ಓದುಗರ ವೇದಿಕೆ

ಹೇಗಿದ್ದ ಕಾಲ ಹೇಗಾಯಿತು! ಕೃತಕತೆಯಿಂದ ಸಹಜತೆಗೆ ಹೊರಳಿಸಲು ಮಹಾಮಾರಿ ಬರಬೇಕಾಯಿತೆ…?

 

(ರೇಖಾಚಿತ್ರ: ಶೈಲೇಶ್ ಉಜಿರೆ)

ನನ್ನ ಮಗ, ನನ್ನ ಅಳಿಯ, ನನ್ನ ಮಗಳು, ನನ್ನ ಸೊಸೆ ವಿದೇಶದಲ್ಲಿ ಇದ್ದಾರೆ ಎಂದು ಹೆಮ್ಮೆ ಪಡುತ್ತಿದ್ದ ನಮಗೆ ಇಂದು ವಿದೇಶದ ಹೆಸರು ಕೇಳಿದರೆ ಹೆದರಿಕೊಳ್ಳುವ ಪರಿಸ್ಥಿತಿ. ಗೆಳೆಯ ವಿದೇಶದಿಂದ ಬರುತ್ತಿದ್ದಾನೆ ಎಂದು ತಿಳಿದ ತಕ್ಷಣ ಪಾರ್ಟಿ ಬುಕ್ ಮಾಡುತ್ತಿದ್ದವರು, ಗೆಳೆಯರನ್ನು ಕರೆದುಕೊಂಡು ಬರಲು ಏರ್‌ಪೋರ್ಟಿಗೆ ಕಾರು ಹಿಡಿದುಕೊಂಡು ಹೋಗುತ್ತಿದ್ದವರು ಈಗ ಗೆಳೆಯ ವಿದೇಶದಿಂದ ಬರುತ್ತಿದ್ದಾನೆ ಎಂದು ತಿಳಿದ ತಕ್ಷಣವೇ ಫೇೂನ್ ಸ್ವಿಚ್ ಆಫ್‌ ಮಾಡಿಕೊಳ್ಳುವ ಪರಿಸ್ಥಿತಿ! ಪರ ಊರಿನಿಂದ ಸಂಬಂಧಿಕರು ಬರುವ ಸುದ್ದಿ ತಿಳಿದಾಗ ಸಂಭ್ರಮಿಸುತ್ತಿದ್ದ ನಮಗೆ ಇಂದು ಯಾಕಪ್ಪಾ ಬರುತ್ತಾರೆ ಎನ್ನುವ ಪರಿಸ್ಥಿತಿ!

ಪಕ್ಕದ ಮನೆಯ ಹುಡುಗ ವಿದೇಶದಿಂದ ಬರುತ್ತಿದ್ದಾನೆ ಎಂದಾಗ ಕಾತರದಿಂದ ಕಾಯುತ್ತಿದ್ದ ಆಚೀಚೆ ಮನೆಯವರು, ಈಗ ಬರುವ ಸುದ್ದಿ ತಿಳಿದಾಗ ತಮ್ಮ ಮನೆಗೆ ಮಾತನಾಡಿಸಲು ಬರುತ್ತಾನೆ ಎಂದು ಮನೆಯ ಬಾಗಿಲನ್ನು ಮುಚ್ಚಿಕೊಳ್ಳುವ ಪರಿಸ್ಥಿತಿ! ಮೈತುಂಬ ಮುಚ್ಚಿಕೊಳ್ಳಲು ಬಟ್ಟೆ ಇದ್ದರೂ ವಿದೇಶಿ ಫ್ಯಾಷನ್ ಗೆ ಮರುಳಾಗಿ ಅರೆ ಬರೆ ಬಟ್ಟೆ ಧರಿಸುತ್ತಿದ್ದವರು ಈಗ ಬಾಯಿಯನ್ನು ಸಹ ಬಿಡದೆ ಮುಚ್ಚಿ ಕೊಳ್ಳುವ ಪರಿಸ್ಥಿತಿ. ಯಾವುದೇ ಕೆಲಸವಿಲ್ಲದಿದ್ದರೂ ಒಂದು ಕ್ಷಣವೂ ಮನೆಯಲ್ಲಿ ಕುಳಿತು ಹಿರಿಯರೊಂದಿಗೆ ಮಾತನಾಡುವ ವ್ಯವಧಾನವಿಲ್ಲದವರು ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ.

