ನಗರ ಸ್ಥಳೀಯ

ವಾರಸುದಾರರ ಪತ್ತೆಗೆ ಮನವಿ

ಉಡುಪಿ: ಪೆರ್ಡೂರು ಸಾರ್ವಜನಿಕ ಸ್ಥಳದಲ್ಲಿ, ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದಿದ್ದ ಅಪರಿಚಿತ ಯುವಕನನ್ನು 108 ಅಂಬುಲೆನ್ಸ್ ವಾಹನದ ಸಿಬ್ಬಂದಿಗಳು, ಕಳೆದ ಮಾರ್ಚ್ 18- ರಂದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು. ಈಗ ರೋಗಿ ಗುಣಮುಖನಾದರೂ ಸಂಬಂಧಿಕರು ಬಾರದೆ ಇರುವುದರಿಂದ, ಆಸ್ಪತ್ರೆಯಲ್ಲಿ ಕಳೆದ ಹತ್ತು ತಿಂಗಳುಗಳಿಂದ, ಅಸಹಾಯಕನಾಗಿ ದಿನಗಳ ಕಳೆಯುತ್ತಿರುವುದು ಕಂಡುಬಂದಿದೆ.

ಯುವಕನಿಗೆ ಸುಮಾರು 25 ವರ್ಷ ಪ್ರಾಯ ಅಂದಾಜಿಸಲಾಗಿದೆ. ಮಾತನಾಡದೆ ಇರುವುದರಿಂದ ಹೆಸರು- ವಿಳಾಸ ತಿಳಿದು ಬಂದಿಲ್ಲ. ಶಿವಮೊಗ್ಗ ಜಿಲ್ಲೆಯ ನಿವಾಸಿ ಎಂದು ಶಂಕಿಸಲಾಗಿದೆ. ಯುವಕನ ಸಂಬಂಧಿಕರು ತುರ್ತಾಗಿ ಉಡುಪಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಕೋರಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಮಣಿಪಾಲ: ಮರಗಳ ಹತ್ಯೆಗೆ ನಾಗರಿಕ ಸಮಿತಿ ಖಂಡನೆ, ಕಾನೂನು ಕ್ರಮಕ್ಕೆ ಆಗ್ರಹ

Upayuktha

ವೀರರಾಣಿ ಅಬ್ಬಕ್ಕ ಉತ್ಸವ 2020: ಯಶಸ್ವೀ ಸಂಪನ್ನ

Upayuktha

ಗೃಹರಕ್ಷಕ ದಳ ಕಚೇರಿಯಲ್ಲಿ ಮೇ 8ಕ್ಕೆ ರಕ್ತದಾನ ಶಿಬಿರ

Upayuktha