ಚಿತ್ರ ಸುದ್ದಿ ರಾಜ್ಯ

ಸ್ಪೇಸ್​​​​​​​ನಲ್ಲಿ ರಿಲೀಸ್ ಆಯ್ತು ‘ಹಾಸ್ಟೆಲ್ ಹುಡುಗರು’ ಟೀಸರ್: ಪ್ರಮೋಷನ್ ಕ್ರಿಯೆಟಿವಿಟಿ ನೋಟಿ ಕಿಚ್ಚ ಫುಲ್ ಫಿದಾ

ಫೆಬ್ರವರಿ 15 ಸಂಜೆ 6 ಗಂಟೆಗೆ ‘HOSTEL ಹುಡುಗರು ಬೇಕಾಗಿದ್ದಾರೆ’ ಚಿತ್ರದ ಟೀಸರನ್ನು ಬುರ್ಜ್ ಖಲೀಫಾ ಮೇಲೆ ಸುದೀಪ್ ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಈ ವಿಚಾರ ಕೇಳುತ್ತಿದ್ದಂತೆ ಸಿನಿಪ್ರಿಯರು ಆಶ್ಚರ್ಯ ವ್ಯಕ್ತಪಡಿಸಿದ್ದರು. ‘ವಿಕ್ರಾಂತ್ ರೋಣ’ ಚಿತ್ರದ ನಂತರ ಮತ್ತೊಂದು ಕನ್ನಡ ಸಿನಿಮಾ ಟೀಸರ್​​​​​​ ಬುರ್ಜ್ ಖಲೀಫಾ ಮೇಲೆ ಬಿಡುಗಡೆಯಾಗುತ್ತಿದ್ಯಾ ಎಂದು ಪ್ರಶ್ನಿಸಿದ್ದರು. ಆದರೆ ಈ ಚಿತ್ರತಂಡ ಒಂದು ಹೆಜ್ಜೆ ಮುಂದೆ ಹೋಗಿ ಸ್ಪೇಸ್​​​ನಲ್ಲಿ ತಮ್ಮ ಸಿನಿಮಾ ಟೀಸರ್ ಬಿಡುಗಡೆ ಮಾಡಿದೆ.

ನಿರ್ದೇಶಕ ನಿತಿನ್​​​ ಕೃಷ್ಣಮೂರ್ತಿ ತಮ್ಮ ಕ್ರಿಯೇಟಿವಿಟಿ ಮೂಲಕ ಈ ರೀತಿ ಸಿನಿಮಾ ಪ್ರಮೋಷನ್ ಮಾಡಲು ಹೊರಟಿದ್ದು, ಕೆಲವು ದಿನಗಳ ಹಿಂದಷ್ಟೇ ಪುನೀತ್ ರಾಜ್​​ಕುಮಾರ್ ಈ ಚಿತ್ರದ ಟೈಟಲ್ ರಿಲೀಸ್ ಮಾಡಿದ್ದರು. ತೆರೆ ಮುಂದೆ ಇದೊಂದು ವರ್ಸ್ಟ್​ ಸಿನಿಮಾ ಎಂದು ಪುನೀತ್​​ ಬೈದರೂ ತೆರೆ ಹಿಂದೆ, ಚಿತ್ರತಂಡದ ಕ್ರಿಯೇಟಿವಿಟಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದ್ದರು.
https://www.facebook.com/100000756935963/videos/3707905842577944/
ಇದೀಗ ನಟ ಸುದೀಪ್ ಕೂಡಾ ಚಿತ್ರತಂಡದ ಕೆಲಸ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಪ್ರಮೋಷನ್​​​ಗಾಗಿ ಚಿತ್ರತಂಡ ತಯಾರಿಸಿರುವ ಮತ್ತೊಂದುವಿಡಿಯೋ ನೋಡಿದ ಸುದೀಪ್, ಇಂತಹ ಪ್ರತಿಭೆಗಳನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸಿದರೆ ಕನ್ನಡಕ್ಕೆ ಒಳ್ಳೆ ಸಿನಿಮಾಗಳು ದೊರೆಯುತ್ತವೆ ಎಂದು ಹೇಳಿದ್ದಾರೆ.
‘HOSTEL ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲೇ ತೆರೆ ಕಾಣಲಿದೆ. ಚಿತ್ರವನ್ನು ಗುಲ್​​ಮೊಹರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸಿದ್ದಾರೆ. ಸಿನಿಮಾ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಶೀಘ್ರವೇ ಮಾಹಿತಿ ನೀಡಲಿದೆ.

Related posts

ಸಚಿವ ಆರ್ ಅಶೋಕ್‌ಗೆ ಕೊರೊನಾ ನೆಗೆಟಿವ್, ಪ್ರವಾಹ ಪರಿಹಾರ ಕಾರ್ಯಕ್ಕೆ ಹಾಜರು

Harshitha Harish

ಬೆಂಗಳೂರು ; ಟ್ರಾವೆಲ್ಸ್ ಏಜೆನ್ಸಿ ಕಾರಿನಲ್ಲಿ ಗಾಂಜಾ ಮಾರಾಟ

Harshitha Harish

ಮುಂದಿನ ಅಧಿವೇಶನದಲ್ಲೇ ಗೋಹತ್ಯೆ ನಿಷೇಧ ಮಸೂದೆ ಮಂಡನೆ : ಸಚಿವ ಪ್ರಭು ಚವ್ಹಾಣ್

Upayuktha News Network