ಪ್ರಶ್ನೆ- ಉತ್ತರಗಳು (FAQs) ವಾಣಿಜ್ಯ

ಆಧಾರ್ ಕಾರ್ಡ್‌ ಡಿಜಿಟಲ್ ಪ್ರತಿಯನ್ನು ಡೌನ್‌ಲೋಡ್ ಮಾಡೋದು ಹೇಗೆ ಗೊತ್ತಾ?

ನವದೆಹಲಿ: ನಮ್ಮ ಗುರುತಿನ ಪುರಾವೆಗಳ ಪೈಕಿ ಈಗ ಅತಿ ಮುಖ್ಯವಾದವುಗಳಲ್ಲಿ ಒಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ವಿತರಿಸುವ 12 ಅಂಕಿಗಳ ಸಂಖ್ಯೆಯುಳ್ಳ ಆಧಾರ್ ಕಾರ್ಡ್.

ಸರ್ಕಾರದ ಪ್ರತಿಯೊಂದು ಸೇವೆಗಳಿಗೆ ಅರ್ಜಿ ಸಲ್ಲಿಸುವಾಗಲೂ ಜತೆಯಲ್ಲಿ ಆಧಾರ್ ಕಾರ್ಡ್‌ನ ಪ್ರತಿ ನೀಡುವುದು ಕಡ್ಡಾಯವಾಗಿದೆ. ಇದರಿಂದಾಗಿ ನಿತ್ಯಾವಶ್ಯಕಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆಧಾರ್ ಕಾರ್ಡ್‌ನ ಪ್ರತಿಯೊಂದು ನಮ್ಮ ಮೊಬೈಲ್‌ನಲ್ಲೇ ಇದ್ದರೆ ಎಷ್ಟು ಅನುಕೂಲಕರ ಅಲ್ವೇ?

ನಿಮಗೆ ಗೊತ್ತಾ, ಆಧಾರ್ ಕಾರ್ಡ್‌ನ ಡಿಜಿಟಲ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಯುಐಡಿಎಐ ಕಲ್ಪಿಸಿದೆ. ಹಾಗೆ ಡೌನ್‌ಲೋಡ್ ಮಾಡಿಕೊಂಡ ಪ್ರತಿಯನ್ನು ನಿಮ್ಮ ಮೊಬೈಲ್‌ನಲ್ಲಿ ಇಟ್ಟುಕೊಳ್ಳಬಹುದು.

ಹಾಗಾದರೆ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಹಂತ ಹಂತದ ವಿವರಣೆ ಇಲ್ಲಿದೆ:

1. ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಯುಐಡಿಎಐಯ ಆಧಾರ್ ಪೋರ್ಟಲ್‌ಗೆ (uidai.gov.in ) ಹೋಗಿ.
2. “ಗೆಟ್ ಆಧಾರ್ ” ವಿಭಾಗದ ಅಡಿಯಲ್ಲಿ “ಡೌನ್‌ಲೋಡ್ ಆಧಾರ್” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ಮುಂದಿನ ಪುಟದಲ್ಲಿ, ನೀವು ಮುಂದುವರಿಯಲು ಆಧಾರ್ ಸಂಖ್ಯೆ (UID), ನೋಂದಣಿ ಐಡಿ (EID) ಮತ್ತು ವರ್ಚುವಲ್ ಐಡಿ (VID) ಇದರಲ್ಲಿ ಯಾವುದನ್ನಾದರೂ ನಮೂದಿಸಬಹುದು.
ಮುಸುಕು ಸಹಿತದ ಆಧಾರ್ ಕಾರ್ಡ್‌ನ ಡಿಜಿಟಲ್ ಪ್ರತಿಯನ್ನು ಕೂಡಾ ಪಡೆಯುವ ಅವಕಾಶ ನಿಮಗಿದೆ. (ಇದೇನಿದು ಮುಸುಕು ಅಂತ ಯೋಚಿಸ್ತಾ ಇದ್ದೀರಾ? ಮುಸುಕು ಸಹಿತದ ಆಧಾರ್ ಕಾರ್ಡ್‌ ಆಯ್ಕೆಯಡಿ ಡೌನ್‌ಲೋಡ್ ಮಾಡುವ ಡಿಜಿಟಲ್ ಪ್ರತಿಯಲ್ಲಿ ಪೂರ್ತಿ 12 ಅಂಕಿಗಳ ಯುಐಡಿ ಕಾಣಿಸದೆ ಮರೆಯಾಗಿರುತ್ತವೆ.)
4. ಅಗತ್ಯ ವಿವರಗಳನ್ನು ಭರ್ತಿ ಮಾಡಿದ ಬಳಿಕ “ಸೆಂಡ್ ಒಟಿಪಿ ” ಬಟನ್ ಕ್ಲಿಕ್ ಮಾಡಿ. ಇದಾದ ಬಳಿಕ, ಬಳಕೆದಾರರ ಆಧಾರ್-ನೋಂದಾಯಿತ ಮೊಬೈಲ್ ಸಂಖ್ಯೆಗೆ ಯುಐಡಿಎಐಯು ಒಂದು ಒಟಿಪಿ ಅಥವಾ ಒನ್ ಟೈಮ್ ಪಾಸ್‌ಕೋಡ್ ಅನ್ನು ರವಾನಿಸುತ್ತದೆ.
5. ಈ ಒಟಿಪಿಯನ್ನು ನೀಡಲಾದ ವಿಂಡೋದಲ್ಲಿ ನಮೂದಿಸಬೇಕು.
6. ಒಟಿಪಿ ನಮೂದಿಸಿದ ಬಳಿಕ, “ವೇರಿಫೈ ಆಂಡ್ ಡೌನ್‌ಲೋಡ್ ” ಬಟನ್ ಕ್ಲಿಕ್ ಮಾಡಿ.
ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೀವು ಯಾವ ಸಾಧನವನ್ನು ಬಳಸಿದ್ದಿರೋ ಅದರಲ್ಲಿ ಪಿಡಿಎಫ್ ಸ್ವರೂಪದಲ್ಲಿ ಆಧಾರ್‍ನ ಡಿಜಿಟಲ್ ಪ್ರತಿಯು ಡೌನ್‌ಲೋಡ್ ಆಗುತ್ತದೆ.

