ಲೇಖನಗಳು ಲೈಫ್‌ ಸ್ಟೈಲ್- ಆರೋಗ್ಯ

ಲಾಕ್‌ಡೌನ್: ಒಂದು ವಾರ ಕಳೆಯಿತು, ಇನ್ನೂ 2 ವಾರ ಇದೆ; ಏನಪ್ಪಾ ಮಾಡೋದು…?

ಅಗತ್ಯವಿರಲಿ, ಇಲ್ಲದಿರಲಿ ಸುಮ್ಮನೇ ಹೊರಗೆ ಸುತ್ತಾಡುತ್ತ, ಅನಗತ್ಯವಾಗಿ ಬೇಡದ ವಸ್ತುಗಳನ್ನು ಖರೀದಿಸುತ್ತ ಅದೇ ಜೀವನ ಅಂದುಕೊಂಡವರಿಗೆ ಮತ್ತು ಅದೇ ಜೀವನಶೈಲಿ ಬೆಳೆಸಿಕೊಂಡವರಿಗೆ ಲಾಕ್‌ಡೌನ್ ಅವಧಿಯಲ್ಲಿ ಏನಪ್ಪಾ ಮಾಡೋದು ಅಂತ ಚಿಂತೆಯಾಗಿರಬಹುದು. ಅಂಥವರಿಗಾಗಿ ಇಲ್ಲೊಂದಿಷ್ಟು ಟಿಪ್ಸ್‌ಗಳಿವೆ ಓದಿ.

(ಚಿತ್ರ ಕೃಪೆ: ಲೈಫ್‌ಹ್ಯಾಕ್)

ಬಾವಿ ಇದೆಯಾ?
ಹಾಗಾದರೆ ನೀರಿನ ಪಂಪ್ ಬಳಸೋದು ಬೇಡ; ನೀರು ಮೊಗೆದೇ ಉಪಯೋಗಿಸೋಣ

ಬಟ್ಟೆ ಒಗೆಯುವ ಕಲ್ಲು ಇದೆಯಾ?
ಹಾಗಾದ್ರೆ ವಾಷಿಂಗ್ ಮೆಶಿನ್ ಬಳಸದೇ ಕೈಯಲ್ಲೇ ಬಟ್ಟೆ ಒಗೆಯೋಣ

ರುಬ್ಬುವ ಕಲ್ಲು ಇದೆಯಾ?;
ಹಾಗಾದ್ರೆ ಮಿಕ್ಸಿ ಗ್ರೈಂಡರ್ ಬದಿಗಿಡಿ; ಕಲ್ಲಿನಲ್ಲೇ ರುಬ್ಬೋಣ

ಮೋಪ್ ಹಿಡಿದು ನಿಂತೇ ನೆಲ ಒರೆಸುತ್ತಿದ್ದೀರಾ?
ಸ್ವಲ್ಪ ದಿನ ಅದನ್ನು ಬದಿಗಿಡಿ‌
ಮಂಡಿಯೂರಿ ಒರೆಸುವ ಬಟ್ಟೆಯಿಂದ ಕೈಯಲ್ಲೇ ನೆಲ ಒರೆಸೋಣ..

ಡೈನಿಂಗ್ ಟೇಬಲ್ ಇದೆಯಾ ..?; ಅದನ್ನು ಬದಿಗಿಡಿ , ಎಲ್ಲರೂ ನೆಲದಲ್ಲೇ ಕುಳಿತು ಊಟ ಮಾಡೋಣ.

ಮನೆಯಲ್ಲಿ ನಾಲ್ಕೈದು ಜನ ಇದ್ದೀರಾ?
ಒಂದಷ್ಟು ಹಪ್ಪಳ ಸಂಡಿಗೆ ತಯಾರಿಸಿಟ್ಟುಕೊಳ್ಳಬಹುದು.

ಮನೆಯ ಸಮೀಪ ದೇವಸ್ಥಾನಗಳಿವೆಯಾ?
ಗಾಡಿ ಬಳಸದೇ ನಿತ್ಯ ನಡೆದೇ ಹೋಗಿ ಪ್ರಾರ್ಥನೆ ಸಲ್ಲಿಸಿ ಬರೋಣ (ದೇವಸ್ಥಾನ ಬಂದ್ ಇದ್ರೆ ಹೊರ ಆವರಣದಲ್ಲೇ ಪ್ರದಕ್ಷಿಣೆ ಬರಬಹುದು)

ಇಷ್ಟೆಲ್ಲ ಆಗುವಾಗ ಸಂಜೆ ಆಗ್ತದೆ…
ಮನೆಯಂಗಳದಲ್ಲಿ ಸಣ್ಣ ತೋಟ, ಹೂವಿನ ಗಿಡಗಳಿದ್ದರೆ ಬಾವಿಯಿಂದ ನೀರು ಮೊಗೆದು ಗಿಡಗಳಿಗೆ ಹಾಕೋಣ.

ಎಲ್ಲ ಕುಳಿತು ಸ್ವಲ್ಪ ಹೊತ್ತು ಭಜನೆ ಮಾಡೋಣ.

ಊಟ ಮಾಡಿ, ನ್ಯೂಸ್ ನೋಡಿ‌ ಕೊರೊನಾ ಪರಿಣಾಮದ ಸ್ಥಿತಿಗತಿಗಳನ್ನು ತಿಳಿದುಕೊಳ್ಳೋಣ. ಒಳ್ಳೆಯ ಸಾಹಿತ್ಯ ಪುಸ್ತಕಗಳಿದ್ದರೆ ಸ್ವಲ್ಪ ಹೊತ್ತು ಓದೋಣ ಅಥವಾ ಸುಶ್ರಾವ್ಯ ಸಂಗೀತ ಕೇಳೋಣ.
ಮಲಗೋಣ.

