ಕತೆ-ಕವನಗಳು ಭಾಷಾ ವೈವಿಧ್ಯ

ಹವ್ಯಕ ಕವನ: ಅಪ್ಪನ ಮನೆಗೆ ಹೋಯೆಕ್ಕಾತು

ಅಪ್ಪನ ಮನೆಗೆ ಹೋಯೆಕ್ಕಾತು

ಸಾಂದರ್ಭಿಕ ಚಿತ್ರ (ಕೃಪೆ: ದಿ ಹಿಂದೂ ಬಿಸಿನೆಸ್ ಲೈನ್)

ಹದಿನೆಂಟು ಮಾಗಣೆ ಆಚಿಕಂಗೆ/
ಮದುವೆ ಮಾಡಿ ಕೊಟ್ಟಿದವು ಎನ್ನಪ್ಪ°/
ಸಣ್ಣಪುಟ್ಟದಕ್ಕೆಲ್ಲ ಹೋಪಲೆ ಎಡಿತ್ತೊ/

ಅತ್ತಿಗ್ಗೆ ನಾಡಿದ್ದು ಕಾಂಬಲೆ ಮಾಡುವದಾಡ/
ಹೇಂಗಪ್ಪ ಇಲ್ಲಿಂದ ಹೋಪದಾನು/
ಇವಕ್ಕೆ ಹಗಲಿರುಳು ತೋಟದ್ದೆ ಕನಸು/
ಬಿಡುನೀರು ಬಿಡುವದಾನು/
ತೋಡಿಂಗೆ ಕಟ್ಟ ಕಟ್ಟುಲೆ ಇದ್ದು/
ಕೆಲಸಕ್ಕೆ ಜನ ಕೊಡದ್ದೆ ಹೋಪಲಾವುತ್ತೊ/
ಎಡಎಡಕ್ಕಿಲ್ಲಿ ಕಳ್ಳಕೊರಮಂಗಳ ಕಾಟ/
ಇರುಳುದಿ ಆಯೆಕ್ಕಾರೆ ತೋಟ ಖಾಲಿ/

ಅಬ್ಬೆಗೆ ಸೊಂಟಬೇನೆ ಎಳಗಿದ್ದಾಡ/
ಎದ್ದು ಕೂಪಲೆ ಕೂಡ ಕಷ್ಟ ಆಡ/
ಒಂದಾರಿ ಹೋಗಿ ನೋಡೆಕ್ಕಾತು ಆನೀಗ/
ಅಬ್ಬೆಯ ಕಷ್ಟಕ್ಕಾಗದ್ದರೆ ಹೇಂಗೆ/
ಎಂತ ಮಾಡುವದಪ್ಪ ಆನೊಬ್ಬ° ಕೂದೊಂಡು/
ನಿನಗೆ ಅಲ್ಲಿಯದೇ ನೆಂಪೂಳಿ ಹೇಳುತ್ತವು/
ಹಾಂಗೊಂದು ಬೇನೆ ಮನಸಿಂಗೆ/
ಹೀಂಗೊಂದು ಬೇನೆ ಮನಸಿಂಗೆ/
ಬೇನೆ ತಿಂಬದೆ ಆಗಿ ಹೋತನ್ನೆ/

ಇನ್ನೀಗ ಮಾಡುವದೆಂತ, ಇಂದಿರುಳು/
ಮನುಗುವಗ ಹೇಳಿಯೇ ಬಿಡುದು/
ನಾಳಂಗೆ ಅಪ್ಪನ ಮನೆಗೆ ಹೋಯೆಕಡ/
ಅತ್ತಿಗ್ಗೆ ಕಾಂಬಲೆ ಮಾಡ್ಲಿದ್ದಾಡ/

– ಡಾ. ವಸಂತಕುಮಾರ ಪೆರ್ಲ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕವನ: ನಾನೆಂಬುದೇನಿಹುದು..??

Upayuktha

ಕವನ: ಬಣ್ಣಬಣ್ಣದ ಬದುಕು

Upayuktha

ಕವನ: ಸಂಭ್ರಮದ ಮೋಕಳೀಕು

Upayuktha