ರಾಜ್ಯ

ರೇಡಿಯೋ ಜಾಕಿ ರಶ್ಮಿ ಉಳ್ಳಾಲ್ ಗೆ ‘ಹೃದಯವಂತ’ ಪ್ರಶಸ್ತಿ

ಬೆಂಗಳೂರು: ಪರಿಸರ ಹಾಗೂ ಸಾಮಾಜಿಕ ಕ್ಷೇತ್ರದ ಸೇವೆಯನ್ನು ಗುರುತಿಸಿ “ಹೃದಯವಂತ ಪ್ರಶಸ್ತಿ 2021” ರಶ್ಮಿ ಉಳ್ಳಾಲ್ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ 14ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ನೀಡುವ ಹೃದಯವಂತ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರದಾನ ಮಾಡಲಿದ್ದಾರೆ.

ಯಾರೀಕೆ ರಶ್ಮಿ ಉಳ್ಳಾಲ್‌…?

ರಶ್ಮಿ ಉಳ್ಳಾಲ್ ರೇಡಿಯೋ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದು ಪರಿಸರ ಪ್ರೇಮಿ, ಸಮಾಜ ಸೇವಕಿಯಾಗಿ ಮಂಗಳೂರಿನಲ್ಲಿ ಗುರುತಿಸಿಕೊಂಡಿದ್ದಾರೆ.

ಮರವನ್ನು ಬೆಳೆಸಬೇಕು, ಉಳಿಸಬೇಕು, ಪ್ರಕೃತಿಯ ಮಹತ್ವ, ಸ್ವಚ್ಛ ಮಂಗಳೂರು ಈ ವಿಷಯದ ಬಗ್ಗೆ ಕಾರ್ಯಕ್ರಮವನ್ನು ನಡೆಸಿದ್ದು, ಬಾಲಾಶ್ರಮ ಹಾಗೂ ವೃದಾಶ್ರಮಕ್ಕೆ ಅಗತ್ಯ ವಿರುವ ವಸ್ತುಗಳ ಪೂರೈಕೆ ಜೊತೆಗೆ ಊಟ, ತಿಂಡಿಯ ವ್ಯವಸ್ಥೆ, ಮನೋರಂಜನಾ, ಹಾಗೂ ಆಶ್ರಮದ ಮಕ್ಕಳಿಗೆ ಶಿಕ್ಷಣದ ಮೌಲ್ಯವನ್ನು ತಿಳಿಸುವ ಕಾರ್ಯಕ್ರಮವನ್ನು ಅನೇಕ ಬಾರಿ ನೆಡೆಸಿ ಯಶಸ್ವಿಯಾಗಿದ್ದು ಅಲ್ಲದೆ ಸಮಾಜಕ್ಕೆ ತಿಳಿ ಹೇಳುವ ಹಲವು ಡಾಕ್ಯುಮೆಂಟರಿ ತಯಾರಿಸಿದ್ದಾರೆ.

ಚಿಕ್ಕ ಅಂಗಡಿಗಳಲ್ಲಿ ಚೌಕಾಸಿ ಮಾಡದಿರಿ, “ರೈತರ ಮಹತ್ವ”, “ಮಹಿಳೆಯರನ್ನು ಗೌರವಿಸು”, “ಗಿಡ ನೆಡಲು ಜಾಗ ಹುಡುಕುವವರಿಗೆ ಸ್ಮಶಾನ ದಲ್ಲೂ ಗಿಡ ನೆಟ್ಟ ನಿದರ್ಶನ “ಮಾಧವ್ ಉಳ್ಳಾಲ್, “ಕುತ್ತಾರು ತಿಮ್ಮಕ್ಕ ಪಾರ್ದನ ಕಲಾವಿದೆ”. ಮಹಿಳಾ ಸಾಧಕಿಯನ್ನು ಪರಿಚಯಿಸುವ ಪ್ರಯತ್ನ, ಹೀಗೆ ವಿವಿಧ ಡಾಕ್ಯುಮೆಂಟರಿಗೆ ಸ್ಕ್ರಿಪ್ಟ್‌, ಧ್ವನಿ, ನಿರ್ದೇಶನ ಮಾಡಿದ್ದಾರೆ. ಕುತ್ತಾರು ಆಶ್ರಮದಲ್ಲಿ ಆಶ್ರಮದ ಮಕ್ಕಳ ಸಹಾಯದಿಂದ ಸೀಡ್ ಬಾಲ್ ಅಭಿಯಾನ ವನ್ನು ನಡೆಸಿದ್ದು 1000ಕ್ಕೂ ಹೆಚ್ಚು ಸೀಡ್ ಬಾಲ್ ತಯಾರಿಸಿ ಯೆನಪೋಯ ಕಾಲೇಜು ಪರಿಸರದಲ್ಲಿ ಗಿಡ ಬೆಳೆದ ನಿಜ ನಿದರ್ಶನ ನಾವೆಲ್ಲರೂ ಕಾಣಬಹುದು.

