ಆರೋಗ್ಯ ಮನೆ ಮದ್ದು

ಕಾಯಿಲೆ ಬಾರದಂತೆ ತಡೆಗಟ್ಟುವುದೇ ಜಾಣತನ

ಕಾಯಿಲೆ ಬಂದ ಬಳಿಕ ಚಿಂತಿಸುವ ಬದಲು ಬಾರದಂತೆ ತಡೆಗಟ್ಟುವುದೇ ಜಾಣತನ. ಹಾಗಾಗಿ ರೋಗಗಳು ಬಾರದಂತೆ ತಡೆಯಲು ಅಗತ್ಯವಾದ ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಆಹಾರ ಸೇವನೆ ಅತೀ ಅಗತ್ಯ. ಇದಕ್ಕೆ ಸಾತ್ವಿಕ ಆಹಾರ ಸೇವನೆ ಪೂರಕ.

– ಒಂದು ಚಮಚ ಬೆಲ್ಲದ ತುರಿಗೆ ಒಂದು ಚಿಟಿಕೆ ಕಾಳುಮೆಣಸಿನಪುಡಿ ಮಿಶ್ರ ಮಾಡಿ ಸೇವಿಸಿದರೆ ಹೊಟ್ಟೆನೋವು ಶಮನವಾಗುವುದು.
– ಒಂದು ಚಮಚ ಬೆಲ್ಲ ತುರಿಗೆ ಚಿಟಿಕೆ ಅರಿಶಿನ ಹುಡಿ ಸೇರಿಸಿ ಸೇವಿಸಿದರೆ ಒಣಕೆಮ್ಮು ನಿವಾರಣೆಯಾಗುವುದು.
– ಒಂದು ಕಪ್ ತೆಂಗಿ ಎಣ್ಣೆಗೆ ಒಂದು ಚಮಚ ನಿಂಬೆರಸ, ಒಂದು ಚಮಚ ಸುಣ್ಣದ ತಿಳಿ ನೀರು ಸೇರಿಸ ಚೆನ್ನಾಗಿ ಮಿಶ್ರ ಅದನ್ನು ಪ್ರತಿ ದಿನ ರಾತ್ರಿ ತಲೆಗೆ ಹಚ್ಚಿ ಕೂದಲು ಉದುರುವಿಕೆ, ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುವುದು.

– ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ತಿಂದರೆ ಜೀರ್ಣಶಕ್ತಿ ಹೆಚ್ಚುವುದು.
– 48 ದಿನಗಳ ಕಾಲ ಪ್ರತಿದಿನ ಊಟದ ಜತೆ ಹಲವು ದಿನಗಳವರೆಗೆ ಪ್ರತಿನಿತ್ಯ ಹಸಿ ಈರುಳ್ಳಿಯನ್ನು ತಿಂದರೆ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.
– ಒಂದು ಲೋಟ ನೀರಿಗೆ ಎರಡು ಚಮಚ ಮೆಂತೆ ಕಾಳುಗಳನ್ನು ರಾತ್ರಿಯಿಡೀ ನೆನೆಸಿಟ್ಟು, ಬೆಳಿಗ್ಗೆ ಇದನ್ನು ಸೋಸಿಕೊಂಡು ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ, ಆರೋಗ್ಯ ವೃದ್ಧಿಸುವುದು.

-ಖಾಲಿ ಹೊಟ್ಟೆಗೆ ಒಂದು ತಿಂಗಳ ಕಾಲ ಮೆಂತೆ ನೆನೆಸಿದ ನೀರನ್ನು ಕುಡಿದರೆ ಕಿಡ್ನಿಯಲ್ಲಿರುವ ಕಲ್ಲುಗಳನ್ನು ಹೊರಹಾಕುವುದು.
– ನೆನೆಸಿದ ಮೆಂತೆಯನ್ನು ಸ್ವಲ್ಪ ತಿನ್ನುವುದು ಮತ್ತು ನೆನೆಸಿದ ನೀರನ್ನು ಕುಡಿಯುವುದರಿಂದ ಹಸಿವು ಕಡಿಮೆ.
– ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದು ಹಾಕಿ ತೂಕ ಕಳೆದುಕೊಳ್ಳಲು ಮೆಂತೆ ಸಹಕಾರಿ.
– ಸಂಧಿವಾತದ ನೋವನ್ನು ನಿವಾರಿಸುವ ಶಕ್ತಿ ಮೆಂತೆ ನೀರಿಗಿದೆ.
– ಮೆಂತೆ ನೀರು ಸೇವನೆಯಿಂದ ಹೊಟ್ಟೆ ಉರಿ ಶಮನವಾಗಿ ಜೀರ್ಣಕ್ರಿಯೆ ಸರಾಗವಾಗುವುದು.
ಮಧುಮೇಹ ನಿಯಂತ್ರಣದಲ್ಲಿಡುವ ಶಕ್ತಿ ಮೆಂತೆಗಿದೆ.
– ಮೆಂತೆಯಲ್ಲಿರುವ ಗ್ಲಾಕ್ಟೊಮನ್ನನ್ ಮತ್ತು ಪೊಟಾಶಿಯಂ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.

ಅಡುಗೆ ಟಿಪ್ಸ್
-ಹಿಟ್ಟಿಗೆ ಸ್ವಲ್ಪ ರವೆ ಮಿಶ್ರ ಮಾಡಿದರೆ ಪೂರಿ ಗರಿಗರಿಯಾಗುವುದು.
-ಬೇಳೆ ಬೇಯಿಸುವ ಮೊದಲು ಸ್ವಲ್ಪ ಹುರಿದರೆ ಬೇಳೆಯ ಸ್ವಾದ ಹೆಚ್ಚುವುದು.
-ಇಡ್ಲಿ ಹಿಟ್ಟಿಗೆ ಸ್ವಲ್ಪ ಅನ್ನ ಬೆರೆಸಿದರೆ ಮೃದುವಾಗುವುದು.
-ಬಿಸಿ ನೀರು, ಒಂದು ಕಪ್ ಹಾಲು ಬಳಸಿ ಹಿಟ್ಟು ತಯಾರಿಸಿದರೆ ರೊಟ್ಟಿ ಮೃದುವಾಗುವುದು.
– ಸಿಹಿ ತಿಂಡಿಗಳನ್ನು ತಯಾರಿಸಲು ಸಕ್ಕರೆ ಕರಗಿಸಿ ಪಾಕ ಮಾಡಿದ ಬಳಿಕ ಸ್ವಲ್ಪ ನಿಂಬೆ ಹಣ್ಣಿನ ರಸ ಹಿಂಡಿದರೆ ಅದು ಹರಳುಗಟ್ಟುವುದಿಲ್ಲ.

Related posts

ಸರ್ಪಸುತ್ತು: ಏನಿದರ ಮರ್ಮ? ಚಿಕಿತ್ಸೆ ಹೇಗೆ, ಲಸಿಕೆ ಇದೆಯೇ…?

Upayuktha

ಇರುವುದೊಂದೇ ಹೃದಯ ಜೋಪಾನ, ಇರಲಿ ಅದರ ಕಡೆ ಗಮನ

Upayuktha

ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ವ್ಯಾಯಾಮ

Upayuktha

Leave a Comment

error: Copying Content is Prohibited !!