ಆರೋಗ್ಯ ಪ್ರಮುಖ ರಾಜ್ಯ

ಲಸಿಕೆ ಅಲಭ್ಯ ಮೇ 1 ರಿಂದ ಆರಂಭವಾಗಬೇಕಿದ್ದ ಲಸಿಕೆ ಅಭಿಯಾನ ಪ್ರಾರಂಭ ಅಸಾಧ್ಯ

ಬೆಳ್ತಂಗಡಿ: ಮೇ 1 ರಿಂದ ಆರಂಭವಾಗಬೇಕಿದ್ದ ಲಸಿಕೆ ಆರಂಭವಾಗುತ್ತಿಲ್ಲ. 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬಾರದು ಹಾಗೂ ಮುಂದಿನ ದಿನಾಂಕವನ್ನು ಅಧಿಕೃತವಾಗಿ ತಿಳಿಸಲಾಗುವುದು ಎಂದು  ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ್ ಅವರು ಮನವಿ ಮಾಡಿದ್ದಾರೆ.

ಮೇ 1 ರಿಂದ ಅಂದರೆ ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯಾಂದ್ಯತ ಎ.28 ರಿಂದಲ್ಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿತ್ತು.

ಆದರೆ ಇದೀಗ  1 ಕೋಟಿ ಕೋವಿ ಶೀಲ್ಡ್ ಗೆ 400 ಕೋಟಿ ಕೊಟ್ಟು ಆರ್ಡರ್ ಮಾಡಿದ್ದೇವೆ. ಕಂಪೆನಿಗಳು ಯಾವಾಗ ಕೊಡುತ್ತೆ ಅಂತ ಇದುವರೆಗೆ ನಮಗೆ ಮಾಹಿತಿ ಬಂದಿಲ್ಲ, ಕಂಪೆನಿಯವರು ಅಧಿಕೃತ ಮಾಹಿತಿ ಹಂಚಿಕೊಂಡ ನಂತರ ಲಸಿಕೆ ಯಾವ ವಾರದಿಂದ ಸಿಗುತ್ತೆ ಅಂತ ಹೇಳುತ್ತೇವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಆದರೆ ಹಿಂದಿನಂತೆ 45 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ನೀಡುತ್ತಿರುವ ಲಸಿಕೆ ವಿತರಣ ಕಾರ್ಯಕ್ರಮ ಎಂದಿನಂತೆ ಮುಂದುವರಿಯಲಿದ್ದು, ಎಲ್ಲರಿಗು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

Related posts

ಉಪಸಮರಕ್ಕೆ ಮತ್ತೆ ಕೂಡಿಬಂತು ಮುಹೂರ್ತ: ಡಿ.5ಕ್ಕೆ ಚುನಾವಣೆ, 11ಕ್ಕೆ ಫಲಿತಾಂಶ

Upayuktha

ಕೊರೊನಾ ವಿರುದ್ಧ ಸಮರ: 1.70 ಲಕ್ಷ ಕೋಟಿ ರೂ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Upayuktha

ಉಡುಪಿ ಜಿಲ್ಲೆಗೆ ಇನ್ಪೋಸಿಸ್ ಫೌಂಡೇಶನ್‌ನಿಂದ 2 ನೇ ಹಂತದಲ್ಲಿ 28.75 ಲಕ್ಷದ ನೆರವು

Upayuktha