ಜಿಲ್ಲಾ ಸುದ್ದಿಗಳು ಸ್ಥಳೀಯ

ಉಡುಪಿ ಜಿಲ್ಲಾ ಬಿಜೆಪಿಯಿಂದ ‘ಗೋವಿಗಾಗಿ ಮೇವು’ ಯಶಸ್ವಿ ಅಭಿಯಾನ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿಯು ಜಿಲ್ಲೆಯ ಗೋಶಾಲೆಗಳಿಗೆ ಹಸಿರು ಹುಲ್ಲನ್ನು ಶ್ರಮದಾನದ ಮೂಲಕ ಗೋವಿಗಾಗಿ ಮೇವು ಎಂಬ ಸರಣಿ ಕಾರ್ಯಕ್ರಮದ ಮೂಲಕ ಬದ್ಧತೆಯ ಕರ್ತವ್ಯ ನಿರ್ವಹಿಸಿ ಯಶಸ್ವಿಯಾಗಿದೆ.

ಈ ತನಕ ಅನೇಕ ವರ್ಷಗಳಿಂದ ಸ್ಥಳೀಯ ಅನೇಕ‌ ಹಿಂದೂ ಸಂಘಟನೆಗಳು, ಬ್ರಾಹ್ಮಣ ವಲಯ ಸಮಿತಿಗಳು, ಯುವಕ ಮಂಡಲಗಳು, ಭಜನಾ ತಂಡಗಳು ಹಾಗೂ ಇನ್ನಿತರೆ ಅನೇಕ ಸೇವಾ ಸಂಸ್ಥೆಗಳು ಮಳೆಗಾಲದಲ್ಲಿ ತಮ್ಮೂರಿನ ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದ ಹಸಿರು ಹುಲ್ಲನ್ನು ಶ್ರಮದಾನದ ಮೂಲಕ ಇಲ್ಲಿನ ನೀಲಾವರ ಕೊಡವೂರು, ಗೋಪಾಡಿಯೇ ಮೊದಲಾದ ಕಡೆಗಳಲ್ಲಿರುವ ಗೋಶಾಲೆಗಳಿಗೆ ತಂದೊಪ್ಪಿಸಿ ಗೋರಕ್ಷಣೆಯ ಕಾರ್ಯಕ್ಕೆ ಕೈಜೋಡಿಸುತ್ತಿದ್ದರು.

ಈ ವರ್ಷವೂ ಆ ಸಂಸ್ಥೆಗಳು ಇಂತಹ ಶ್ತಮದಾನ ಮಾಡಿ ಹುಲ್ಲು ತಂದೊಪ್ಪಿಸಿದ್ದಾರೆ. ಆದರೆ ಈ ಬಾರಿ ಕೊರೊನಾ ಮತ್ತು ವಿಪರೀತ ಮಳೆಯ ಕಾರಣದಿಂದ ಗೋಶಾಲೆಗಳಲ್ಲಿ ಯಥೇಚ್ಛ ಮೇವಿನ‌ ಸಂಗ್ರಹ ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಪೂಜ್ಯ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಾಮಾಜಿಕ ಜಾಲತಾಣಗಳು ಹಾಗೂ ಪತ್ರಿಕೆ ಮಾಧ್ಯಮಗಳ ಮೂಲಕ ಹಸಿರು ಹುಲ್ಲನ್ನು ಕತ್ತರಿಸಿ ಗೋಶಾಲೆಗಳಿಗೆ ಒದಗಿಸಿ ಸಹಕರಿಸಬೇಕೆಂದು ವಿನಂತಿ ಮಾಡಿದ್ದರು. ಅದೇ ರೀತಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ ಸುರೇಶ್ ನಾಯಕ್ ಅವರಿಗೂ ಮನವಿ ಮಾಡಿ ಪಕ್ಷದ ಯುವಮೋರ್ಚಾ ಕಾರ್ಯಕರ್ತರ ಮೂಲಕ ಒಂದಷ್ಟು ಶ್ರಮದಾನ ನಡೆಸಿ ಹುಲ್ಲು ಒದಗಿಸಲು ಪ್ರಯತ್ನಿಸಬೇಕು ಎಂದಿದ್ದರು.

ಶ್ರೀಗಳವರ ಈ ಸಲಹೆಯನ್ನು ಪ್ರೀತಿ ಗೌರವದಿಂದಲೇ ಸ್ವೀಕರಿಸಿದ ಸುರೇಶ್ ನಾಯಕ್ ಅವರು ಕೇವಲ ಯುವಮೋರ್ಚಾ ಮಾತ್ರವಲ್ಲದೇ ಪಕ್ಷದ ಎಲ್ಲಾ ಎಂಟು- ಒಂಭತ್ತು ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೂ ಈ ಸೂಚನೆ ನೀಡಿ ಸರಣಿ ಶ್ರಮದಾನಗಳ ಮೂಲಕ ಹುಲ್ಲು ಒಪ್ಪಿಸುವುದಾಗಿ ಭರವಸೆ ನೀಡಿದರು.

