ಗ್ರಾಮಾಂತರ ಸ್ಥಳೀಯ

ಗೃಹರಕ್ಷಕ ದಳ ಕಡಬ ಘಟಕಕ್ಕೆ ಜಿಲ್ಲಾ ಕಮಾಂಡೆಂಟ್ ಡಾ|| ಮುರಳಿ ಮೋಹನ ಚೂಂತಾರು ಭೇಟಿ

ಕಡಬ: ಇಂದು ಕಡಬ ಗೃಹರಕ್ಷಕ ದಳ ಘಟಕಕ್ಕೆ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ|| ಮುರಳಿ ಮೋಹನ್ ಚೂಂತಾರು ಭೇಟಿ ನೀಡಿ ಕವಾಯತು ವೀಕ್ಷಣೆ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗೃಹರಕ್ಷಕರನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಜನಾರ್ಧನ ಗೌಡ ಪಣೆಮಜಲು ಮುಖ್ಯ ಗುರುಗಳು, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಶ್ರೀ ದುರ್ಗಾಂಬಿಕಾ ಅಮ್ಮನವರ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷರು ಇವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ಹಾಗೂ ಎರಡನೆಯ ಬಾರಿ ಕಮಾಂಡೆಂಟ್ ಅಧಿಕಾರ ವಹಿಸಿಕೊಂಡ ಜಿಲ್ಲಾ ಕಮಾಂಡೆಂಟ್ ಡಾ|| ಮುರಳಿ ಮೋಹನ ಚೂಂತಾರು ಅವರನ್ನು ಕಡಬ ಗೃಹರಕ್ಷಕ ದಳದ ಪರವಾಗಿ ಮುಖ್ಯ ಅತಿಥಿಗಳಾದ ಜನಾರ್ಧನ ಗೌಡ ಪಣೆಮಜಲು ಇವರು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಕಡಬ ಘಟಕದ ಎಸ್ ಎಲ್ ಆದ ಉದಯಶಂಕರ್, ಗೃಹರಕ್ಷಕ ರಾದ ಸಂದೇಶ್, ಲೋಲಾಕ್ಷ, ಇವರು ಅತಿಥಿಗಳಿಗೆ ಹೂ ಗುಚ್ಚ ನೀಡಿ ಗೌರವಿಸಿದರು. ಹಾಗೂ ರತೀಶ್, ಆಕಾಶ್, ಹರೀಶ್, ಮೀನಾಕ್ಷಿ, ಮೊದಲಾದ ಇಪ್ಪತ್ತು ಜನ ಸಿಬಂದಿಯವರು ಭಾಗವಹಿಸಿದರು.

ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ಅಮೈ ಜಿಲ್ಲಾ ಕಮಾಂಡೆಂಟ್ ಸರ್ ರವರಿಗೆ ಗೌರವರ್ಪಣೆ ಸಲ್ಲಿಸಿ. ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ವೀರರಾಣಿ ಅಬ್ಬಕ್ಕ ಉತ್ಸವ ಕ್ರೀಡಾ ಪಂದ್ಯಾಟ ಫೆ.23ಕ್ಕೆ

Upayuktha

ಆಳ್ವಾಸ್ ‘ಆರೋಗ್ಯ ರಕ್ಷಾ’ ಔಷಧ ವಿತರಣಾ ಕಾರ್ಯಕ್ರಮ

Upayuktha

ಆಫ್‍ಲೈನ್ ತರಗತಿ ನಡೆಸಲು ಸಿದ್ದತೆ ಪೂರ್ಣಗೊಳಿಸಿದ ವಿವೇಕಾನಂದ ಪಿಯು ಕಾಲೇಜು

Upayuktha