿತ ಹಾಡು ನೀಡಿದ್ದಾರೆ ಸತತ|
*ಮಿ* ನುಗುವ ಮುಗ್ಧ ನಗುವಿನ ಹೃದಯವಂತ|
*ಮೀ* ಟಿದ ರಾಗಗಳೆಲ್ಲವೂ ಇರುವವು ಶಾಶ್ವತ|
*ಮು* ನಿಯದ ಎಸ್ ಪಿ ಬಾಲಣ್ಣ ನೀತಿವಂತ|
*ಮೂ* ರಲ್ಲ ಆರು ರಾಷ್ಟ್ರಪ್ರಶಸ್ತಿ ಪಡೆದಾತ|
*ಮೃ* ಷ್ಟಾನ್ನಭೋಜನದಂತೆ ಗೀತೆ ಆನಂದಭರಿತ|
*ಮೆ* ರುಗಿನ ಹಾಡುಗಳಿಂದ ಚಿತ್ರ ಪ್ರತಿಬಿಂಬಿತ|
*ಮೇ* ಲ್ಮಟ್ಟ ಗಾಯಕರಲ್ಲಿಯೇ ಪ್ರತಿಭಾವಂತ|
*ಮೈ* ಕು ಹಿಡಿದ್ರೆ ಗಂಧರ್ವಲೋಕದ ಸಂಗೀತ|
*ಮೊ* ನ್ನೆ ತೀರಿದ ಎಸ್ ಪಿ ಬಿ ನೆನಪು ಅನವರತ|
*ಮೋ* ಡಿ ಮಾಡುವ ಗಾನಗಂಗೆ ಅಪರಿಮಿತ|
*ಮೌ* ನ ಹೊಂದಿದ ಎಸ್ಪಿಬಿ ಗಾನ ಅಯಸ್ಕಂತ|
*ಮಂ* ತ್ರಮುಗ್ಧ ಕಣ್ಮರೆಗೆ ಹೃದಯ ಮಿಡಿತ|
*ಮ:* ಸಾವಿರಾರು ಗೀತೆಗಳ ಮಹಾಪರ್ವತ|

*:- ಎಚ್ .ಭೀಮರಾವ್ ವಾಷ್ಠರ್ , ಸುಳ್ಯ*
ಕೋಡಿಹಾಳ ಗ್ರಾಮ

Related posts

ಏನಿದು ಸಿ-ರಿಯಾಕ್ಟಿವ್ ಪ್ರೊಟೀನ್ (CRP)? ಇದು ಹೆಚ್ಚಾದರೆ ಏನಾಗುತ್ತದೆ?

Upayuktha

ಉಡುಪಿ ಕ್ಷೇತ್ರವನ್ನು ಹಡಿಲು ಭೂಮಿ ಮುಕ್ತ ಮಾಡಲು ಟೊಂಕ ಕಟ್ಟಿದ ಕೆ. ರಘುಪತಿ ಭಟ್

Upayuktha

ಕಿವಿ ತಮಟೆಯ ತೊಂದರೆಗಳು; ಉಂಟಾಗೋದು ಯಾಕೆ, ಹೇಗೆ, ಪರಿಹಾರವೇನು?

Upayuktha