ದೇಶ-ವಿದೇಶ ಪ್ರಮುಖ

ದೇಶದ ಜನತೆಗೆ ‘2020 ಶುಭಾಶಯ’ ಕೋರಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಸುಖ-ಸಮೃದ್ಧಿ ದೊರೆಯಲೆಂದು ಹಾರೈಸಿದ್ದಾರೆ.

‘2020ನೇ ವರ್ಷ ನಿಮ್ಮ ಪಾಲಿಗೆ ಅದ್ಭುತವಾಗಿರಲಿ! ಈ ವರ್ಷ ಸಂತೋಷ ಸಮೃದ್ಧಿ ನಿಮ್ಮ ಬಾಳಿನಲ್ಲಿ ತುಂಬಿರಲಿ. ಪ್ರತಿಯೊಬ್ಬರೂ ಆರೋಗ್ಯವಾಗಿರಲಿ; ಪ್ರತಿಯೊಬ್ಬರ ಆಶೋತ್ತರಗಳು ಈಡೇರಲಿ’ ಎಂದು ಪ್ರಧಾನಿ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.

ಅವರ ಜತೆಗೆ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕೂಡ ಟ್ವಿಟರ್‌ ಮೂಲಕ ಶುಭ ಕೋರಿದ್ದಾರೆ. ‘ನಮ್ಮ ಎಲ್ಲ ಪ್ರಜೆಗಳಿಗೆ 2020ನೇ ವರ್ಷದ ಶುಭಾಶಯಗಳನ್ನು ಕೋರಲು ಸಂತಸಪಡುತ್ತಿದ್ದೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಇದು ಕೃತಜ್ಞತೆ ವ್ಯಕ್ತಪಡಿಸಲು, ಸಂತಸಪಡಲು ಮತ್ತು ಭವಿಷ್ಯದ ಬಗ್ಗೆ ಆಶಾದಾಯಕ ಭಾವನೆ ಹೊಂದಿರಲು ಸೂಕ್ತ ಸಮಯ. ಜೀವನದ ಹೊಸ ಗುರಿಗಳನ್ನು ನಿಗದಿಪಡಿಸುವ ಸಮಯ’ ಎಂದು ನಾಯ್ಡು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

36ನೇ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟ: ಆಳ್ವಾಸ್ ಸ್ಪೋರ್ಟ್ಸ್‌ ಕ್ಲಬ್‍ಗೆ ಸಮಗ್ರ ಚಾಂಪಿಯನ್‍ಶಿಪ್

Upayuktha

ಮೂಡುಬಿದಿರೆ: ಫೆ.20ರಂದು ಕೋಟಿ-ಚೆನ್ನಯ ಜೋಡುಕರೆಯಲ್ಲಿ ಹೊನಲು ಬೆಳಕಿನ ಕಂಬಳೋತ್ಸವ

Sushmitha Jain

ದ.ಕ. ಜಿಲ್ಲೆಯ ಮೊದಲ ಪ್ರಕರಣ: ಕೊರೋನಾ ಗೆದ್ದು ಊರಿಗೆ ತಲುಪಿದ ಭಟ್ಕಳದ ಯುವಕ

Upayuktha