ದೇಶ-ವಿದೇಶ ಪ್ರಮುಖ

ಪ್ರತಿಯೊಬ್ಬ ಭಾರತೀಯರಿಗೂ ಆರೋಗ್ಯ ಐಡಿ: ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಶನ್ ಘೋಷಿಸಿದ ಪ್ರಧಾನಿ

ನವದೆಹಲಿ: ಪ್ರತಿಯೊಬ್ಬ ಭಾರತೀಯರಿಗೂ ಆರೋಗ್ಯ ಐಡಿಯನ್ನು ಕಲ್ಪಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಶನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.

74ನೇ ಸ್ವಾತಂತ್ರೋತ್ಸವದ ಪ್ರಯುಕ್ತ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ವೇಳೆ ಈ ಪ್ರಕಟಣೆಯನ್ನು ಅವರು ಮಾಡಿದ್ದಾರೆ.

ಇಂದಿನಿಂದ ದೇಶದಲ್ಲಿ ಹೊಸ ಅಭಿಯಾನ ಆರಂಭಗೊಳ್ಳಲಿದೆ. ಅದುವೇ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಶನ್. ಸಂಪೂರ್ಣ ತಂತ್ರಜ್ಞಾನ ಆಧಾರಿತ ಈ ಉಪಕ್ರಮವು ದೇಶದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ. ಇದರಡಿಯಲ್ಲಿ ಭಾರತದ ಪ್ರತಿ ನಾಗರಿಕನೂ ಈ ಆರೋಗ್ಯ ಕಾರ್ಡ್ ಪಡೆಯಲಿದ್ದು, ಅದು ಆತನ /ಆಕೆಯ ವೈದ್ಯಕೀಯ ಸ್ಥಿತಿಗಳ ಕುರಿತು ಎಲ್ಲಾ ಪ್ರಸ್ತುತ ಮಾಹಿತಿಯನ್ನು ಒಳಗೊಂಡಿರಲಿದೆ. ಪ್ರತಿ ಬಾರಿ ವೈದ್ಯರನ್ನು ಭೇಟಿ ಮಾಡಿದಾಗ ಅಥವಾ ಔಷಧಾಲಯಕ್ಕೆ ಹೋದಾಗ, ವೈದ್ಯರ ಅಪಾಯಿಂಟ್‌ಮೆಂಟ್‌ನಿಂದ ತೊಡಗಿ ಔಷಧೋಪಚಾರದ ತನಕ ಈ ಪ್ರತಿಯೊಂದು ವಿವರವೂ ಈ ಕಾರ್ಡ್‌ನಲ್ಲಿ ದಾಖಲಾಗಲಿದೆ. ಆರೋಗ್ಯ ಸೇವೆಗಳು ಮತ್ತು ಔಷಧಗಳನ್ನು ಪಡೆಯಲು ಈ ಕಾರ್ಡ್ ಅನ್ನು ಉಪಯೋಗಿಸಬಹುದು ಎಂದು ಪ್ರಧಾನಿ ವಿವರಿಸಿದರು

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ (ಎಬಿ ಪಿಎಂ-ಜೆಎವೈ)ದ ಅಡಿಯಲ್ಲಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಶನ್ (ಎನ್‌ಡಿಎಚ್ಎಂ) ಬರಲಿದೆ. ಇದು ದೇಶದ ಆರೋಗ್ಯ ಸೇವೆಯಲ್ಲಿ ದಕ್ಷತೆ, ಪರಿಣಾಮಕಾರಿತ್ವ ಹಾಗೂ ಪಾರದರ್ಶಕತೆಯನ್ನು ತರುವ ನಿರೀಕ್ಷೆಯಿದೆ ಎಂದು ಸರ್ಕಾರ ಹೇಳಿದೆ.

ಟೆಲಿ ಕನ್ಸಲ್ಟೇಶನ್ ಮತ್ತು ಇ-ಫಾರ್ಮಸಿಗಳ ಮೂಲಕವೂ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಲು ಎನ್‌ಡಿಎಚ್ಎಂ ಅವಕಾಶ ಮಾಡಿಕೊಡಲಿದೆ.
ಈ ಯೋಜನೆಯಡಿ ಪ್ರತಿ ರೋಗಿಗೆ ನೀಡಲಾಗುವ ಐಡಿ ಕಾರ್ಡ್‌ನಲ್ಲಿ ವೈದ್ಯರ ಶಿಫಾರಸು, ಡಯಾಗ್ನೋಸ್ಟಿಕ್ ವರದಿಗಳು ಮತ್ತು ಡಿಸ್ಚಾರ್ಚ್ ಸಾರಾಂಶದಂತಹ ಗೌಪ್ಯ ವೈದ್ಯಕೀಯ ವಿವರವು ದಾಖಲಾಗಿರುತ್ತದೆ.

ಸಮಾಲೋಚನೆ ಅಥವಾ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ವೈದ್ಯರು ಅಥವಾ ಆರೋಗ್ಯಸೇವಾದಾತರ ಬಳಿ ಹೋದಾಗ ಅವರಿಗೆ ಒಂದು ಬಾರಿಗೆ ಈ ಮಾಹಿತಿ ಲಭ್ಯವಾಗುತ್ತದೆ. ದತ್ತಾಂಶದ ಗೌಪ್ಯತೆಯ ಕುರಿತು ವ್ಯಕ್ತವಾಗಿರುವ ಭಯಕ್ಕೆ ಸ್ಪಷ್ಟೀಕರಣ ನೀಡಿರುವ ಸರ್ಕಾರ, ವೈದ್ಯರಿಗೆ ಕೇವಲ ಸೀಮಿತ ಅವಧಿಗಷ್ಟೇ ಈ ವಿವರಗಳು ಲಭ್ಯವಾಗಲಿವೆ ಎಂದಿದೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

100ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಕಝಕಿಸ್ತಾನ ವಿಮಾನ ದುರಂತ: 12 ಸಾವು

Upayuktha

ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ ಪ್ರಕರಣ: ಒಬ್ಬ ವ್ಯಕ್ತಿಯ ಬಂಧನ

Upayuktha

ಪ್ರಧಾನಿ ಮೋದಿ ಅವರ 61ನೇ ಮನ್‌ ಕೀ ಬಾತ್ ಮುಖ್ಯಾಂಶಗಳು

Upayuktha

Leave a Comment

error: Copying Content is Prohibited !!