ಕತೆ-ಕವನಗಳು

ಗುರುಗಳಿಗೆ ನಮನ

ತಮ್ಮ ಜ್ಞಾನ ಭಂಡಾರವನ್ನು


ಧಾರೆ ಎಳೆದು ಕಲಿಸಿದ
ಎಲ್ಲಾ ಗುರುಗಳಿಗಿದೋ ನಮನ

ಅವರ ಮನದಲ್ಲಿ ಒತ್ತಡ
ಇರಲು ಸಾವಿರಾರು
ಆದರೂ
ವಿದ್ಯಾರ್ಥಿಗಳ ಉತ್ತಮ
ಭವಿಷ್ಯಕ್ಕಾಗಿ ದಿನವಿಡೀ
ಶ್ರಮಿಸುವರು ಗುರುಗಳು
||ನಮನ||

ಕತ್ತಲೆಯಿಂದ ಬೆಳಕಿನೆಡೆಗೆ
ಅಜ್ಞಾನದಿಂದ ಜ್ಞಾನದೆಡೆಗೆ
ವಿದ್ಯಾರ್ಥಿಗಳನ್ನು
ಕೊಂಡ್ಯುಯುವವರು ಗುರುಗಳು
||ನಮನ||

ತಪ್ಪು ಮಾಡಿದಾಗ ತಿದ್ದುವರು
ಗೆದ್ದಾಗ ಹಾರೈಸುವರು
ಸೋತಾಗ ಆತ್ಮವಿಶ್ವಾಸ
ತುಂಬಿ ಸಂತೈಸುವರು
ಗುರುಗಳು
||ನಮನ||

ಯಾವುದೇ ಸ್ವಾರ್ಥ ಇಲ್ಲದೇ
ನಮ್ಮನ್ನು ತಿದ್ದಿ ತೀಡಿ ಒಂದು
ಮೂರ್ತಿಯಾಗಿ ಸಿದ್ಧಪಡಿಸುವರು
ಗುರುಗಳು
||ನಮನ||

ನಮನ ನಮನ ನಮನ
ಗುರುಗಳಿಗಿದೋ ನನ್ನ ನಮನ
ಕಾರಣ ಅವರೆಲ್ಲ ದೇವರಿಗೆ ಸಮಾನ.

ಸಂಧ್ಯಾಕುಮಾರಿ .ಎಸ್
ವಿಟ್ಲ

Related posts

ಹವ್ಯಕ ಕವಿತೆ: ಕಿರಿಕಿರಿ ಮುಗಿವಲಿಲ್ಲೆ!

Upayuktha

ಯುಗಾದಿ ಕವನ: ನವ ಯುಗಾದಿಯ ನಿರೀಕ್ಷೆ

Upayuktha

ಕವಿತೆ: ತಂಗಾಳಿಯ ಪರಿಸರ

Upayuktha

Leave a Comment