ನಗರ ಸ್ಥಳೀಯ

ಕ್ಯಾನ್ಸರ್‌ನಿಂದ ಬಳಲುತ್ತಿರುವ 6 ವರ್ಷದ ಪುಟ್ಟ ಬಾಲೆಗೆ ಉಡುಪಿಯ ಹೋಂ ಡಾಕ್ಟರ್ಸ್‌ ಫೌಂಡೇಶನ್‌ನಿಂದ ನೆರವು

ಉಡುಪಿ: ಕ್ಯಾನ್ಸರ್‌ನಿಂದ ಬಳಲುತ್ತಿರುವ 6 ವರ್ಷದ ಪುಟ್ಟ ಬಾಲೆ ತ್ರಿಷಾಳ ನೆರವಿಗಾಗಿ ಉಡುಪಿಯ ಹೋಂ ಡಾಕ್ಟರ್ಸ್‌ ಫೌಂಡೇಶನ್‌ ವತಿಯಿಂದ ಒಟ್ಟು 25,000 ರೂ.ಗಳ ಸಹಾಯಧನ ನೀಡಲಾಯಿತು.

ಇಂದು (ಜ.31) ಭಾನುವಾರ ಸಂಜೆ 5 ಗಂಟೆಗೆ ಪಡುಬಿದ್ರೆಯಲ್ಲಿರುವ ತ್ರಿಷಾಳ ಮನೆಗೆ ತೆರಳಿದ ವೈದ್ಯರ ತಂಡ ಮಗುವಿನ ಯೋಗಕ್ಷೇಮ ವಿಚಾರಿಸಿತು.

ಮಗು ಸದ್ಯ 2 ಕಣ್ಣುಗಳನ್ನೂ ಕಳಕೊಂಡಿದ್ದಾಳೆ. ಅಂದು ಮಗುವಿಗೆ ಹೋಂ ಡಾಕ್ಟರ್ ಫೌಂಡೇಶನ್ ತಂಡ ದಿಂದ 20000 ಕೊಟ್ಟಿದ್ದು, ಇಂದು ಮತ್ತೆ ಕೆಲವು ಆಪ್ತರು ಕೊಟ್ಟಿದ್ದ ಹಣ 5000 ರೂ.ಗಳನ್ನು ಕೊಟ್ಟು ಬರಲಾಯಿತು ಎಂದು ಹೋಂ ಡಾಕ್ಟರ್ಸ್‌ ಫೌಂಡೇಶನ್‌ ಅಧ್ತಕ್ಷರಾದ ಡಾ. ಶಶಿಕಿರಣ್ ಶೆಟ್ಟಿ ಉಡುಪಿ ತಿಳಿಸಿದ್ದಾರೆ.

Fancy

ಮಗುವಿನ ಯೋಗಕ್ಷೇಮ ವಿಚಾರಿಸಲು ತೆರಳಿದ ತಂಡದಲ್ಲಿ ಡಾ.ಶಶಿ, ಡಾ.ಸುಮಾ, ರಾಘು, ಬಂಗಾರಪ್ಪ, ಸುಜಯ, ಸವಿತಾ ಶೆಟ್ಟಿ ಮತ್ತು ನಯನ ಭಾಗವಹಿಸಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಸೃಜನಶೀಲತೆಯಿಂದ ಯೋಚಿಸಿದಾಗ ಹೊಸ ಕಲ್ಪನೆಗಳು ಬರಲು ಸಾಧ್ಯ: ಶೇಖರ್ ಅಯ್ಯರ್

Upayuktha

ಶಿಕ್ಷಣ ಸಂಸ್ಥೆಗಳು ಕತ್ತಲನ್ನು ಹೋಗಲಾಡಿಸುವ ಸೂರ್ಯನಿದ್ದಂತೆ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

Upayuktha

ಲಾಕ್ ಡೌನ್ ನಡುವೆ ಮಾನವೀಯತೆ ಮೆರೆದ ಪ್ರಸೂತಿ ತಜ್ಞೆ ಡಾ. ಪೂರ್ಣಿಮಾ ಭಟ್

Upayuktha