ದೇಶ-ವಿದೇಶ

ಡ್ರಾಗನ್ ಫ್ರೂಟ್ ಹೆಸರು ಬದಲಿಸಿದ ಗುಜರಾತ್ ಸರ್ಕಾರ! ಹೊಸ ಹೆಸರೇನು ಗೊತ್ತಾ?

ಗಾಂಧಿನಗರ: ವಿವಿಧ ರಾಜ್ಯಗಳಲ್ಲಿ ಹಲವು ನಗರಗಳ ಹೆಸರನ್ನು ಬದಲಿಸಿ ಐತಿಹಾಸಿಕ ಹೆಜ್ಜೆಯನ್ನಿರಿಸಿದ್ದ ಬಿಜೆಪಿ ಸರ್ಕಾರ ಈಗ ಡ್ರಾಗನ್ ಫ್ರೂಟ್ ಹೆಸರನ್ನು ಬದಲಾವಣೆ ಮಾಡಿದೆ.

ಈ ಕುರಿತಂತೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಆದೇಶ ಹೊರಡಿಸಿದ್ದು, ಡ್ರಾಗನ್ ಫ್ರೂಟ್‌ನ ಹೆಸರನ್ನು ಕಮಲಂ ಎಂದು ಬದಲಾವಣೆ ಮಾಡಿದ್ದಾರೆ.

ಈ ಕುರಿತಂತೆ ಮಾತನಾಡಿರುವ ರೂಪಾನಿಯವರು, ಡ್ರಾಗನ್ ಹಣ್ಣಿನ ಪೇಟೆಂಟ್‌ಗಾಗಿ ನಾವು ಕಮಲಂ ಎಂದು ಬದಲಿಸಿ ಅರ್ಜಿ ಸಲ್ಲಿಸಲಾಗಿದೆ. ಇನ್ನು ಮುಂದೆ ಈ ಹಣ್ಣನ್ನು ಕಮಲಂ ಎಂದೇ ಕರೆಯಲು ಸೂಚಿಸಲಾಗಿದೆ ಎಂದಿದ್ದಾರೆ.

ಗುಜರಾತ್‌ನ ಕಚ್ಛ್‌, ನವಸಾರಿ ಮತ್ತು ಇತರ ಭಾಗಗಳಲ್ಲಿನ ರೈತರು ಡ್ರ್ಯಾಗನ್ ಹಣ್ಣನ್ನು ಬೆಳೆಯುತ್ತಿದ್ದಾರೆ. ಹೀಗಾಗಿ, ಇದಕ್ಕೆ ಸ್ಥಳೀಯ ಹೆಸರು ಇರಬೇಕು ಎಂದು ರೈತರು ಕೋರಿದ್ದರು. ಹೀಗಾಗಿ, ಹೆಸರು ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.

ಕಮಲಂ ಎಂಬ ಪದವು ಸಂಸ್ಕೃತ ಪದವಾಗಿದ್ದು, ಇದು ಕಮಲದ ಹೂವಿನಂತೆಯೇ ಆಕಾರ ಹೊಂದಿದೆ. ಆದ್ದರಿಂದ ನಾವು ಇದನ್ನು ಕಮಲಂ ಎಂದು ಕರೆಯಲು ನಿರ್ಧರಿಸಿದ್ದೇವೆ. ಹಣ್ಣಿನ ಮರುನಾಮಕರಣದ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಉದ್ದೇಶವಿಲ್ಲ ಎಂದಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬಾಲಿವುಡ್‌ ಹಿರಿಯ ನಟ ಸಂಜಯ್‌ ದತ್‌ ಗೆ ಆರೋಗ್ಯ ಸಮಸ್ಯೆ – ಮುಂಬೈ ಖಾಸಗಿ ಆಸ್ಪತ್ರೆ ಗೆ ದಾಖಲು

Harshitha Harish

ಸಿಎಎ ವಿರೋಧಿ ಪ್ರತಿಭಟನೆ: ಆಸ್ತಿ ಜಪ್ತಿ ನೋಟಿಸ್‌ಗೆ ಉತ್ತರಿಸಲು ಗಲಭೆಕೋರರಿಗೆ 7 ದಿನ ಗಡುವು

Upayuktha

ಕೊವಿಡ್ 19 ನಿಂದ ಬೇಗ ಚೇತರಿಸಿಕೊಳ್ಳಿ- ಟ್ರಂಪ್ ದಂಪತಿಗೆ ಪ್ರಧಾನಿ ಟ್ವೀಟ್

Harshitha Harish