ಈ ಡಿಜಿಟಲ್ ಪ್ರತಿ ಅಥವಾ ಇ-ಆಧಾರ್ ಪಾಸ್‌ವರ್ಡ್‌ನಿಂದ ರಕ್ಷಿತವಾಗಿರುತ್ತದೆ. ಅಂದರೆ, ಬಳಕೆದಾರರು ಈ ದಾಖಲೆಯನ್ನು ವೀಕ್ಷಿಸಬೇಕಾದರೆ, ಪಾಸ್‌ವರ್ಡ್ ನಮೂದಿಸಬೇಕಾಗುತ್ತದೆ. ಈ ಪಾಸ್‌ವರ್ಡ್ ಬಳಕೆದಾರರ ಹೆಸರಿನ ಮೊದಲ ನಾಲ್ಕು ಅಕ್ಷರ (ಆಧಾರ್ ಕಾರ್ಡ್‌ನಲ್ಲಿ ನೀಡಿದಂತೆ) ಕ್ಯಾಪಿಟಲ್ ಲೆಟರ್‌ಗಳಲ್ಲಿ ಹಾಗೂ ನಂತರ ಬಳಕೆದಾರರ ಜನ್ಮ ವರ್ಷವನ್ನು YYYY ಸ್ವರೂಪದಲ್ಲಿ ನಮೂದಿಸಬೇಕಾಗುತ್ತದೆ..

ಈ ಪ್ರಕ್ರಿಯೆಯನ್ನು ಯುಐಡಿಎಐ ಬಿಡುಗಡೆಗೊಳಿಸಿರುವ ಈ ವಿಡಿಯೋದಲ್ಲಿ ನೋಡಬಹುದು:

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸಿಎ ಪರೀಕ್ಷೆಗಳ ಮುಂದೂಡಿಕೆ; ಹೊಸ ದಿನಾಂಕಗಳು ಪ್ರಕಟ

Upayuktha

ಮೋದಿ ಪ್ಯಾಕೇಜ್‌ ಹಂತ ಹಂತದಲ್ಲಿ ಜಾರಿ: ಎಂಎಸ್‌ಎಂಇಗಳಿಗೆ, ಆದಾಯ ತೆರಿಗೆದಾರರಿಗೆ ಭರ್ಜರಿ ಕೊಡುಗೆ

Upayuktha

ವೈಯಕ್ತಿಕ ತೆರಿಗೆ ಸರಳೀಕರಣಕ್ಕೆ ಕ್ರಮ: ವಿತ್ತಸಚಿವೆ ನಿರ್ಮಲಾ ಸೀತಾರಾಮನ್

Upayuktha