ದೇಶ-ವಿದೇಶ

ಹಿಮಾಚಲ ಪ್ರದೇಶ ಸರ್ಕಾರದಿಂದ ನಟಿ ಕಂಗನಾ ರನಾವತ್ ರಕ್ಷಣೆ ಗೆ ನಿರ್ಧಾರ

ಶಿಮ್ಲಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ನಟಿ ಕಂಗನಾ ರನಾವತ್ ನೀಡುತ್ತಿರುವ ಹೇಳಿಕೆ ಗೆ ಅವರಿಗೆ ರಕ್ಷಣೆ ನೀಡಲು ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ.

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ತಮ್ಮ ನಿವಾಸದಲ್ಲಿರುವ ಕಂಗನಾ ರನಾವತ್ ಅವರಿಗೆ ಮತ್ತು ಅವರ ಮುಂಬರುವ ಮುಂಬೈ ಭೇಟಿ ಸಮಯದಲ್ಲಿ ರಕ್ಷಣೆ ನೀಡುವುದಾಗಿ ಅಲ್ಲಿನ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ. ನಟಿ ಕಂಗನಾ ರನಾವತ್ ಗೆ ವೈ- ಶ್ರೇಣಿಯ ಭದ್ರತೆ ಒದಗಿಸಲು ಗೃಹ ಸಚಿವಾಲಯ ಮತ್ತು ಮೂಲಗಳಿಂದ ಈ ನಿರ್ಧಾರ ಮಾಡಿದೆ.

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಈ ವಿಷಯ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ಮಗಳಾಗಿರುವ ಕಂಗನಾ ಅವರಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಆಕೆಯು ತಮ್ಮ ಕುಟುಂಬಕ್ಕೆ ಮತ್ತು ಕಂಗನಾಗೆ ರಕ್ಷಣೆ ನೀಡಬೇಕೆಂದು ಕೋರಿ ಕಂಗನಾ ತಂದೆ ಮತ್ತು ಸೋದರಿ ನಮ್ಮ ಬಳಿ ಮನವಿ ಮಾಡಿಕೊಂಡಿದ್ದಾರೆ. ಆಕೆಯ ಸೋದರಿ ನನ್ನ ಜೊತೆ ನಿನ್ನೆ ಫೋನ್ ಮೂಲಕ ಮಾತನಾಡಿ ತಮ್ಮ ಮಗಳಿಗೆ ಭದ್ರತೆ ನೀಡಬೇಕೆಂದು ಕೋರಿ ಅವರ ತಂದೆ ಕೂಡ ರಾಜ್ಯ ಪೊಲೀಸರಿಗೆ ಪತ್ರ ಬರೆದಿದ್ದು ಹೀಗಾಗಿ ರಕ್ಷಣೆ ನೀಡುವಂತೆ ಡಿಜಿಪಿಯವರಿಗೆ ಹೇಳಿದ್ದೇನೆ ಎಂದರು.

ಇದೀಗ ದಿನಾಂಕ 9 ರಂದು ಬುಧವಾರ ಕಂಗನಾ ರನಾವತ್ ಮುಂಬೈಗೆ ಆಗಮಿಸುತ್ತಿದ್ದು ಈ ಸಂದರ್ಭದಲ್ಲಿ ಪೊಲೀಸ್ ಭದ್ರತೆ ಒದಗಿಸಲು ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ.

Related posts

ಹೈದರಾಬಾದ್ : ಕಾರು- ಲಾರಿ ಡಿಕ್ಕಿಯಾದ ಪರಿಣಾಮ ಐವರು ಸಾವು

Harshitha Harish

8 ಟ್ವಿಟರ್ ಖಾತೆಗಳ ಸ್ಥಂಭನಕ್ಕೆ ಸೂಚನೆ

Upayuktha

ಕೊಲ್ಲಂ ನಗರಪಾಲಿಕೆ ಚುನಾವಣೆಗೆ ‘ಕೊರೋನಾ’ ಸ್ಪರ್ಧೆ…!

Upayuktha