ಪ್ರಕೃತಿಯನ್ನು ಅಪಾರವಾಗಿ ಪ್ರೀತಿಸುವ ಇವರು ತಮ್ಮ ವಿವಾಹದಂದು ಬಂದ ಎಲ್ಲಾ ಅತಿಥಿಗಳಿಗೆ ಗಿಡವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಬಹಳಷ್ಟು ಜನರು ಪ್ರೇರಣೆ ಪಡೆದು 2000ಕ್ಕೂ ಹೆಚ್ಚು ಜನರು ಗಿಡವನ್ನು ಅವರ ವರ ಶುಭ ಕಾರ್ಯಗಳಿಗೆ ಬಳಸಿದ್ದು ಜನರಿಗೆ ಶುಭಕಾರ್ಯದಲ್ಲಿ ಗಿಡ ನೆಡುವ ತಿಳುವಳಿಕೆ ನೀಡುವ ಕೆಲಸ ಮಾಡಿದ್ದಾರೆ.

ಜೊತೆಗೆ ಬರವಣಿಗೆಯಲ್ಲೂ ಗುರುತಿಸಿಕೊಂಡಿದ್ದು ಮರಕ್ಕೊಂದು ಪುನರ್ಜನ್ಮ, ಪಶ್ಚಿಮ ಘಟ್ಟ ಎಂಬ ಸ್ವರ್ಗ, ಪ್ರಕೃತಿಯ ವಿರುದ್ಧ ಯಾವತ್ತೂ ಹೋಗದಿರೋಣ ಶೀರ್ಷಿಕೆ ಹೊಂದಿರುವ ಬಹುತೇಕ ಬರವಣಿಗೆ ಸಾಮಾಜಿಕ ಜಾಗ್ರತಿಯ ಕಳಕಳಿಯಿಂದ ಕೂಡಿದ್ದು 100ಕ್ಕೂ ಹೆಚ್ಚು ಲೇಖನಗಳು ಪ್ರಮುಖ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

ಮಂಗಳೂರಿನ ಬಹಳಷ್ಟು ಬೃಹತ್ ವೇದಿಕೆ ಯಲ್ಲಿ ಮುಖ್ಯ ಅತಿಥಿಯಾಗಿ ಕಾಣಿಸಿ ಕೊಂಡಿದ್ದು, ಬದುಕಿನ ದಾರಿ, ಪ್ರಕೃತಿ ಸಂರಕ್ಷಣೆ, ಪ್ರಕೃತಿ ಮಹತ್ವ, ಸೀಡ್ ಬಾಲ್ ಅಭಿಯಾನ, ಹೀಗೆ ಪ್ರಕೃತಿಯ ಬಗ್ಗೆ ಹಲವಾರು ಕಾರ್ಯಕ್ರಮ ನಡೆಸಿರುತ್ತಾರೆ ರಶ್ಮಿ ಉಳ್ಳಾಲ್.

