ಜಿಲ್ಲಾ ಸುದ್ದಿಗಳು

ಉಡುಪಿ: ಈ ಅಸಹಾಯಕರ ಸಂಬಂಧಿಕರ ಪತ್ತೆಗೆ ಮನವಿ

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಎಂಟು ರೋಗಿಗಳು, ಗುಣಮುಖರಾದರೂ, ಮನೆಗೆ ಹೋಗಲು ಸಂಬಂಧಿಕರು ಬಾರದೆ, ಆಸ್ಪತ್ರೆಯಲ್ಲಿ ಅಸಹಾಯಕರಾಗಿ ದಿನಗಳ ಕಳೆಯುತ್ತಿದ್ದು, ಅವರೆಲ್ಲರೂ ಮನೆ ಸೇರಲು, ಮನೆ ಮಂದಿಯ ಬರುವಿಕೆಯ ನೀರಿಕ್ಷೆಯಲ್ಲಿ ಇದ್ದಾರೆ.

ಗುಣಮುಖ ರೋಗಿಗಳಲ್ಲಿ ಐವರು ವೃದ್ಧರು, ಈರ್ವರು ವೃದ್ಧೆಯರು, ಓರ್ವ ಯುವಕ ಇರುವುದು ಕಂಡು ಬಂದಿದೆ. ವಿಷಯ ತಿಳಿದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಸ್ಪತ್ರೆಗೆ ಭೇಟಿ ನೀಡಿ, ಎಲ್ಲಾ ರೋಗಿಗಳ ಯೋಗಕ್ಷೇಮ ವಿಚಾರಿಸಿ, ವಿಳಾಸವನ್ನು ಕಲೆ ಹಾಕಿದ್ದು, ರೋಗಿಗಳ ವಾರಸುದಾರರು- ಸಂಬಂಧಿಕರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೆಂದ್ರವನ್ನು ಸಂಪರ್ಕಿಸಲು ಸೂಚಿಸಿದ್ದಾರೆ.

ಇವರೆಲ್ಲರೂ ಸಾರ್ವಜನಿಕ ಸ್ಥಳಗಳಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಾಗ, ಸಮಾಜಸೇವಕರು ಹಾಗೂ 108 ಅಂಬುಲೇನ್ಸ್ ಜೀವರಕ್ಷಕ ವಾಹನದವರು ಆಸ್ಪತ್ರೆಗೆ ದಾಖಲುಪಡಿಸಿರುವ ಅಪರಿಚಿತ ರೋಗಿಗಳೆಂದು ತಿಳಿದು ಬಂದಿದೆ.

ಗುಣಮುಖ ರೋಗಿಗಳು:- 1) ನಾಗಪ್ಪ ಸಫಲಿಗ (ವ 80) ತಂದೆ ರಾಮ ಮೇಸ್ತ್ರಿ, ಕುಂಜಿಬೆಟ್ಟು- ಉಡುಪಿ.

2) ಸುರೇಶ್ ಮೆಂಡನ್ (60ವ) ತಂದೆ ಗುರುವ ತಿಂಗಳಾಯ, ಪಿತ್ರೋಡಿ- ಪಷ್ಣ, ಇಲ್ಲಿಯ ನಿವಾಸಿ, ತನಗೆ ಹೆಂಡತಿ ಸುಮತಿ ಕುಂದರ್, ಇಬ್ಬರು ಹೆಣ್ಣು ಮಕ್ಕಳು ನರ್ಸ್ ವೃತ್ತಿಯಲ್ಲಿ ಇದ್ದಾರೆಂದು ಹೇಳಿಕೊಂಡಿದ್ದಾರೆ.

3) ರಾಮಚಂದ್ರ ನಾಯಕ್ (70ವ) ತಂದೆ ರಂಗ ನಾಯಕ್, ಮಣಿಪಾಲ ಮಂಚಿ. ಇವರ ಸಹೋದರಿ ಕುಂಜಾಲಿನಲ್ಲಿ ವಾಸವಾಗಿದ್ದಾರೆಂದು ತಿಳಿದು ಬಂದಿದೆ.

4) ಶೇಖರ ಶೆಟ್ಟಿ (74 ವ) ತಂದೆ ಕರಿಯ ಶೆಟ್ಟಿ, ಧಾರವಿ- ಶನಾಯ್- ಮುಂಬೈ ಇಲ್ಲಿಯ ನಿವಾಸಿ. ಸಂಬಂಧಿಕರು ಉಡುಪಿ ಕುಕ್ಕಿಕಟ್ಟೆ- ಗುಡ್ಡೆಯಂಗಡಿಯಲ್ಲಿ ಇದ್ದಾರೆಂದು ಹೇಳಿಕೊಂಡಿದ್ದಾರೆ.

5). ನರ್ಸು ಮರಕಾಲ್ತಿ (70ವ) ಸಾಹೇಬ್ರಕಟ್ಟೆ- ಕಾಜರವಳ್ಳಿ- ಇವರು ಇಲ್ಲಿಯ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಬಳಿಯ ನಿವಾಸಿ.

6) ಪರಶುರಾಮ (63 ವ) ತಂದೆ ರಾಮಪ್ಪ, ನಗರಾಳು ಅಂಚೆ, ಸಬ್ಬಣ್ಸಿ, ಗುಳೆದಗುಡ್ಡ.

7). ಐರಿನ್ ವಿಕ್ಟೋರಿಯಾ ಬಂಗೇರ (70 ವ) ಮಲ್ಪೆ-ಕೊಳ, ಇವರು ಕತಾರ್ ದೇಶದಲ್ಲಿ 23 ವರ್ಷಗಳ ಕಾಲ ಉದ್ಯೋಗದಲ್ಲಿ ಇದ್ದವರೆಂದು ಹೇಳಿಕೊಂಡಿದ್ದಾರೆ.

8, 25 ವರ್ಷದ ಯುವಕ, ವಿಳಾಸ ತಿಳಿದು ಬಂದಿಲ್ಲ. ಉತ್ತರಕನ್ನಡ ಜಿಲ್ಲೆಯ ನಿವಾಸಿ, ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ವ್ಯಕ್ತಿ ಎಂದು ತಿಳಿದುಬಂದಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಉಪರಾಷ್ಟ್ರಪತಿಗಳ ಮೆಚ್ಚುಗೆ ಪಡೆದ ಉಡುಪಿಯ ಆಶಾ ಕಾರ್ಯಕರ್ತೆ

Upayuktha

ಕೊರೊನಾ ಅಪ್‌ಡೇಟ್ಸ್‌: ಉಡುಪಿಯಲ್ಲಿ 15, ರಾಜ್ಯದಲ್ಲಿ 178 ಪಾಸಿಟಿವ್ ಪ್ರಕರಣ

Upayuktha

ಸೆ.21ರಿಂದ ಕಾಸರಗೋಡು- ಮಂಗಳೂರು ಅಂತಾರಾಜ್ಯ ಬಸ್ ಸಂಚಾರ ಪುನರಾರಂಭ

Upayuktha