ಜಿಲ್ಲಾ ಸುದ್ದಿಗಳು ಪ್ರಮುಖ ಹವಾಮಾನ- ಭೂವಿಜ್ಞಾನ

ಕರಾವಳಿಯಾದ್ಯಂತ ಮುಂದುವರಿದ ಭಾರೀ ಗಾಳಿ, ಮಳೆ: ಹಲವೆಡೆ ಹಾನಿ

ಮಂಗಳೂರು: ಕರಾವಳಿಯಾದ್ಯಂತ ಮಂಗಳವಾರವು ಭಾರೀ ಮಳೆ ಮುಂದುವರಿದ್ದು, ಹಲವೆಡೆ ಗಾಳಿ, ಮಳೆಗೆ ಹಾನಿ ಸಂಭವಿಸಿದೆ.

ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವುದರಿಂದ ನೆರೆ ಬಂದು ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ. ದ.ಕ. ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳ ವಿವಿಧೆಡೆ ಗಾಳಿ ಮಳೆಗೆ ಅಪಾರ ನಾಶ-ನಷ್ಟ ಉಂಟಾಗಿದೆ. ಸುಳ್ಯ ತಾಲೂಕಿನ ತೊಡಿಕಾನದಲ್ಲಿ ಸೋಮವಾರದಿಂದಲ್ಲೇ ಗಾಳಿ, ಮಳೆಯಾಗುತ್ತಿದ್ದು, ಹಲವು ಅಡಿಕೆ ಮರಗಳು ಸಹಿತ ವಿವಿಧ ಜಾತಿಯ ಮರಗಳು ಮುರಿದು ಬಿದ್ದು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಪೆಲ್ಪಾರಿನಲ್ಲಿ ಅಡಿಕೆ, ತೆಂಗಿನ ಮರಗಳಿಗೆ ಹಾನಿಯಾಗವೆ. ಎಣ್ಮೂರಿನಲ್ಲಿ ಮಂಗಳವಾರ ಸಂಜೆ ವೇಳೆ ಭಾರೀ ಗಾಳಿ ಸಹಿತ ಮಳೆ ಸುರಿದ್ದು, ಬೆಳ್ಳಾರೆ ಸಮೀಪದ ಕಲ್ಮಡ್ಕದಲ್ಲಿ ಗಾಳಿ, ಮಳೆಗೆ ರಬ್ಬರ್ ಮರಗಳಿಗೆ ಹಾನಿಯಾಗಿವೆ.

ಮಂಗಳೂರಿನ ಬೋಳೂರಿನಲ್ಲಿ ಮಂಗಳವಾರ ಬೃಹತ್ ಮರ ಬಿದ್ದು 4 ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ.

ಕಾಸರಗೋಡು ಜಿಲ್ಲೆಯ ವಿವಿಧೆಡೆ ಕೂಡ ಗಾಳಿ, ಮಳೆಯಾಗಿದ್ದು, ಮಾಯಿಪ್ಪಾಡಿಯಲ್ಲಿ ಸೋಮವಾರ ರಾತ್ರಿ ಬೀಸಿದ ಗಾಳಿಗೆ ಹಲವು ಅಡಿಕೆ ಮರಗಳು ಮುರಿದು ಬಿದ್ದವೆ. ಮಂಗಳವಾರ ಸಂಜೆ ಮಾಯಿಪ್ಪಾಡಿ, ಏತಡ್ಕ, ಪೆರ್ಲ, ಬದಿಯಡ್ಕ, ಏಳ್ಕಾನ, ನೀರ್ಚಾಲು, ಕುಂಬಳೆ ಮತ್ತಿತರ ಪ್ರದೇಶಗಳಲ್ಲಿ ಮತ್ತೆ ಗಾಳಿ ಸಹಿತ ಮಳೆ ಸುರಿದಿದೆ. ಇದೇ ವೇಳೆ ಕೆಲವೆಡೆ ವಿದ್ಯುತ್ ಕಡಿತ ಉಂಟಾಗಿ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ಭಾರೀ ಮಳೆಯಾಗಿದ್ದು, ನದಿ, ಹಳ್ಳ, ಹೊಳೆಗಳು ತುಂಬಿ ಹರಿಯಲಾರಂಭಿಸಿವೆ. ಬ್ರಹ್ಮಾವರ ಸಮೀಪದ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನಕ್ಕೆ ಕುಬ್ಜಾ ನದಿ ನೀರು ನುಗ್ಗಿದೆ. ಉಡುಪಿ, ಮಣಿಪಾಲ ಸಹಿತ ಜಿಲ್ಲೆಯ ವಿವಿಧೆಡೆ ಸಂಜೆಯ ವೇಳೆ ಭಾರೀ ಮಳೆ ಸುರಿದಿದೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಪತ್ರ ಬರೆಯಿರಿ, 50,000 ರೂ ಬಹುಮಾನ ಗೆಲ್ಲಿ

Upayuktha

ಕೋವಿಡ್-19 ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು 19 ಸಲಹೆಗಳು

Upayuktha

ಬೆಂಗಳೂರು ಹೊರವಲಯದಲ್ಲಿ ಕಾರು ಅಪಘಾತ: ಮಂಜೇಶ್ವರ ಮೂಲದ ಮೂವರ ದಾರುಣ ಸಾವು

Upayuktha

Leave a Comment

error: Copying Content is Prohibited !!