ದೇಶ-ವಿದೇಶ ಪ್ರಮುಖ

ದೇಶದ್ರೋಹ ಪ್ರಕರಣ: ಪಾಕ್ ಮಾಜಿ ಅಧ್ಯಕ್ಷ ಮುಷರಫ್‌ಗೆ ಮರಣದಂಡನೆ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಮಿಲಿಟರಿ ಸರ್ವಾಧಿಕಾರಿ ಪರ್ವೇಜ್ ಮುಷರಫ್‌ ಅವರಿಗೆ ದೇಶದ್ರೋಹದ ಆರೋಪದಲ್ಲಿ ಇಸ್ಲಾಮಾಬಾದ್‌ನ ವಿಶೇಷ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.

ಪೇಷಾವರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಖಾರ್ ಅಹ್ಮದ್ ಸೇಥ್‌ ಅವರ ನೇತೃತ್ವದ ವಿಶೇಷ ನ್ಯಾಯಾಲಯದ ಮೂವರು ನ್ಯಾಯಾಧೀಶರ ಪೀಠ, 76 ವರ್ಷದ ಮುಷರಫ್ ಅವರಿಗೆ ಮರಣದಂಡನೆ ವಿಧಿಸಿದೆ.

2007ರಲ್ಲಿ ಸಂವಿಧಾನವನ್ನು ಅಮಾನತುಗೊಳಿಸಿ ತುರ್ತು ಪರಿಸ್ಥಿತಿ ಹೇರಿ ಮಿಲಿಟರಿ ಆಡಳಿತ ಜಾರಿಗೊಳಿಸಿದ ಕಾರಣಕ್ಕಾಗಿ ತೀವ್ರ ದೇಶದ್ರೋಹದ ಆರೋಪವನ್ನು ಮುಷರಫ್ ಮೇಲೆ ಹೊರಿಸಲಾಗಿತ್ತು. 2014ರಲ್ಲಿ ಮುಷರಫ್ ಅವರನ್ನು ಶಿಕ್ಷಾರ್ಹ ಅಪರಾಧಿ ಎಂದು ಘೋಷಿಸಲಾಗಿತ್ತು.

ಮಾಜಿ ಸೇನಾ ಮುಖ್ಯಸ್ಥ ಮುಷರಫ್ 2016ರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ದುಬೈಗೆ ತೆರಳಿದ್ದರು. ಬಳಿಕ, ಭದ್ರತೆ ಮತ್ತು ಆರೋಗ್ಯದ ನೆಪವೊಡ್ಡಿ ಪಾಕಿಸ್ತಾನಕ್ಕೆ ಹಿಂದಿರುಗಿಲ್ಲ.

ಜಸ್ಟಿಸ್ ಸೇಥ್, ಜಸ್ಟಿಸ್‌ ನಝರ್ ಅಕ್ಬರ್‌ (ಸಿಂಧ್ ಹೈಕೋರ್ಟಿನವರು) ಮತ್ತು ಲಾಹೋರ್ ಹೈಕೋರ್ಟಿನ ಜಸ್ಟಿಸ್ ಶಾಹಿದ್ ಕರೀಂ ಈ ತೀರ್ಪು ಪ್ರಕಟಿಸಿದರು ಎಂದು ದ ಡಾನ್ ವರದಿ ಮಾಡಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಹೊರಟ ಬಿಜೆಪಿ: ಸಿದ್ದರಾಮಯ್ಯ ಆರೋಪ, ಶ್ರೀರಾಮುಲು ವಿರುದ್ಧ ಕಿಡಿ

Upayuktha

ಬಂಧಿತ ಚಿದಂಬರಂ ಇಂದು ಕೋರ್ಟಿಗೆ ಹಾಜರು

Upayuktha

ಉ.ಪ್ರದೇಶ: ಮನೆಯೊಂದರಲ್ಲಿ ಅಗ್ನಿ ಅವಘಡ; ನಾಲ್ವರು ಸಜೀವ ದಹನ

Harshitha Harish