ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಸಭಾ ವತಿಯಿಂದ ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಜ.19ರ ಭಾನುವಾರದಂದು ಹವ್ಯಕ ಬಾಂಧವರಿಗಾಗಿ ಒಂದು ದಿನದ ಪಿಕ್ನಿಕ್ ಆಯೋಜಿಸಲಾಗಿದೆ.
‘ಹವ್ಯಕ ಯಾನ’ ಹೆಸರಿನ ಈ ವಿಶಿಷ್ಟ ಕಾರ್ಯಕ್ರಮವನ್ನು- ಹವ್ಯಕರೆಲ್ಲ ಒಂದೆಡೆ ಸೇರಿ ದಿನಪೂರ್ತಿ ಕಳೆಯಲು, ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ಮನಸ್ಸು ಹಗುರವಾಗಿಸಲು, ಸುತ್ತಮುತ್ತಲಿನ ಆಕರ್ಷಣೀಯ ತಾಣಗಳನ್ನು ವೀಕ್ಷಿಸಲು, ಸಾಮಾನ್ಯ ಜ್ಞಾನವೃದ್ಧಿಗಾಗಿ, ಮೆದುಳಿಗೆ ಮೇವು ನೀಡಲು, ಊಟ ತಿಂಡಿ ಆಟ ಪಾಠ ಓಟ ಬಂಡಿ ನೆನಪಿಸಲು, ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಸಂತಸದಿಂದ ಕುಣಿದಾಡಲು, ಎಲ್ಲರ ನಡುವೆ ಒಲವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಏರ್ಪಡಿಸಲಾಗುತ್ತಿದೆ.
ಆಸಕ್ತರು ಜ.10ರ ಬಳಿಕ ಮಹಾಸಭೆ ಕಾರ್ಯಾಲಯದಿಂದ ಹೆಚ್ಚಿನ ವಿವರ ಪಡೆಯಬಹುದು ಎಂದು ಮಹಾಸಭಾದ ಪ್ರಕಟಣೆ ತಿಳಿಸಿದೆ. ಹೆಸರು ನೋಂದಾಯಿಸಲು ಜ.11 ಕಡೆಯ ದಿನವಾಗಿದ್ದು ಸಂಜೆ 6 ಗಂಟೆಯ ಒಳಗೆ ನೋಂದಾಯಿಸಿಕೊಳ್ಳಬೇಕೆಂದು ಮಹಾಸಭಾದ ಸಂಚಾಲಕ ಶಂಕರ್ ಎಸ್ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಸಿಎ ವೇಣು ವಿಘ್ನೇಶ ಸಂಪ ಅವರ ಪ್ರಕಟಣೆ ಕೋರಿದೆ.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