ಸಾಮಾಜಿಕ ಕಾಳಜಿ ಗುರುತಿಸಿ ಆಮಂತ್ರಣ ಹಬ್ಬ ವಿಘ್ನೇಶ್ವರ ಫ್ರೆಂಡ್ಸ್ ಮೂಡು ಮಾರ್ನಾಡು ವೇದಿಕೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ರಶ್ಮಿ ಉಳ್ಳಾಲ್ ಅವರ ಕೆಲಸವನ್ನು ಗುರುತಿಸಿದೆ. ಬಹಳಷ್ಟು ಸಿನಿಮಾ ಹಾಗೂ ಸಂಗೀತ ಕ್ಷೇತ್ರದ ದಿಗ್ಗಜರ ಸಂದರ್ಶನ ನಡೆಸಿದ್ದು ಇದೀಗ “ದಿವ್ಯಾಸ್ ಅನ್ನಪೂರ್ಣ” ಯೋಜನೆಯ ಪ್ರಕಾರ ಮಂಗಳೂರಿನ, ಫಳ್ನೀರ್, ಕಂಕನಾಡಿ, ಸ್ಟೇಟ್ ಬ್ಯಾಂಕ್, ಹಂಪನ್ಕಟ್ಟ ಸೇರಿದಂತೆ ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಮೂಕ ಪ್ರಾಣಿ ಹಾಗೂ ಬಡ ಜನರಿಗೆ ರಾತ್ರಿ ಊಟ ನೀಡುವ ಯೋಜನೆ ಮಾಡಿದ್ದು ಬಹುತೇಕ ಯುವ ಜನರಿಗೆ ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವ ಪ್ರೇರಣೆ ನೀಡುತ್ತಾ ಇದ್ದಾರೆ ದಿವ್ಯಾಸ್ ತಂಡ.

ಅತ್ಯಂತ ಕಿರಿಯ ವಯಸ್ಸಿನಲ್ಲಿ ಬಾನೆತ್ತರದ ಸಾಧನೆ. ಮಂಗಳೂರು ಉಳ್ಳಾಲ ಸೇರಿದಂತೆ ಬಹಳಸ್ಟು ಮುಕಪ್ರಾಣಿ ಹಾಗು ಜನರಿಗೆ ಲಾಕ್ ಡೌನ್ ಸಂದರ್ಭದಲ್ಲಿ ಊಟದ ಕಿಟ್ ಹಾಗು ಸರಕಾರಿ ಶಾಲೆಗೆ ಪುಸ್ತಕ, ಕೋವಿಡ್ ಥರ್ಮೋಮೀಟರ್ ಸಿಗುವಂತೆ ಆರ್ಥಿಕ ಸಹಾಯ ಮಾಡಿರುತ್ತಾರೆ ರಶ್ಮಿ ಉಳ್ಳಾಲ್.

ಜನರು ಇಂತಹ ಕಾರ್ಯದಿಂದ ಪ್ರೇರಣೆ ಪಡೆದು ಮುಂದುವರಿಸಬೇಕು ಎನ್ನುವುದು ರಶ್ಮಿಯ ಉದ್ದೇಶ.

ರಶ್ಮಿ ಉಳ್ಳಾಲ್ ಅವರು ಸರಕಾರಿ ಬ್ಯಾಂಕ್ ಸಿಬ್ಬಂದಿ ಆಗಿದ್ದ ಯು. ಎ ಪ್ರೇಮನಾಥ್ ಮತ್ತು ಸರಕಾರಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಪ್ರಮೀಳಾ ಕುಮಾರಿ ಅವರ ದ್ವಿತೀಯ ಪುತ್ರಿ ಹಾಗೂ ಸಾಗರ್ ಅವರ ಪತ್ನಿಯಾಗಿದ್ದಾರೆ. 14ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಹೃದಯವಂತ ಪ್ರಶಸ್ತಿಯನ್ನು ಸಿ.ಎಂ ಯಡಿಯೂರಪ್ಪ ಪ್ರದಾನ ಮಾಡಲಿರುವುದು ಪೋಷಕರಿಗೆ ಖುಷಿ ತಂದಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕೋವಿಡ್‌ 19 ಅಪ್ಡೇಟ್ಸ್‌: ರಾಜ್ಯದಲ್ಲಿಂದು 149 ಹೊಸ ಕೊರೊನಾ ಕೇಸ್

Upayuktha

ಗೇಮಿಂಗ್, ಅನಿಮೇಷನ್ ಕ್ಷೇತ್ರದಲ್ಲಿ ಹೂಡಿಕೆಗೆ ಕರ್ನಾಟಕ ಪ್ರಶಸ್ತವಾದ ತಾಣ: ಸಚಿವ ಜಗದೀಶ ಶೆಟ್ಟರ್

Upayuktha

ನ್ಯಾಯಾಂಗದ ಮೇಲೆ ಪ್ರತಿವಾದಿಗಳಿಂದಲೇ ಒತ್ತಡ: ಶ್ರೀರಾಮಚಂದ್ರಾಪುರ ಮಠ ಸ್ಪಷ್ಟನೆ

Upayuktha