ಇದು ಕೇವಲ ಭರವಸೆ ಮಾತ್ರವಾಗದೇ ಜಿಲ್ಲಾ ಬಿಜೆಪಿಯ ಮಹಿಳಾ ಮೋರ್ಚಾ ರೈತ ಮೋರ್ಚಾ, ಕಾರ್ಮಿಕ ಮೋರ್ಚಾ ಯುವ ಮೋರ್ಚಾ, ಹಿಂದುಳಿದ ವರ್ಗಗಳ ಮೋರ್ಚಾ, ಎಸ್‌ಸಿ/ಎಸ್‌ಟಿ ಮೋರ್ಚಾ ಗ್ರಾಮಾಂತರ ಬಿಜೆಪಿ ಘಟಕ ಹೀಗೆ ಎಲ್ಲಾ ಮೋರ್ಚಾಗಳ ಸ್ಥಳೀಯ ಮಟ್ಟದ ಕಾರ್ಯಕರ್ತರ ತಂಡಗಳು ಜಿಲ್ಲಾಧ್ಯಕ್ಷರ ಸೂಚನೆಯನ್ನು ಸ್ವೀಕರಿಸಿ ಕಳೆದ 15-20 ದಿನಗಳಿಂದ ನಿರಂತರ ಸರಣಿ ಶ್ರಮದಾನಗಳ ಮೂಲಕ ನೀಲಾವರ ಕೊಡವೂರು, ಗೋಪಾಡಿಯ ಗೋಶಾಲೆಗಳಿಗೆ ಹಸಿರು ಹುಲ್ಲನ್ನು ನೀಡುತ್ತಿದ್ದು ಸಾರ್ವಜನಿಕರ ಅಪಾರ ಪ್ರಶಂಸೆಗೆ ಪಾತ್ರವಾಗಿದೆ.

ಗೋವಿಗಾಗಿ ಮೇವು ಸರಣಿ ಗೋಗ್ರಾಸ ಸಮರ್ಪಣಾ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಸುತ್ತಿರುವುದಕ್ಕೆ ಪೂಜ್ಯ ಪೇಜಾವರ ಶ್ರೀಗಳು ಅತ್ಯಂತ ಸಂತಸ ವ್ಯಕ್ತಪಡಿಸಿದ್ದು, ಭಾಗಿಗಳಾಗಿರುವ ಎಲ್ಲ ಸಂಘ ಸಂಸ್ಥೆಗಳು, ಜಿಲ್ಲಾ ಬಿಜೆಪಿಯ ಎಲ್ಲ ಮೋರ್ಚಾಗಳ ಮುಖಂಡರು ಕಾರ್ಯಕರ್ತರುಗಳನ್ನು ಅಭಿನಂದಿಸಿದ್ದಾರೆ. ಅವರೆಲ್ಲರಿಗೂ ಶ್ರೀ ಗೋಪಾಲಕೃಷ್ಣ ಶ್ರೀ ಮುಖ್ಯಪ್ರಾಣ ದೇವರು ವಿಶೇಷವಾಗಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದ್ದಾರೆ.

(ವೀಡಿಯೋ) ಗೋವಿಗಾಗಿ ಮೇವು ಅಭಿಯಾನದಲ್ಲಿ ಪಾಲ್ಗೊಂಡವರಿಗೆ ಪೇಜಾವರ ಶ್ರೀಗಳ ಅಭಿನಂದನೆ

ಬಹುಶಃ ಇದೇ ಪ್ರಥಮ ಬಾರಿಗೆ ರಾಜ್ಯದ ರಾಜಕೀಯ ಪಕ್ಷವೊಂದರ ಜಿಲ್ಲಾ ಘಟಕದ ಮೂಲಕ ಗೋರಕ್ಷಣೆಯ ಕಾರ್ಯಕ್ಕೆ ಇಂತಹ ಬೆಂಬಲ ದೊಡ್ಡ ಮಟ್ಟದಲ್ಲಿ ನಡೆದಿದ್ದು ಇದಕ್ಕಾಗಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ ಸುರೇಶ್ ನಾಯಕ್ ಅವರನ್ನೂ ಶ್ರೀಗಳು ಅಭಿನಂದಿಸಿ, ಅವರ ನೇತೃತ್ವದಲ್ಲಿ ಇಂತಹ ಸಮಾಜಮುಖಿ ಕಾರ್ಯಗಳು ಮತ್ತಷ್ಟು ನಡೆಯುವಂತಾಗಲಿ ಅವರಿಗೆ ಶ್ರೀಕೃಷ್ಣನು ಉಜ್ವಲ ಯಶಸ್ಸನ್ನು ಕರುಣಿಸಲಿ ಎಂದು ಆಶೀರ್ವದಿಸಿದ್ದಾರೆ.

✍️ ಜಿ ವಾಸುದೇವ ಭಟ್ ಪೆರಂಪಳ್ಳಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ನಿವೇದಿತಾ ಶಿಶುಮಂದಿರದ ಪ್ರತಿಭೋತ್ಸವ

Upayuktha

ಮಂಗಳೂರು ಲಿಟ್‌ ಫೆಸ್ಟ್‌ ನ.29-30: ತುಳು ಸಾಹಿತ್ಯ ಶ್ರೀಮಂತಿಕೆ ಕುರಿತು ಡಾ. ವಸಂತಕುಮಾರ್ ಪೆರ್ಲ ಉಪನ್ಯಾಸ

Upayuktha

ಬದುಕಿನಲ್ಲಿ ನಿರ್ದಿಷ್ಟ ಗುರಿ, ಬದ್ಧತೆ ಇದ್ದರೆ ಸಾಧನೆಯ ಹಾದಿ ಸುಗಮ: ಡಾ. ಎಂ ಮೋಹನ ಆಳ್ವ

Upayuktha

Leave a Comment