ಆರೋಗ್ಯ ಯೋಗ- ವ್ಯಾಯಾಮ ಲೇಖನಗಳು

ಸಂತೋಷ- ಮನಸ್ಸಿನ ಒಂದು ಸ್ಥಿತಿ: ಇದನ್ನು ಸಾಧಿಸುವುದು ಹೇಗೆ..?

ಮನುಷ್ಯ ಜೀವನದುದ್ದಕ್ಕೂ ಸುಖ ಶಾಂತಿ ನೆಮ್ಮದಿಯನ್ನು ಬಯಸುತ್ತಾನೆ. ಅದಕ್ಕಾಗಿಯೇ ಸರ್ವ ದರ್ಶನಗಳು, ಸರ್ವ ಮತಗಳು, ಎಲ್ಲ ಪೂಜೆ ಪುರಸ್ಕಾರಗಳು, ಎಲ್ಲಾ ಧರ್ಮಗಳೂ, ಎಲ್ಲಾ ದೇವ ದೇವರುಗಳನ್ನು ಪೂಜಿಸುವುದನ್ನು ಆರಂಭಿಸಿದ. ಆದರೆ ಜೀವನದ ಯಾವುದೋ ಒಂದು ಘಟನೆ ಅಥವಾ ಸೋಲು ಅವನನ್ನು ಚಿಂತಾಸಕ್ತನನ್ನಾಗಿ ಮಾಡಿ ಜೀವನದ ಸುಖವನ್ನೇ ಮರೆಯುವಂತೆ ಮಾಡುತ್ತದೆ.

ಈ ಎಲ್ಲಾ ಚಿಂತೆಗಳನ್ನು ದೂರ ಮಾಡಿ ಹೇಗೆ ಜೀವನವನ್ನು ಮುನ್ನಡೆಸಬೇಕು ಎನ್ನುವುದನ್ನೆ ತಿಳಿಯಲಾರದಷ್ಟು ಮೂಢ ಭಾವ ಅವನದ್ದಾಗುತ್ತದೆ.

ಈ ರೀತಿ ಇರುವಾಗ ಅದರಿಂದ ಹೇಗೆ ಮೇಲೇಳಬೇಕೆನ್ನುದನ್ನು ತಿಳಿಸಿ ಕೊಡುವುದೇ ಯೋಗ ಶಾಸ್ತ್ರ. ಯಾವುದೇ ತರವಾದ ಚಿಂತೆ, ಮಾನಸಿಕ ಒತ್ತಡ ಅಥವಾ ಅಸ್ವಸ್ಥತೆಗೆ ರಾಮ ಬಾಣದಂತೆ ಕೆಲಸ ಮಾಡುವುದು ಯೋಗಾಭ್ಯಾಸ, ಹಾಸ್ಯ ಮತ್ತು ಧನಾತ್ಮಕ ಚಿಂತನೆಗಳು.

ಯೋಗ ಶಾಸ್ತ್ರ ಮತ್ತು ನಮ್ಮ ಧಾರ್ಮಿಕ ಗ್ರಂಥಗಳ ಪ್ರಕಾರ ನಮ್ಮ ಮನಸ್ಸೇ ನಮ್ಮ ಎಲ್ಲ ಕಷ್ಟ ಸುಖಗಳಿಗೆ ಕಾರಣ.

“ಮನಯೇವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಹೋ”. // ಭಗವದ್ಗೀತೆ //

ಯೋಗಶಸ್ತ್ರದ ಪ್ರಕಾರ ಜ್ಞಾನೇಂದ್ರಿಯ ದಿಂದ ಸಿಗುವ ಸಂಜ್ಞೆಗಳು, ನಮ್ಮ ಸ್ಮೃತಿ, ಮನಸ್ಸಿನ ವಿಕಲ್ಪ ಮತ್ತು ವಿಪರ್ಯಯದಿಂದಾಗಿ ಮನಸ್ಸಿನಲ್ಲಿ ಉತ್ಪತ್ತಿ ಆಗುವ ಸರ್ವ ವೃತ್ತಿಗಳು ಕಷ್ಟ ಅಥವಾ ಸುಖದ ಭಾವನೆಯನ್ನು ನಮಗೆ ಉಂಟು ಮಾಡುತ್ತವೆ. ಇದನ್ನು ನಿಯಂತ್ರಿಸುವ ಸಕಲ ಕ್ರಿಯೆಗಳನ್ನು ಯೋಗ ಅಭ್ಯಾಸ ಅನ್ನಬಹುದು.

