ರಾಜ್ಯ

ರಾಜ್ಯ ದಲ್ಲಿ ಭಾರೀ ಮಳೆಯಾಗಲಿದೆ; ಹವಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಕೆಲ ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

(ಚಿತ್ರ ಕೃಪೆ: ಇಂಡಿಯಾ ಟಿವಿ ನ್ಯೂಸ್)

ಈಗಾಗಲೇ ಉತ್ತರ ಕರ್ನಾಟಕ ಸೇರಿ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿದು ಅನಾಹುತ ಸೃಷ್ಟಿಯಾಗಿದೆ. ಈ ಜೊತೆಗೆ ಮತ್ತೆ ಹವಾಮಾನ ಇಲಾಖೆ ಎಚ್ಚರಿಕೆ ಸೂಚನೆ ನೀಡಿದೆ.

ಹಾಗೆಯೇ ಅಕ್ಟೋಬರ್ 26 ರಿಂದ 30 ರವರೆಗೆ ದಕ್ಷಿಣ ಒಳನಾಡಿನ ಹಲವಾರು ಭಾಗಗಳಲ್ಲಿ ಭಾರಿ‌ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಇದೀಗ ಬೆಂಗಳೂರು ನಗರದಲ್ಲಿ ಕೂಡ ಭಾರೀ ಮಳೆ ಸುರಿಯುತ್ತಿದ್ದು, ಅಕ್ಟೋಬರ್ 26 ಹಾಗೂ 27 ರಂದು ಕೆಲವು ಕಡೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.

Related posts

ಸಿಎಂ ಯಡಿಯೂರಪ್ಪ ಮೊಮ್ಮಗಳ ಮದುವೆ ಸಂಭ್ರಮ

Harshitha Harish

ಹಣಕಾಸು ವಿಚಾರಕ್ಕೆ ಇಬ್ಬರು ಯುವಕರ ಜಗಳವಾಡಿ ; ಓರ್ವ ಕೊಲೆ

Harshitha Harish

ರಾಜ್ಯ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮುನ್ನಡೆ ಸಾಧಿಸಿದ ಆಳ್ವಾಸ್

Upayuktha