ದೇಶ-ವಿದೇಶ

ಆಸ್ಪತ್ರೆಗೆ ಮತ್ತೊಮ್ಮೆ ದಾಖಲಾದ ಗೃಹ ಸಚಿವ ಅಮಿತ್ ಶಾ

ನವದೆಹಲಿ (ಆ.18): ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್​ ಶಾ ಅವರು ಇತ್ತೀಚೆಗಷ್ಟೇ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು. ಈಗ ಅವರಿಗೆ ಜ್ವರ ಹಾಗೂ ಮೈಕೈ ನೋವು ಮತ್ತೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಧ್ಯರಾತ್ರಿ ವೇಳೆಗೆ ಅಮಿತ್​ ಶಾಗೆ ಜ್ವರ ಕಾಣಿಸಿಕೊಂಡಿತ್ತು. ಇದಾದ ಬೆನ್ನಲ್ಲೇ ಅವರಿಗೆ ಉಸಿರಾಟದ ಸಮಸ್ಯೆ ಕೂಡ ಕಾಡಿತ್ತು. ಹೀಗಾಗಿ ಮುಂಜಾನೆ 2:30ರ ಸುಮಾರಿಗೆ ಅವರನ್ನು ದೆಹಲಿಯ ಎಐಐಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್​ 2ರಂದು ಅಮಿತ್​ ಶಾಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ವೇಳೆ ಟ್ವೀಟ್​ ಮಾಡಿದ್ದ ಅವರು, ಪ್ರಾಥಮಿಕ ವೈದ್ಯಕೀಯ ಪರೀಕ್ಷೆ ವೇಳೆ ನನಗೆ ಕೊರೋನಾ ಪಾಸಿಟಿವ್ ಆಗಿದ್ದು. ನನ್ನ ಆರೋಗ್ಯ ಚೆನ್ನಾಗಿಯೇ ಇದೆ. ಆದರೆ, ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಕಳೆದೊಂದು ವಾರದಿಂದ ನನ್ನ ಸಂಪರ್ಕಕ್ಕೆ ಬಂದವರೆಲ್ಲರೂ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ ಹಾಗೂ ಕ್ವಾರಂಟೈನ್ ಆಗಿ ಎಂದು ಮನವಿ ಮಾಡಿದ್ದರು.

ಆಗಸ್ಟ್ 14ರಂದು ಕೊರೋನಾ ದಿಂದ ಗುಣಮುಖ ರಾಗಿ ಮನೆಗೆ ತೆರಳಿದ್ದರು. ಇದೀಗ ಮತ್ತೆ ಆರೋಗ್ಯ ದ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

Related posts

ಮೈಸೂರು ವಿಶ್ವವಿದ್ಯಾಲಯ ಶತಮಾನೋತ್ಸವ ಘಟಿಕೋತ್ಸವ ; ಪಿಎಂ ಭಾಷಣ

Harshitha Harish

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: 370ನೇ ವಿಧಿ ರದ್ದತಿಯಿಂದ 130 ಸ್ಥಾನಗಳ ಚಿತ್ರಣವೇ ಬದಲು

Upayuktha

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಕೋವಿಡ್ ದೃಢ

Harshitha Harish