ನಗರ ಸ್ಥಳೀಯ

ಮುಗ್ರೋಡಿ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿಯಿಂದ 7.5 ಲಕ್ಷ ವೆಚ್ಚದಲ್ಲಿ ಮನೆ ಹಸ್ತಾಂತರ

ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪದವಿನಂಗಡಿಯ ಮುಗ್ರೋಡಿಯಲ್ಲಿ‌ ಬಡಕುಟುಂಬವೊಂದಕ್ಕೆ‌ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಮುಗ್ರೋಡಿ ವತಿಯಿಂದ ನಿರ್ಮಿಸಲಾದ 7.5 ಲಕ್ಷ ರೂ ವೆಚ್ಚದ ಮನೆ ಹಸ್ತಾಂತರ ಹಾಗೂ ಸಭಾ ಕಾರ್ಯಕ್ರಮ ಭಾನುವಾರ ಜರುಗಿತು.

ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮ.ನ.ಪಾ. ಸದಸ್ಯರುಗಳಾದ ಸಂಗೀತ ಆರ್ ನಾಯಕ್, ವನಿತಾ ಪ್ರಸಾದ್, ಜಯಾನಂದ ಅಂಚನ್, ಭಾರತೀ ದಿನೇಶ್, ಹಾಗೂ ಮುಗ್ರೋಡಿ‌ ಕನ್ಸ್ಟ್ರಕ್ಷನ್ ಮಾಲಕರಾದ ಸುಧಾಕರ್ ಶೆಟ್ಟಿ ಮುಗ್ರೋಡಿ, ಹಿರಿಯರಾದ ಗಣಪ ಅಮಿನ್ , ನಾರಾಯಣ ಶೆಟ್ಟಿ, ದಾಸಣ್ಣಶೆಟ್ಟಿ,‌ ಹಾಗೂ ಸಮಿತಿಯ ಅಧ್ಯಕ್ಷರಾದ ದಿವಾಕರ್ ಶೆಟ್ಟಿ, ಸಮಿತಿಯ ಹಿರಿಯರು ಹಾಗೂ ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ‌ ಉಪಸ್ಥಿತರಿದ್ದರು.

ಮಂಗಳೂರಿನ‌ ಮುಗ್ರೋಡಿಯ ಶ್ರಿ ದುರ್ಗಾಪರಮೇಶ್ವರಿ ಸೇವಾ ಸಮಿತಿ 1968 ಉದ್ಘಾಟನೆಗೊಂಡಿದ್ದು‌ ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕವಾಗಿ ಜನಪರ ಕೆಲಸ ಕಾರ್ಯಗಳನ್ನು ‌ಮಾಡುತ್ತಾ ಬಂದಿದೆ. ಮುಖ್ಯವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಶಾಲಾರಂಭ ಸಮಯ ಶಾಕಾ ಮಕ್ಕಳಿಗೆ ‌ಪುಸ್ತಕ ವಿತರಣೆ, ಕೊಡೆ ವಿತರಣೆ, ಹಾಗೂ ತುರ್ತು ಸಂದರ್ಭದಲ್ಲಿ ದಾನಿಗಳ ಸಹಾಯದಿಂದ ವೈದ್ಯಕೀಯ ವೆಚ್ಚ ಭರಿಸಿದೆ.

ತಂದೆ ತಾಯಿಯನ್ನು ಕಳೆದುಕೊಂಡ ತೀರಾ ಬಡತನದಲ್ಲಿ ವಾಸಿಸುತ್ತಿರುವ ಶಾಂಭವಿ ಹಾಗೂ ಅವರ ಎರಡು ಸಹೋದರಿಯರು‌ ವಾಸಿಸಲು‌ ಒಂದು ಮನೆ ಇಲ್ಲದೆ ಸಂಕಷ್ಟದಲ್ಲಿ‌ ವಾಸಿಸುವುದನ್ಮು ಗಮನಿಸಿ ಈ ಸಮಿತಿಯ ಸದಸ್ಯರು ತಾ.6-4-2020 ಮನೆ ಕೆಡವಿ 10-4-2021 ರಂದು ಮನೆಯ ಗುದ್ದಲಿ ಪೂಜೆ ನಡೆಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ಎಲ್ಲ ಸದಸ್ಯರು ಸೇರಿ ಸುಮಾರು ಒಂಬತ್ತು ತಿಂಗಳಿನಲ್ಲಿ ದಾನಿಗಳ ಸಹಾಯದಿಂದ ಸುಂದರವಾದ ಮನೆ ನಿರ್ಮಿಸಲಾಯಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಉಡುಪಿ ಕೃಷ್ಣನಿಗೆ ಬಿಡುಗಡೆ ಭಾಗ್ಯ…: ಕೃಷ್ಣಮಠದಲ್ಲಿ ವಸಂತೋತ್ಸವ ಮತ್ತು ವಿದ್ಯಾಮಾನ್ಯತೀರ್ಥರ ಸರಳ ಆರಾಧನೋತ್ಸವ

Upayuktha

ಮಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ; ಎಲ್ಲರೂ ಕೇರಳದವರು

Upayuktha

ಶಾಲೆಗಳು ದೇಶ ಭಕ್ತರನ್ನು ಬೆಳೆಸುವ ಕಾರ್ಖಾನೆಯಾಗಬೇಕು: ಶಾಸಕ ಡಾ. ಭರತ್ ಶೆಟ್ಟಿ

Upayuktha