ನಗರ ಸ್ಥಳೀಯ

ಕೊಂಬೆಟ್ಟು ಸರಕಾರಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ‘ಗುರುವಂದನೆ’

ಪುತ್ತೂರು: ಶಾಲೆಯ ಬೆಳವಣಿಗೆಗೆ ಹಿರಿಯ ವಿದ್ಯಾರ್ಥಿಗಳ ಸಹಕಾರ ಅಗತ್ಯ. ಹಳೆ ವಿದ್ಯಾರ್ಥಿಗಳು ಒಂದಾದಾಗ ಶಾಲೆಯಲ್ಲಿ ಅಭಿವೃದ್ಧಿ‌ ಕೆಲಸಗಳು ನಡೆಸಲು ಸಾಧ್ಯವಾಗುತ್ತದೆ. ಶಾಲೆಯಲ್ಲಿ ಅಭಿವೃದ್ಧಿಯ ಅಗತ್ಯತೆ ಎದುರಾದಾಗ ಕುಂದು ಕೊರತೆಗಳನ್ನು ಆಲಿಸಿ ಸಹಾಯಕ್ಕಾಗಿ ಮುಂದೆ ಬಂದಿದ್ದೀರ. ಈ ಮೂಲಕ ಶತಮಾನ ಕಂಡ ಶಾಲೆಯಲ್ಲಿ ಅಭಿವೃದ್ದಿ ಕಾರ್ಯ ನಡೆಸಲು ಹಿರಿಯ ವಿದ್ಯಾರ್ಥಿಗಳಿಂದ ಸಾಧ್ಯವಾಗಿದೆ ಎಂದು ಕೊಂಬೆಟ್ಟಿನ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಸಂತ ಮೂಲ್ಯ ಹೇಳಿದರು.

ಅವರು ಕೊಂಬೆಟ್ಟು ಶಾಲೆಯಲ್ಲಿ 1972 ರಿಂದ 1977ರ ಅವಧಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಆಯೋಜಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ಕೊಂಬೆಟ್ಟು ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಗೀತಮಣಿ ಮಾತನಾಡಿ ಸರಕಾರಿ ಶಾಲೆಗೆ ಯಾಕೆ ಅನುದಾನ ನೀಡಬೇಕು ಎಂಬ ಭಾವನೆ ಹಲವರಲ್ಲಿದೆ. ಈ ಭಾವನೆ ತಪ್ಪು. ಶಾಲೆಯ ಅಭಿವೃದ್ಧಿಗೆ ಸಹಕಾರ ಬೇಕೆಂದಾಗ ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ. ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆ ಅಭಿವೃದ್ಧಿ ಕಂಡಿದೆ. ಶಿಕ್ಷಕರ ಬಹುದೊಡ್ಡ ಆಸ್ತಿ ವಿದ್ಯಾರ್ಥಿಗಳು. ಪ್ರತಿಯೊಬ್ಬರು ಶಾಲೆಯ ಬಗ್ಗೆ ಅಭಿಮಾನ ಹೊಂದಿರಬೇಕು. ಹೀಗಿದ್ದಾಗ ಶಾಲೆ ಬೆಳವಣಿಗೆ ದಾರಿಯಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದರು.

ನಿವೃತ್ತ ಶಿಕ್ಷಕ ಬಾಲಚಂದ್ರ‌ ಮಾತನಾಡಿ ಶಿಕ್ಷಕರು ಹಣ ಮಾಡಲು ಸಾಧ್ಯವಿಲ್ಲ. ಶಿಕ್ಷಕರ ಆಸ್ತಿ ವಿದ್ಯಾರ್ಥಿಗಳು. ಶಿಷ್ಯರ ಸಾಧನೆ ಪಾಠ ಕಲಿಸಿದ ಗುರುವಿನ ಹೆಮ್ಮ ತರುತ್ತದೆ ಎಂದರು.

ನಿವೃತ್ತ ಶಿಕ್ಷಕಿ ಮೇರಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ದಾರಿ ತೋರಿಸುವ ಕೆಲಸ ಶಿಕ್ಷಕ ಮಾಡುತ್ತಾನೆ. ಹೀಗಾಗಿ ವಿದ್ಯಾರ್ಥಿಗಳ ಸಾಧನೆ ಶಿಕ್ಷಕ ವೃಂದಕ್ಕೆ ನೆಮ್ಮದಿ ನೀಡುತ್ತದೆ. ವಿದ್ಯಾಸಂಸ್ಥೆಯ ಮೇಲಿನ ವಿದ್ಯಾರ್ಥಿಗಳ ಅಭಿಮಾನ ಮಹತ್ವವಾದುದು. ಈ ಮೂಲಕ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿರುವುದು ಸಂತಸ ತಂದಿದೆ ಎಂದರು.

ನಿವೃತ್ತ ಶಿಕ್ಷಕ ಹರಿನಾರಾಯಣ ಕೆದಿಲಾಯ ಮಾತನಾಡಿ, ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ಗುರುವಂದನೆ ನೀಡಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಕಾರ್ಯಕ್ರಮ ಮಾಡಿರುವುದು ಶಿಕ್ಷಕರ ಮೇಲಿನ ಗೌರವ ಹೆಚ್ಚುವಂತೆ ಮಾಡಿದೆ ಎಂದರು.

ನಿವೃತ್ತ ಶಿಕ್ಷಕಿ ಅಮ್ಮಣ್ಣ, ನಿವೃತ್ತ ಶಿಕ್ಷಕಿ ಉಮಾ, ಆಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು. ಹಳೆ ವಿದ್ಯಾರ್ಥಿ ಕವಿತಾ ಕಿಣಿ ಪ್ರಾರ್ಥಿಸಿದರು. ಹಳೆ ವಿದ್ಯಾರ್ಥಿ ಅಶೋಕ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಆರ್ಲಪದವಿನ ಕಡಂದೇಲು ಪರಿಸರದಲ್ಲಿ ಕೊರೊನಾ ತಪಾಸಣೆ: 30ಕ್ಕೂ ಅಧಿಕ ಗ್ರಾಮಸ್ಥರು ಭಾಗಿ

Upayuktha

ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಧೀಮಂತ ಪತ್ರಕರ್ತ ಮನೋಹರ ಪ್ರಸಾದ್ ಆಯ್ಕೆ

Upayuktha

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ವಸಂತ ಮಜಲು ಆಯ್ಕೆ

Sushmitha Jain