ಅಪಘಾತ- ದುರಂತ ಜಿಲ್ಲಾ ಸುದ್ದಿಗಳು

ಹಾವೇರಿ :ಶಾಲಾ ಕಾಮಾಗಾರಿಗಾಗಿ ತೋಡಿದ್ದ ಗುಂಡಿಗೆ ಬಿದ್ದು 3 ಮಕ್ಕಳು ಸಾವು

ಹಾವೇರಿ: ಶಾಲಾ ಕಾಮಗಾರಿ ಕೆಲಸಕ್ಕಾಗಿ ತೋಡಿದ್ದ ಗುಂಡಿಯೊಂದಕ್ಕೆ 3 ಮಕ್ಕಳು ಬಿದ್ದು ದಾರುಣ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ.

ಬ್ಯಾಡಗಿಯ ಸರ್ಕಾರಿ ಉರ್ದು ಶಾಲೆಯ ಆವರಣದಲ್ಲಿ ನಡೆದ ಘಟನೆಯಲ್ಲಿ ಆಟವಾಡುತ್ತಿದ್ದ ಮಕ್ಕಳು ಕೊಠಡಿ ನಿರ್ಮಾಣಕ್ಕಾಗಿ ತೆಗೆಯಲಾಗಿದ್ದ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಭಾರಿ ಸುರಿದ ಮಳೆಗೆ ನೀರಿನಿಂದ ಗುಂಡಿಗಳು ತುಂಬಿದ ಕಾರಣ ಈ ದುರಂತ ನಡೆದಿದೆ ಎನ್ನಲಾಗಿದೆ.

ಈ ಘಟನೆ ನಡೆದ ಸ್ಥಳಕ್ಕೆ ಪುರಸಭೆ ಅಧಿಕಾರಿಗಳು ಆಗಮಿಸದ ಕಾರಣ ಗ್ರಾಮಸ್ಥರೇ ಮಕ್ಕಳ ಶವಗಳನ್ನು ಹೊರತೆಗೆದಿದ್ದಾರೆ.

ಹಾಗೆಯೇ ಗುತ್ತಿಗೆದಾರರ ನಿರ್ಲಕ್ಷ್ಯ ಅನಾಹುತಕ್ಕೆ ಕಾರಣವೆಂದು ಎನ್ನಲಾಗಿದೆ ಸ್ಥಳೀಯರು ಪುರಸಭೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಅರೆ ಭಾಷೆಯಲ್ಲೊಂದು ಸುಂದರ ಭಾವಗೀತೆ: ವೈರಲ್ ಆಯ್ತು ವಿನೂತನ ಪ್ರಯತ್ನ

Upayuktha

ಗಾಯಗೊಂಡ ಕೋತಿ ಆಸ್ಪತ್ರೆಗೆ ಬಂದು ಮುಲಾಮು ಹಚ್ಚಿಸಿಕೊಂಡ ವೀಡಿಯೋ ವೈರಲ್

Upayuktha

ಸ್ಥಳೀಯ ಚುನಾವಣೆಗಳಿಗೆ ಕನ್ನಡದಲ್ಲೇ ಮತದಾರ ಪಟ್ಟಿ, ಚೀಟಿ, ಸೂಚನಾಪತ್ರ ನೀಡಲು ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಮನವಿ

Upayuktha

Leave a Comment