ಪ್ರಮುಖ ರಾಜ್ಯ

ಪರಿಸರ ಸ್ನೇಹಿ ಗೋಮಯ ಗಣಪತಿ ತಯಾರಿ: ನಾಳೆ ಉಚಿತ ವೆಬಿನಾರ್

ರಾಷ್ಟ್ರೀಯ ಕಾಮಧೇನು ಆಯೋಗದಿಂದ ಆಯೋಜನೆ

ಮಂಗಳೂರು: ಕೇಂದ್ರ ಸರಕಾರದ ರಾಷ್ಟ್ರೀಯ ಕಾಮಧೇನು ಆಯೋಗದ ವತಿಯಿಂದ ಸ್ವ ಉದ್ಯೋಗ / ಉದ್ಯಮ ಸ್ಥಾಪಿಸಲು ಸಹಾಯ ಮಾಡುವ ಉದ್ದೇಶದಿಂದ ಸಗಣಿಯಿಂದ ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಿಸುವ ತರಬೇತಿ ಆಯೋಜಿಸಲಾಗಿದೆ.

ಮುಂಬರುವ ಗಣೇಶನ ಹಬ್ಬಕ್ಕೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಹೆಚ್ಚು ಹೆಚ್ಚು ಬಳಸುವಂತೆ ಜನತೆಯನ್ನು ಪ್ರೇರೇಪಿಸಲು ಗೋಮಯ ಗಣಪತಿಯ ಮೂರ್ತಿಗಳನ್ನು ತಯಾರಿಸುವ ಅಭಿಯಾನಕ್ಕೆ ಚಾಲನೆ ನಿಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದ್ದು, ನಾಳೆ (ಜು.29) ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯ ವರೆಗೆ ಉಇಚತ ವೆಬಿನಾರ್ ಮೂಲಕ ಈ ತರಬೇತಿ ನೀಡಲಾಗುತ್ತದೆ. ಆಸಕ್ತರು ಈ ಕೆಳಗೆ ನೀಡಲಾಗುವ ಲಿಂಕ್ ಬಳಸಿಕೊಂಡು ಈ ವೆಬಿನಾರ್‌ನಲ್ಲಿ ಭಾಗವಹಿಸಬಹುದಾಗಿದೆ.

ಆಯೋಗದ ಅಧ್ಯಕ್ಷ ಡಾ. ವಲ್ಲಭ್‌ಭಾಯ್‌ ಕತಿರಿಯಾ ಈ ವೆಬಿನಾರ್‌ನ ಅಧ್ಯಕ್ಷತೆ ವಹಿಸಲಿದ್ದು, ನಾಗಪುರದ ಸ್ವಾನಂದ್ ಗೋ ವಿಜ್ಞಾನ್‌ ಅನುಸಂಧಾನ ಕೇಂದ್ರದ ಡಾ. ಭಾಗ್ಯಶ್ರೀ ಭಕಾನೆ ಮತ್ತು ಉತ್ತರಾಖಂಡದ ಕಾಶಿಪುರ್‌ ಬನ್ಸಿ ಗೋಶಾಲಾದ ನೀರಜ್ ಚೌಧರಿ ಮಾತನಾಡಲಿದ್ದಾರೆ.

ನಾಗಪುರ ಸ್ವಾನಂದ್ ಗೋ ವಿಜ್ಞಾನ ಅನುಸಂಧಾನ ಕೇಂದ್ರದ ಡಾ. ಜೀತೇಂದ್ರ ಭಕಾನೆ ತರಬೇತಿ ನೀಡಲಿದ್ದು, ರಾಷ್ಟ್ರೀಯ ಕಾಮಧೇನು ಆಯೋಗದ ಐಟಿ ಮತ್ತು ಮಾಧ್ಯಮ ವಿಭಾಗದ ಪುರೀಶ್ ಕುಮಾರ್‌ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಮಂಗಳೂರಿನಿಂದ ಉತ್ತರ ಕರ್ನಾಟಕದ ಪ್ರಮುಖ ಸ್ಥಳಕ್ಕೆ ಬಸ್ ಸೌಲಭ್ಯ

Upayuktha

ಸಹಕಾರ ಇಲಾಖೆಗಳಲ್ಲಿ ಹಣ ದುರುಪಯೋಗ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್

Upayuktha

ನವರಾತ್ರಿ ವಿಶೇಷ: ನಂತೂರು ಶ್ರೀ ಭಾರತೀ ಕಾಲೇಜಿನಲ್ಲಿ ಶನಿವಾರ ನಡೆದ ಆಶ್ಲೇಷಾ ಬಲಿ

Upayuktha
error: Copying Content is Prohibited !!