ಗ್ರಾಮಾಂತರ ಸ್ಥಳೀಯ

ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿದೆ: ಡಾ|| ಚೂಂತಾರು

ಮಂಗಳೂರು: ಪ್ರಶಸ್ತಿ ಪಡೆಯುವುದರಿಂದ ಒಬ್ಬ ವ್ಯಕ್ತಿಯ ಸಾಮಾಜಿಕ ಬದ್ಧತೆ ಕಳಕಳಿ ಮತ್ತು ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ. ಗೃಹರಕ್ಷಕ ದಳದಲ್ಲಿ ಕೆಲಸ ಮತ್ತು ನಿಷ್ಕಾಮ ಸೇವೆಯಿಂದ ಮಾನಸಿಕ ನೆಮ್ಮದಿ ಮತ್ತು ಸಂತೃಪ್ತಿ ಹೆಚ್ಚಿದೆ. ಈ ಪ್ರಶಸ್ತಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗೃಹರಕ್ಷಕರಿಗೆ ಸಲ್ಲತಕ್ಕದ್ದು ಎಂದು 2019ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪುರಸ್ಕೃತ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು ಅಭಿಪ್ರಾಯಪಟ್ಟರು.

ಶುಕ್ರವಾರ (ಮಾ.5) ನಗರದ ಆಡಂಕುದ್ರುವಿನ ಸೈಂಟ್ ಸೆಬಾಸ್ಟಿನ್ ಶಾಲೆಯ ಅಂಗಣದಲ್ಲಿ ಹೊಸದಾಗಿ ರಚಿತವಾದ ಉಳ್ಳಾಲ ಘಟಕದ ವಾರದ ಕವಾಯತನ್ನು ಉದ್ದೇಶಿಸಿ ಡಾ|| ಮುರಲೀಮೋಹನ್ ಚೂಂತಾರು ಅವರು ಮಾತನಾಡುತ್ತಿದ್ದರು.

ಇದೇ ಸಂದರ್ಭದಲ್ಲಿ ಸಮಾದೇಷ್ಟರಿಗೆ ಉಳ್ಳಾಲ ಘಟಕದ ವತಿಯಿಂದ ಸನ್ಮಾನ ಮಾಡಲಾಯಿತು. ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಜೂನ್ 2020ರಲ್ಲಿ ಉಳ್ಳಾಲ ಘಟಕ ಆರಂಭವಾಗಿದ್ದರೂ ವಾರದ ಕವಾಯತನ್ನು ಆರಂಭಿಸಿರಲಿಲ್ಲ. ಈ ಕೋವಿಡ್-19 ನಿಯಂತ್ರಣ ಬಂದ ಬಳಿಕ ವಾರದ ಕವಾಯತನ್ನು ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ಹಿರಿಯ ಗೃಹರಕ್ಷಕರಾದ ಭಾಸ್ಕರ್, ಬಶೀರ್, ಸುನಿಲ್ ಕುಮಾರ್, ಸುನಿಲ್ ಪೂಜಾರಿ, ದಿವಾಕರ್, ಹಮೀದ್ ಪಾವಳ ಉಪಸ್ಥಿತರಿದ್ದರು. ಘಟಕಾಧಿಕಾರಿ ಸುರೇಶ್ ಶೇಟ್ ಕವಾಯತನ್ನು ನಿರ್ವಹಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಪುಂಜಾಲಕಟ್ಟೆ: ಕನ್ನಡದೊಲವು- ರಾಜ್ಯ ಮಟ್ಟದ ಜಾಲಗೋಷ್ಠಿ, ವಿಶೇಷ ಉಪನ್ಯಾಸ

Upayuktha

‘ಶ್ರೇಷ್ಠತ್ವ ಗಳಿಸಲು ಶ್ರದ್ಧೆ ಮತ್ತು ತಪಸ್ಸು ತೀರ ಅಗತ್ಯ: ವೇ. ಮೂ. ಮಿತ್ತೂರು ಶ್ರೀನಿವಾಸ ಭಟ್ಟ

Upayuktha

ದ.ಕ. ಜಿಲ್ಲೆಯಲ್ಲಿ ಗುರುವಾರ ಕೊರೊನಾ ಪಾಸಿಟಿವ್ ಇಲ್ಲ

Upayuktha