ಮರುದಿನವೂ ಅದೇ ದಿನಚರಿ ನಡೆಯಲಿ.

ದೇಹ ಮನಸ್ಸಿನ ಆರೋಗ್ಯ ಸೂಪರ್ ಆಗ್ತದೆ ; ಸಮಯ ಸದ್ವಿನಿಯೋಗ ಆಗ್ತದೆ… ನೋಡ್ತಾ ನೋಡ್ತಾ ಇದ್ದಾಗೇ ಲಾಕ್ ಡೌನ್ ಮುಗೀತದೆ…!! ಮತ್ತೆ ಬ್ಯುಸಿ ಆಗ್ತೇವೆ..

ಆಗ ನೀರಿನ ಪಂಪ್ , ವಾಷಿಂಗ್ ಮೆಶಿನ್ , ಮಿಕ್ಸಿ ಗ್ರೈಂಡರ್ ,ಮೋಪು ಮೊದಲಾವುಗಳ ಬಳಕೆ..ಇದ್ದದ್ದೇ…

ಮತ್ತೆ ಅದೇ ಓಡಾಟ ಜಂಜಾಟ …

ಸಿವಿಎನ್ ಜೋಡ್ ಎಂಬ ಇಟಾಲಿಯನ್ ಸಾಹಿತಿ ದಿ ಸಿವಿಲೈಝೇಜನ್ ಆಫ್ ಟುಡೇ ಎಂಬ ಕೃತಿಯಲ್ಲಿ ಇದನ್ನೇ ಮಾರ್ಮಿಕವಾಗಿ ಬರೆಯುತ್ತಾನೆ. ಮನುಷ್ಯ ಒತ್ತಡದ ಬದುಕಿನಿಂದ ಹೊರಬಂದು, ಸಮಯದ ಉಳಿತಾಯಕ್ಕಾಗಿ ಯಂತ್ರಗಳ ಸಂಶೋಧನೆ ನಡೆಸಿದ. ಪರಿಣಾಮ ಸಮಯ ಉಳಿಯಿತು, ಮತ್ತಷ್ಟು ಯಂತ್ರಗಳ ಶೋಧನೆ ಆಯ್ತು.. ಮತ್ತೆ ಸಮಯ ಉಳಿಯಿತು, ಕೆಲಸ ಕಡಿಮೆ ಆಯ್ತು ದೇಹಾರೋಗ್ಯ ಕೆಟ್ಟಿತು.

ಮೆದುಳು ಮನಸ್ಸು ಖಾಲಿ ಉಳಿಯಿತು, ಸಲ್ಲದ ಯೋಚನೆಗಳು- ಚಿಂತನೆಗಳು ದ್ವೇಷ ಅಸೂಯೆಗಳು ನೆಲೆಯಾದವು. ಒಟ್ಟು ಪ್ರಪಂಚವೇ ಕೆಡುವಷ್ಟಾಯಿತು… ಸಮಾಜ ಜೀವನ ವಿಷಮಯ ಆಗ್ತಾಹೋಯ್ತು…!! ಎಷ್ಟು ಸತ್ಯ ನೋಡಿ… ಈಗ ಕಾಲ‌ ನಮ್ಮ‌ ಯಾಂತ್ರಿಕ ವೇಗಕ್ಕೆ ಬ್ರೇಕ್ ಹಾಕಿದೆ.. ಮತ್ತೆ ಒಂದಷ್ಟು ಹಿಂದೆ ಹೆಜ್ಜೆ ಹಾಕಿ ಆ ಜೀವನ ಶೈಲಿಯಲ್ಲಿ ಕಾಲ‌ ಕಳೆಯೋಣ; ಒಂದಷ್ಟು ಥ್ರಿಲ್ ಸಿಗ್ಬೋದು..!! ಬಳಿಕ ಹೊಸ ನಡೆಗೆ ಸಿದ್ಧರಾಗೋಣ..

ಕೊರೊನಾ ತೊಲಗಲಿ… ನಮ್ಮಜೀವನ, ಚಿಂತನೆಗಳೂ ಬದಲಾಗಲಿ; ನಾವು ಮಾತ್ರ ಬದುಕಬೇಕೆಂಬ ಹಮ್ಮು ಬಿಟ್ಟು ಪ್ರಕೃತಿಯನ್ನೂ ಕಾಡು ಮರಗಿಡ, ನದಿ, ನೀರು ಗಾಳಿ ಹಸು ಇತರೆ ಪ್ರಾಣಿಗಳನ್ನು ಬದುಕಿಸೋಣ ಅವುಗಳೂ ಬದುಕಲಿ. ಭೂಮಿ ಸ್ವರ್ಗವಾಗಲಿ ..

✍ ಜಿ ವಾಸುದೇವ ಭಟ್ ಪೆರಂಪಳ್ಳಿ

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ನಿಮಗೆ ‘ಸ್ಟ್ರೆಸ್‌’ ಇದೆಯಾ ಅಂತ ತಿಳಿಯೋದು ಹೇಗೆ? ‘ಒತ್ತಡ’ ಮುಕ್ತ ಜೀವನ ನಡೆಸೋದು ಹೇಗೆ?

Upayuktha

ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್- ಅತಿಯಾದ ಗೀಳಿನ ಕಾಯಿಲೆ

Upayuktha

ಬಿಕ್ಕಳಿಕೆ ಎಂಬ ಬೇಡದ ಬಳವಳಿ: ಬಿಕ್ಕಳಿಕೆ ಬರೋದ್ಯಾಕೆ, ಅದನ್ನು ನಿಲ್ಸೋದು ಹೇಗೆ?

Upayuktha