ನಗರ ಸ್ಥಳೀಯ

ಸಾಯಿರಾಂ ಗೋಪಾಲಕೃಷ್ಣ ಭಟ್ಟರು ನಿರ್ಮಿಸಿದ 263, 264ನೇ ಮನೆಗಳ ಕೀಲಿ ಕೈ ಹಸ್ತಾಂತರ

ಕಿಳಿಂಗಾರು: ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರು ನಿರ್ಮಿಸಿದ 263 ಮತ್ತು 264ನೇ‌ ಮನೆಗಳ ಬೀಗದ ಕೈ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಬೀಗದ ಕೈ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಿದರು.

ಫಲಾನುಭವಿಗಳಾದ ಸುಮತಿ ಇಕ್ಕೇರಿ, ಸತ್ಯನಾರಾಯಣ ಭಟ್ ಬಾರಡ್ಕ ಅವರು ಬೀಗದ ಕೈ ಪಡೆದರು.

ಹಿರಿಯರಾದ ನಡುಮನೆ ಗೋಪಾಲಕೃಷ್ಣ ಭಟ್, ಸಾಯಿರಾಂ ಗೋಪಾಲಕೃಷ್ಣ ಭಟ್ ದಂಪತಿಗಳು, ಸತೀಶ್ ಎಡನೀರು, ಸೂರ್ಯನಾರಾಯಣ ಭಟ್, ಸೌಮ್ಯ ಮಹೇಶ್ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸ್ವಾಗತಿಸಿ ಸಂಜೀವ ರೈ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬೆಳ್ತಂಗಡಿ ರೋಟರಿ ಸೇವಾ ಟ್ರಸ್ಟ್ ಸಭಾ ಭವನ ಉದ್ಘಾಟನೆ

Upayuktha

ಬೈಕ್ ‌ಕಳವು: ಐವರು ಆರೋಪಿಗಳ ಬಂಧನ; 4 ಬೈಕ್‌, ಓಮ್ನಿ 3.63 ಲಕ್ಷ ಮೌಲ್ಯದ ಸೊತ್ತು ವಶ

Upayuktha

ನುಡಿನಮನ/ ಉನ್ನತ ವ್ಯಕ್ತಿತ್ವ, ಸರಳತೆಯೇ ಮೂರ್ತಿವೆತ್ತ ದಿವಂಗತ ಡಾ. ಕಂಗಿಲ ಕೃಷ್ಣ ಭಟ್ಟರು

Upayuktha