ದೇಶ-ವಿದೇಶ

ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕ್ಕೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ 5.10 ಲಕ್ಷ ರೂ ದೇಣಿಗೆ

ಚಂಡೀಘಡ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ 5.10 ಲಕ್ಷ ರೂ.ದೇಣಿಗೆಯ ಚೆಕ್ ನ್ನು ಭಾನುವಾರ ನೀಡಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸಮಿತಿಗೆ 5 ಲಕ್ಷದ 10 ಸಾವಿರ ರೂಪಾಯಿ ದೇಣಿಗೆಯನ್ನು ಖಟ್ಟರ್ ನೀಡಿರುವುದಾಗಿ ಅಧಿಕೃತ ಮಾಹಿತಿ ತಿಳಿಸಿವೆ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಶ್ರೀ ರಾಮ ಜನ್ಮ ಭೂಮಿ ದೇವಾಲಯದ ಭಾವಚಿತ್ರವೊಂದನ್ನು ಮುಖ್ಯಮಂತ್ರಿಗೆ ನೀಡಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣದ ಮೇಲ್ವಿಚಾರಣೆಗಾಗಿ  ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಸ್ಥಾಪಿಸಲಾಗಿದೆ.

 

Related posts

ಕೊನೆಗೂ ಪಬ್ ಜಿ ಬ್ಯಾನ್

Harshitha Harish

ವಲಸೆ ಕಾರ್ಮಿಕರಿಗೆ 4 ವಿಶೇಷ ವಿಮಾನ ಒದಗಿಸಿದ ಅಮಿತಾಬ್ ಬಚ್ಚನ್

Upayuktha

ಜಮ್ಮು-ಕಾಶ್ಮೀರ ನಿರ್ಬಂಧ ರದ್ದತಿಗೆ ಸೂಚನೆ ನೀಡಲು ಸುಪ್ರೀಂ ಕೋರ್ಟ್ ನಕಾರ

Upayuktha