ರಾಜ್ಯ

ಪ್ರಕೃತಿದತ್ತ ಗಿಡಮೂಲಿಕೆಗಳಲ್ಲಿ ಮಾನವಕೋಶ ಪುನರುತ್ಥಾನ ಅಂಶಗಳು: ವಿಚಾರಸಂಕಿರಣ

ಬೆಂಗಳೂರು: ಆಯುರ್ವೇದ ಮೂಲಕ ಮಾನವ ಕೋಶ ಪುನರುತ್ಪಾದನೆ ಸಿದ್ಧಾಂತದಲ್ಲಿ ಗುಣಪಡಿಸಲಾಗದ ಆರೋಗ್ಯ ಅಸ್ವಸ್ಥತೆಗಳಿಗೆ ಮಿರಾಕ್ಲ್ ಡ್ರಿಂಕ್ಸ್ ಎಂಬ ಗಿಡಮೂಲಿಕೆ ಔಷಧಿಗಳನ್ನು ಕಂಡುಹುಡುಕಿದ ಬಿಹಾರ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಹಾಗೂ ಗಿಡಮೂಲಿಕೆ ಔಷಧಿಗಳ ಸಂಶೋಧಕ ಎಸ್. ಎಂ. ರಾಜು ಅವರು ಔಷಧೀಯ ಮಾಹಿತಿಗಳ ಕುರಿತು ಹಲವು ಮಹತ್ವದ ವಿಷಯಗಳನ್ನು ಮಂಡಿಸಿದರು.

ಆಯುರ್ವೇದ ಮೂಲಕ ಮಾನವ ಕೋಶ ಪುನರುತ್ಪಾದನೆ ಸಿದ್ಧಾಂತ ಕುರಿತು ಬೆಂಗಳೂರಿನ ಹೋಟೆಲ್ ಪರಾಗ್ ನಲ್ಲಿ ಜರುಗಿದ ಔಷಧೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಗಿಡಮೂಲಿಕಾ ಔಷಧಗಳ ಕುರಿತ ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿ.ಆರ್.ಎಲ್. ಸಮೂಹ ಸಂಸ್ಥೆ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಮತ್ತು ಗೌರವ ಅತಿಥಿಗಳಾಗಿ ಎಸ್. ಡಿ. ಎಂ. ಆಯುರ್ವೇದ ಮಹಾವಿದ್ಯಾಲಯ, ಉಡುಪಿ ಇದರ ನಿವೃತ್ತ ಪ್ರಾಂಶುಪಾಲ ಡಾ. ಎಸ್.ಕೆ. ರಾಮಚಂದ್ರ ಭಾಗವಹಿಸಿದ್ದರು.

ಸಿನೆಮಾ ನಟ ಸುಂದರ ರಾಜ್, ಕೆ.ಟಿ.ಜಿ. ಆಯುರ್ವೇದ ಮಹಾವಿದ್ಯಾಲಯ, ಬೆಂಗಳೂರು ಇದರ ಪ್ರಾಂಶುಪಾಲ ಡಾ. ಫ್ರೊ. ಬಿ.ಎನ್. ರಮೇಶ್ ಎಂ.ಡಿ (ಆಯು), ಹಾಗೂ ಅಖಿಲ ಭಾರತ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಇದರ ಸದಸ್ಯ ಡಾ ಶ್ರೀಕೃಷ್ಣ ಮಿಟ್ಟಲ್ ಅವರು ಭಾಗವಹಿಸಿ ಈ ವಿನೂತನ ಗಿಡಮೂಲಿಕೆ ಔಷಧಗಳ ಬಗ್ಗೆ ತಮ್ಮ ಅಭಿಪ್ರಾಯ ವಿನಿಮಯ ಮಾಡಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕಪಾಲ ಬೆಟ್ಟದಲ್ಲಿ ಹಿಂದೂ ಸಂಘಟನೆಗಳ ತೀವ್ರ ಪ್ರತಿಭಟನೆ, ಡಿಕೆಶಿ ವಿರುದ್ಧ ಗುಡುಗಿದ ಕಲ್ಲಡ್ಕ ಪ್ರಭಾಕರ ಭಟ್

Upayuktha

ಧರ್ಮಸ್ಥಳದಲ್ಲಿ ಮತ್ಸ್ಯ ಪ್ರದರ್ಶನಾಲಯ ಉದ್ಘಾಟನೆ

Upayuktha

ಕೋಲಾರ: ಐಫೋನ್‌ ಕಾರ್ಖಾನೆಯಲ್ಲಿ ಐಫೋನ್‌ ಧ್ವಂಸ

Harshitha Harish