ಮನೆಯ ತಿಂಡಿ ತಿನಿಸುಗಳು ಬಾಯಿಗೆ ರುಚಿಸದೆ ಬಗೆ ಬಗೆಯ ತಿಂಡಿಗಾಗಿ ಆನ್ ಲೈನ್‌ನಲ್ಲಿ ಬುಕ್ ಮಾಡುತ್ತಿದ್ದವರು ಗಂಜಿ ಸಿಕ್ಕಿದರೂ ಸಾಕಪ್ಪ ಎನ್ನುವ ಪರಿಸ್ಥಿತಿ! ಕಂತೆ ಕಂತೆ ಗರಿಗರಿ ನೇೂಟು ಹಿಡಿದು ಬರಬರನೆ ಎಣಿಸುತ್ತಿದ್ದವರು ಕರೆನ್ಸಿ ನೇೂಟನ್ನು ಮುಟ್ಟಲು ಸಹ ಭಯಪಡುವ ಪರಿಸ್ಥಿತಿ! ಯಾವುದೇ ಪರಿಸರ ಪ್ರೇಮಿಗಳ ಹೇೂರಾಟಕ್ಕೆ ಮಣಿಯದೆ ಹಗಲಿರುಳೆನ್ನದೆ ಹೊಗೆಯುಗುಳುತ್ತಿದ್ದ ಕಾರ್ಖಾನೆಗಳು ಮೌನಕ್ಕೆ ಶರಣಾಗಬೇಕಾದ ಪರಿಸ್ಥಿತಿ! ಗಿಜಿ ಗಿಜಿ ಗುಟ್ಟುತ್ತಿದ್ದ ಪಟ್ಟಣಗಳು, ಹೆದ್ದಾರಿಗಳು ಬಿಕೇೂ ಎನ್ನುವ ಪರಿಸ್ಥಿತಿ! ಊರಿನಲ್ಲಿ ಬೇಕಾದಷ್ಟು ಹೊಲ ಗದ್ದೆಗಳಿದ್ದರೂ ಅದೆಲ್ಲವನ್ನೂ ಬಿಟ್ಟು ಪೇಟೆ ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಬಂಗಲೆ ಕಟ್ಟಿಕೊಂಡವರು ಹಡಿಲು ಬಿದ್ದ ಗದ್ದೆ ಕಡೆಗೆ ಮುಖ ಮಾಡ ಬೇಕಾದ ಪರಿಸ್ಥಿತಿ! ತಂದೆ ತಾಯಿಯರನ್ನು ಅನಾಥಾಶ್ರಮದಲ್ಲಿ ಬಿಟ್ಟು ಕೊನೆಗೆ ಅವರ ಶವಸಂಸ್ಕಾರಕ್ಕೂ ಬರಲು ಬಿಡುವಿಲ್ಲದವರು ತಮ್ಮ ಹುಟ್ಟೂರಿಗೆ ಬರಲು ಹರಸಾಹಸ ಪಡುವ ಪರಿಸ್ಥಿತಿ! ಹತ್ತಾರು ವರುಷ ಊರಕಡೆ ಮುಖಮಾಡದವರು ಊರಿಗೆ ಓಡೋಡಿ ಬರುವ ಪರಿಸ್ಥಿತಿ! ಹಳ್ಳಿ ಜೀವನ ಎಂದರೆ ಮೂಗು ಮುರಿಯುತ್ತಿದ್ದವರು ಜೀವ ಭಯದಿಂದ ಹಳ್ಳಿಗೆ ಧಾವಿಸುವ ಪರಿಸ್ಥಿತಿ!

ಹೇಗಿದ್ದ ಕಾಲ ಹೇಗಾಯಿತು! ನಮ್ಮ ಆದಿಮಾನವರು ಕಾಡುಮೇಡು ಅಲೆದಾಡಿ ಗಡ್ಡೆ ಗೆಣಸುಗಳನ್ನು ತಿನ್ನುತ್ತಿದ್ದರು ಎಂಬುದನ್ನು ಇತಿಹಾಸದಲ್ಲಿ ಓದಿದ ನೆನಪು. ಮುಂದೆ ನಮಗೂ ಆ ಕಾಲ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಹೇಗಿದ್ದ ಕಾಲ ಹೇಗಾಯಿತು! ಇದಕ್ಕೆ ನಾವು ಕೊಡುವ ಕಾರಣ ಪ್ರಕೃತಿಯ ಮುನಿಸು. ಇದು ಪ್ರಕೃತಿಯ ಮುನಿಸಲ್ಲ ಮಾನವನ ಸ್ವಾರ್ಥ ಹಾಗೂ ಅತಿಯಾಸೆಯ ಪರಮಾವಧಿ. ಇದಕ್ಕೆ ಪರಿಹಾರ ಪರಮಾತ್ಮ ನೀಡುವುದಿಲ್ಲ, ಮಾನವನೇ ಕಂಡುಕೊಳ್ಳಬೇಕು. ಕಾಲ ಬದಲಾಗಿಲ್ಲ ಬದಲಾದ ನಾವು ಬದಲಾಗಬೇಕು. ಇನ್ನಾದರೂ ಸ್ವಾರ್ಥ ಅಸೂಯೆ ದುರಾಸೆಗಳನ್ನು ಬಿಟ್ಟು ನಿಜ ಮಾನವರಾಗಿ ಬದುಕಲು ಕಲಿಯೇೂಣ. ನಮ್ಮ ಮಣ್ಣಿನ ಸಂಸ್ಕಾರ ಸಂಸ್ಕೃತಿಗಳನ್ನು ಗೌರವಿಸೇೂಣ, ಪಾಲಿಸೇೂಣ.

– ಓದುಗ

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಅಭಿಮತ: ‘ವಿದ್ಯಾಗಮ’ ಬೇಡವಾದರೆ ‘ಆನ್‌ಲೈನ್‌’ ಶಿಕ್ಷಣವೂ ಬೇಡ

Upayuktha

ಕೃಷಿ ಮಸೂದೆ: ಪರ-ವಿರೋಧದ ನಡುವೆ ಕೃಷಿಕರೊಬ್ಬರ ಅನುಭವವನ್ನು ಓದಿ…

Upayuktha

ಸಾಮರಸ್ಯದ ಸಂಕೇತ ಮೊಹರಂ

Upayuktha