ಯೋಗ ಅಭ್ಯಾಸ ಎನ್ನುವುದು ಬರೀ ಯೋಗಾಸನಗಳಲ್ಲೇ ಸ್ಥಿಮಿತ ಆಗದೆ ಅದರ ಬಾಹುವನ್ನು ಇನ್ನಷ್ಟು ಪಸರಿಸಿ ಅದರ 2ನೇ ಮೆಟ್ಟಿಲಾದ ನಿಯಮವನ್ನು ಗಮನಿಸಿದಾಗ ನಮಗೆ ತಿಳಿಯುವುದೇನೆಂದರೆ ಸಂತೋಷ ವಾಗಿರುವುದು ಸಂತೋಷವಾಗಿ ನಮ್ಮನ್ನು ನಾವು ಇಟ್ಟುಕೊಳ್ಳುವುದು ಯೋಗಾಭ್ಯಾಸದ ಒಂದು ಭಾಗವೇ ಆಗಿದೆ.

ನಮ್ಮನ್ನು ನಾವು ಸಂತೋಷವಾಗಿ ಇಟ್ಟುಕೊಳ್ಳುವುದು ಹೇಗೆ?
1) ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು
2) ದಿನನಿತ್ಯ 45 ನಿಮಿಷ ಆದರೂ ಆಸನ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡುವುದು. (ಯೋಗ್ಯ ಗುರುವಿನ ಸಲಹೆಯ ಮೇರೆಗೆ)
3) ಮನಸ್ಸು ಬಿಚ್ಚಿ ಮಾತನಾಡುವುದು
4) ಒಳ್ಳೆಯ ಸಜ್ಜನರ ಸಂಘ ಮಾಡುವುದು
5) ದಿನನಿತ್ಯದ ಆಗು ಹೋಗುಗನನ್ನು ಮನಸಾ ಸ್ವೀಕರಿಸುವುದು
6) ಯಾರನ್ನೂ ದ್ವೇಷಿಸದೇ ಇರುವುದು
7) ಕ್ಷಮಿಸುವ ದೊಡ್ಡತನವನ್ನು ಬೆಳೆಸಿಕೊಳ್ಳಬೇಕು.
8) ನಮ್ಮನ್ನ ನಾವು ಪ್ರೀತಿಸುವುದು ಮತ್ತು ಜೀವನದಲ್ಲಿ ಸಾಧಿಸುವ ಛಲ ಇಟ್ಟುಕೊಳ್ಳುವುದು.
9) ಬೇರೆಯವರಿಗೆ ತೊಂದರೆಮಾಡದೆ ಅಹಿಂಸಾ ತತ್ವದ ಆದರ್ಶಗಳನ್ನು ಪಾಲಿಸುವುದು.
10) ದಿನಕ್ಕೆ 10 ನಿಮಿಷ ಆದರೂ ದೇವರನ್ನು ಮನಸಾ ಸ್ಮರಿಸುವುದು.
11) ಸಾಧ್ಯವಾದಷ್ಟು ಪರೋಪಕಾರ ಮಾಡುವುದು.

ಈ ಎಲ್ಲಾ ವಿಧಾನ ಕೂಡಾ ಯೋಗ ಅಭ್ಯಾಸದ ಅಂಗವೆಂದೆ ತಿಳಿದು ಜೀವನದಲ್ಲಿ ಅಳಡಿಸಿಕೊಳ್ಳುತ್ತಾ ಬಂದರೆ ಸಂತೋಷ ನಮ್ಮನ್ನೇ ಹುಡುಕಿಕೊಂಡು ಬರುತ್ತದೆ.
‘ಸಂತೋಷವೇ ಜೀವನ ಚಿಂತೆಯೇ ಮರಣ’

ಯಾವುದೂ ಆಗದಿದ್ದರೆ ಸ್ವಲ್ಪ ಸ್ವಲ್ಪವಾಗಿ ಹಾಸ್ಯ ಅಭ್ಯಾಸಗಳನ್ನು ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ಕೊಡುವ ಪ್ರಯತ್ನ ಮಾಡಬಹುದು.

-ವಿಜಯ ಗಣೇಶ ಕೋರಿಕ್ಕಾರು
ಯೋಗ ಶಿಕ್ಷಕರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಇಂದು (ಜುಲೈ 16) ವಿಶ್ವ ಹಾವುಗಳ ದಿನ: ಉರಗಗಳ ಸಂತತಿಯ ರಕ್ಷಿಸೋಣ

Upayuktha

ಜೂನ್ 26: ವಿಶ್ವ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನಾಚರಣೆ

Upayuktha

ದಂತ ಅತಿ ಸಂವೇದನೆ: ಏನು, ಏಕೆ ಮತ್ತು ಚಿಕಿತ್ಸೆ

Upayuktha

Leave a Comment