ಆರೋಗ್ಯ ಲೇಖನಗಳು

ಉಗುರಿನ ಆರೋಗ್ಯ, ದೇಹದ ಆರೋಗ್ಯದ ಸಂಕೇತ

ಅಂದವಾದ ಉಗುರು ಆರೋಗ್ಯದ ಸಂಕೇತ. ಈ ಉಗುರುಗಳಲ್ಲಿ ಬಣ್ಣ, ಆಕಾರ, ಗಾತ್ರ ಎಲ್ಲವೂ ಒಬ್ಬರಿಂದೊಬ್ಬರಿಗೆ ವ್ಯತ್ಯಾಸ ಇರುವುದು ಸಹಜ. ಆರೋಗ್ಯವಂತ ಉಗುರಿಗೆ ಕ್ಯಾಲ್ಶಿಯಂ, ಕಬ್ಬೀಣದ ಅಂಶ ಮತ್ತು ವಿಟಮಿನ್‌ಗಳು ನಮ್ಮ ದೇಹಕ್ಕೆ ಆಹಾರದ ಮೂಲಕ ಸರಿಯಾದ ಪ್ರಮಾಣದಲ್ಲಿ ಸಿಗಬೇಕು. ನಮ್ಮ ದೇಹದೊಳಗಿನ ಕಾಯಿಲೆಯನ್ನು ಉಗುರನ್ನು ನೋಡಿದ ಕೂಡಲೇ ತಿಳಿದುಕೊಳ್ಳಬಹುದು.

ಉಗುರು ಕಚ್ಚುವ ಅಭ್ಯಾಸವು ಮಕ್ಕಳಲ್ಲಿ ಬಹಳ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಉಗುರು ಕಚ್ಚುವ ಅಭ್ಯಾಸದ ಮುಖ್ಯ ಕಾರಣ ಭಾವನಾತ್ಮಕ ಅಥವಾ ಮಾನಸಿಕ ಒತ್ತಡ. ಆತಂಕದ ಭಾವನೆಯನ್ನು ನಿಭಾಯಿಸಲು ಮಕ್ಕಳು ಹೆಚ್ಚಾಗಿ ಉಗುರನ್ನು ಕಚ್ಚುತ್ತಾರೆ.

ಉಗುರು ಕಚ್ಚುವುದರಿಂದ ಹಲ್ಲಿನ ಇನಾಮಲ್‌ ಪದರವು ಸವೆದು ಹೋಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ದಂತ ಸಂವೇದನೆಗೆ ಕಾರಣವಾಗಬಹುದು. ವಸಡಿಗೆ ಕೂಡ ತೊಂದರೆಯಾಗಬಹುದು. ಉಗುರು ಕಚ್ಚುವ ಅಭ್ಯಾಸ ಬಾಯಿಯ ಮೂಲಕ ಬ್ಯಾಕ್ಟೀರಿಯಾಗಳು ಹೊಟ್ಟೆಗೆ ಪ್ರವೇಶಿಸಿ ಸೋಂಕು ಅಥವಾ ಇನ್‌ಫೆಕ್ಷನ್‌ಗೆ ಕಾರಣವಾಗಬಹುದು.

ಉಗುರುಗಳನ್ನು ಕ್ತರಿಸುವುದು ಒಳ್ಳೆಯ ಅಭ್ಯಾಸವಾಗಿದೆ. ಅನಿಯಮಿತವಾಗಿ/ ಆಳವಾಗಿ ಕತ್ತರಿಸುವುದರಿಂದ ಉಗುರು ಮತ್ತು ಉಗುರಿನ ಹತ್ತಿರದ ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಉಗುರಿನ ಹತ್ತಿರದ ಚರ್ಮ ಅದರ ಮೇಲೆ ಬೆಳೆದು, ಉಗುರಿನ ಬೆಳವಣಿಗೆಗೆ ತೋಂದರೆಯಾಗಬಹುದು.

ಲಕ್ಷಣಗಳು:
– ಉಗುರಿನ ಬೆಳವಣಿಗೆಯಲ್ಲಿ ಅಸಮತೋಲನ.
– ಆಕಾರ ಬದಲಾವಣೆ.
– ಸೋಂಕು/ ಫಂಗಲ್‌ ಇನ್‌ಫೆಕ್ಷನ್‌ (Fungal Infection)
– ಪಾರೋನೈಶಿಯಾ (Paronychia)

ಸಾಮಾನ್ಯವಾಗಿ ಕಾಲು ಅಥವಾ ಕೈ ಉಗುರಿನಲ್ಲಿ ಕಾಣಿಸಿಕೊಳ್ಳುವ  ʼಉಗುರುಸುತ್ತುʼ ಸಮಸ್ಯೆಯನ್ನು ಸ್ವಚ್ಛತೆ ಕಾಪಾಡುವುದರಿಂದ ಗುಣಪಡಿಸಬಹುದು.

-ಡಾ|| ರಶ್ಮಿ ಭಟ್‌, ಮಂಗಳೂರು

Related posts

ಆಯುರ್ವೇದದ ವಿಶೇಷ ಚಿಕಿತ್ಸೆ- ‘ಪಂಚಕರ್ಮ’

Upayuktha

ಡಿ.1: ಮಹಾಮಾರಿಯ ಜಾಗೃತಿ ಮೂಡಿಸುವ ‘ವಿಶ್ವ ಏಡ್ಸ್‌ ದಿನ’

Upayuktha

ರಾಷ್ಟ್ರೀಯ ದಂತ ವೈದ್ಯರ ದಿನ- ಮಾರ್ಚ್ 6: ನಿಮ್ಮ ಮೊಗದಲ್ಲಿ ನಗು ಅರಳಿಸುವ ದಂತ ವೈದ್ಯರಿಗೊಂದು ಶುಭಾಶಯ ಹೇಳಿ…

Upayuktha