ನಗರ ಭಾಷಾ ವೈವಿಧ್ಯ ಸಮುದಾಯ ಸುದ್ದಿ ಸ್ಥಳೀಯ

ಹವಿಗನ್ನಡ ಕಥೆಗಳ ಮೂರು ಸಂಪುಟ ಮಾ.15ಕ್ಕೆ ಬಿಡುಗಡೆ

 

ಮಂಗಳೂರು: ಕಾಂತಾವರ ಕನ್ನಡ ಸಂಘ ಮತ್ತು ವಿಶ್ವವಿದ್ಯಾಲಯ ಕಾಲೇಜು ಮಂಗಳೂರು ಕನ್ನಡ ಸಂಘದ ಆಶ್ರಯದಲ್ಲಿ ಹೊರತರುತ್ತಿರುವ ಸಂಪುಟೀಕರಣಗೊಂಡ 152 ಕಥೆಗಾರರ ಹವಿಗನ್ನಡ ಸಣ್ಣಕಥೆಗಳ ಮೂರು ಸಂಪುಟಗಳ ಬಿಡುಗಡೆ ಸಮಾರಂಭವನ್ನು ಮಾ.15ರಂದು ಸಾಯಂಕಾಲ 4 ಗಂಟೆಗೆ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಥಾಸಂಕಲನದ ಪ್ರಧಾನ ಸಂಪಾದಕ, ನಿವೃತ್ತ ಪ್ರಾಧ್ಯಾಪಕ ಡಾ.ಹರಿಕೃಷ್ಣ ಭರಣ್ಯ ಅವರು, ಹವಿಗನ್ನಡದ ಸಣ್ಣಕಥೆಗಳನ್ನು ‘ಸುರಗಿ’, ‘ಸಂಪಗೆ’, ‘ಕೇದಿಗೆ’ ಎನ್ನುವ ಮೂರು ಪ್ರತ್ಯೇಕ ಸಂಪುಟಗಳೊಂದಿಗೆ ಹೊರತರಲಾಗುತ್ತಿದೆ ಎಂದರು.

ಹವಿಗನ್ನಡದಲ್ಲಿ ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡ, ಶಿವಮೊಗ್ಗ ಎಂಬಿತ್ಯಾದಿಯಾಗಿ ಪ್ರಾದೇಶಿಕ ಪ್ರಭೇದಗಳನ್ನು ಗುರುತಿಸಲಾಗುತ್ತದೆ. ಆಯಾ ಪ್ರಭೇದಗಳ ಒಳಗೆ ಮತ್ತೆ ಸೂಕ್ಷ್ಮ ಉಪಪ್ರಭೇದಗಳೂ ಇವೆ. ಈ ಸಂಪುಟಗಳಲ್ಲಿ ಒಟ್ಟು 152 ಸಣ್ಣ ಕಥೆಗಳಿವೆ, ಈ ಎಲ್ಲಾ ಕಥೆಗಳು ವೈವಿಧ್ಯಮಯ ವಸ್ತುಗಳನ್ನು, ಕರ್ನಾಟಕದ ಹಾಗೂ ಕಾಸರಗೋಡಿನ ಸಮಗ್ರ ಹವಿಗನ್ನಡ ನುಡಿಗಳನ್ನು ಒಳಗೊಂಡಿದ್ದು, ಈ ಭಾಷೆಯ ಸಾಹಿತ್ಯ ರಚನಾ ಶಕ್ತಿಯ ಸಂಪೂರ್ಣ ಚಿತ್ರಣವನ್ನು ಕೊಡುತ್ತವೆ. ಸುಮಾರು 70 ಮಹಿಳಾ ಕಥೆಗಾರ್ತಿಯರು 80 ಪುರುಷ ಕಥೆಗಾರರು ಈ ಸಂಕಲನದ ಒಳಗಿದ್ದಾರೆ.

ಮಾತ್ರವಲ್ಲ ಕನ್ನಡದ ಸುಪ್ರಸಿದ್ಧ ವಿದ್ವಾಂಸರಾದ ಕೊಡಗಿನ ಗೌರಮ್ಮ, ದೇವಾಂಗನಾ ಶಾಸ್ತ್ರಿ, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣಭಟ್ಟ, ಕಡೆಂಗೋಡ್ಲು ಶಂಕರಭಟ್ಟ, ಭಾರತಿಸುತ, ಗಣಪತಿ ಮೊಳೆಯಾರ ಮೊದಲಾದವರ ಕತೆಗಳೂ ಇವೆ. ಜೊತೆಗೆ ಇಂದು ನಮ್ಮೊಂದಿಗಿರುವ ಅನೇಕ ಖ್ಯಾತನಾಮರ ಕಥೆಗಳು ಇಲ್ಲಿವೆ ಎಂದರು.

ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೂರು ಸಂಪುಟಗಳನ್ನು ಕ್ರಮವಾಗಿ ಲೇಖಕ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ, ಪ್ರಾಧ್ಯಾಪಕ ಡಾ.ವರದರಾಜ ಚಂದ್ರಗಿರಿ ಹಾಗೂ ಪ್ರಾಧ್ಯಾಪಕ ಡಾ.ಶ್ರೀಪತಿ ಹಳಗುಂದ ಬಿಡುಗಡೆ ಮಾಡುವರು. ಗಣಿ ಮತ್ತು ಪರಿಸರ, ಅರಣ್ಯ ಸಚಿವರ ಆಪ್ತಕಾರ್ಯದರ್ಶಿ ಕೆ.ಸಿ.ವಿರೂಪಾಕ್ಷ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಅತಿಥಿಯಾಗಿ ಆಗಮಿಸುವರು.

ನಿವೃತ್ತ ಇಂಜಿನಿಯರ್ ಹಾಗೂ ಲೇಖಕ ಕುಮಾರಸ್ವಾಮಿ ತೆಕ್ಕುಂಜ, ಕಿಶೋರ್ ಯೆನೆಕೋಡ್ಲು ಸುದ್ದಿಗೋಷ್ಠಿಯಲ್ಲಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಮರೋಡಿ: ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರಡಿ ತಾಳಿಪಾಡಿ ಪಲಾರಗೋಳಿ ಮರೋಡಿ ಪ್ರತಿಷ್ಠಾ ಕಲಶಾಭಿಷೇಕ

Sushmitha Jain

“ಮಿಲನ್ನ ಯುವ ಪ್ರತಿಭೆ” ಸಮ್ಯಕ್ತ್ ಜೈನ್ ರವರಿಗೆ ಪುರಸ್ಕಾರ

Harshitha Harish

ಮಾ.20: ನಾರಾವಿಯಲ್ಲಿ ಎ.ಸಿ ಡಾ. ಯತೀಶ್ ಉಳ್ಳಾಲ್ ಗ್ರಾಮ ವಾಸ್ತವ್ಯ

Sushmitha Jain