ಲೇಖನಗಳು

ಮಾನವೀಯತೆ: ಅಸಹಾಯಕರು ಕಂಡಾಗ ಕಡೆಗಣಿಸಬಾರದು…!

ಉಡುಪಿ ಶ್ರೀಕೃಷ್ಣ ಮಠ ಕನಕಗೋಪುರ ಬಳಿ ಓರ್ವ ಅಪರಿಚಿತ ದೃಢಕಾಯಕದ ಯುವಕ ಭಿಕ್ಷಾಟನೆ ನಡೆಸುತ್ತಿದ್ದ. ನೋಡಲು ಸುಸಂಸ್ಕೃತನಂತೆ ಕಾಣುತ್ತಿದ್ದ. ಆತನು ಧರಿಸಿರುವ ಬಟ್ಟೆ ಶುಭ್ರವಾಗಿತ್ತು. ಮುಖದಲ್ಲಿ ಮಾತ್ರ ವೇದನೆಯ ಛಾಯೆ ಎದ್ದು ಕಾಣುತಿತ್ತು. ಆತ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣ ದೇವರ ದರ್ಶನ ಪಡೆಯುವ ಭಕ್ತರಲ್ಲಿ ಭಿಕ್ಷೆಗೆ ಕೈ ಮುಂದೆ ಒಡ್ಡುತ್ತಿದ್ದ. ಕೆಲವರಂತು ಐದೊ ಹತ್ತೊ ಚಿಲ್ಲರೆ ಹಣ ನೀಡಿ ಮುಂದೆ ಸಾಗುತ್ತಿದ್ದರು.

ಕೆಲವರು ಈತ ಕೈಯೊಡ್ಡಿದಾಗ ‘ದುಡಿಯಲು ಧಾಡಿಯ..!? ಜೀವ ಗಟ್ಟಿ ಇದೆ’ ಎಂದು ಹೇಳುತ್ತಿದ್ದರು. ಕೆಲವೊಮ್ಮೆ ಮಠದ ಕಾವಲುಗಾರ ಎಬ್ಬಿಸಿ ಓಡಿಸುತ್ತಿದ್ದ. ಎಲ್ಲವನ್ನು ಸಹಸಿಕೊಂಡು ಯುವಕ ಭಿಕ್ಷಾಟನೆ ಮುಂದುವರಿಸುತ್ತಿದ್ದ. ಆತನ ವರ್ತನೆ ಕಂಡು ಸನಿಹದಲ್ಲಿ ಆರ್ಯುವೇಧ ಔಷಧಿ ಉತ್ಪನ್ನಗಳ ಮಾರಾಟ ಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿರುವ ಗೆಳೆಯ ಐಸಿರಿ ಸೂರಿ ಕುಕ್ಯಾನ್ ಅವರಿಗೆ ಏನೋ ಸಂಶಯ ಅಲ್ಲದೆ, ಪಾಪಪ್ರಜ್ಞೆಯೂ ಕಾಡಿತು. ವಿಚಾರಿಸುವಂತೆ ಗೆಳೆಯ ನನ್ನಲ್ಲಿ ಹೇಳಿಕೊಂಡ.

ವಿಚಾರಣೆ ನಡೆಸಿದಾಗ ಆತನ ವೇದನಾಗಾಥೆ ತಿಳಿದು ಬಂದಿತು. ಯುವಕ ಒರ್ವ ಪದವಿಧರ, ಮಾನಸಿಕವಾಗಿ ಬಹಳವಾಗಿ ನೊಂದಿದ್ದಾನೆ. ಖಿನ್ನತೆಗೆ ಒಳಪಟ್ಟಂತೆ ಕಂಡು ಬಂದ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನಿವಾಸಿ ಎಂದು ತಿಳಿದು ಬಂದಿತು. ಯಾಕಪ್ಪ, ಭಿಕ್ಷಾಟನೆ ಮಾಡುತ್ತಿಯಾ…? ಎಂದು ಕೇಳಿದಾಗ, ಅವನೆಂದ, ‘ಜೀವನದಲ್ಲಿ ಸೋತಿದ್ದೇನೆ. ಪದವಿ ಶಿಕ್ಷಣ ಪಡೆದಿದ್ದೇನೆ. ಆದರೆ ಕೆಲಸ ಇಲ್ಲ. ಜೀವನದಲ್ಲಿ ಯಶಸ್ವಿಯಾಗಲು ನಾನು 48 ದಿನಗಳ ಕಾಲ ದೇವಸ್ಥಾನಗಳ ಬಾಗಿಲಲ್ಲಿ ಭಿಕ್ಷಾಟನೆ ಮಾಡುವ ವೃತ ಮಾಡುತ್ತಿದ್ದೇನೆ. ಭಿಕ್ಷೆ ಎತ್ತಿದ ಹಣ ನನಗಲ್ಲ, ಅಲ್ಪ ಸ್ವಲ್ಪ ಊಟಕ್ಕೆ ಉಪಯೋಗಿಸಿ ಉಳಿದ ಹಣವನ್ನು ದೇವಸ್ಥಾನದ ಕಾಣಿಕೆ ಡಬ್ಬಿಗೆ ಹಾಕುತ್ತೇನೆ ಎಂದ.

ಅವನು ನೀಡಿದ ಉತ್ತರ ಕೇಳಿ ಅಚ್ಚರಿ ಪಡುವಂತಾಯಿತು. ಈ ಭಿಕ್ಷಾಟನೆ ವ್ರತ ಮಾಡಲು ಹೇಳಿದವರಾರು…? ಎಂದು ಆತನಲ್ಲಿ ಮರು ಪ್ರಶ್ನಿಸಿದೆ. ಯಾರೂ ಹೇಳಿಲ್ಲ. ನಾನು ಅಮ್ಮ ಐ ಲವ್ ಯೂ ಚಿತ್ರ ನೋಡಿದೆ. ಅದರಲ್ಲಿ ಇದೆ ರೀತಿ ಇದೆ. ವಿಶೇಷ ಎಂದರೆ ಆ ಚಿತ್ರದಲ್ಲಿ ಬರುವ ಭಿಕ್ಷಾಟನೆ ದೃಶ್ಯಗಳ ಚಿತ್ರಿಕರಣ ನಡೆದಿರುವುದು ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಎಂದು ತಿಳಿದು ಬಂದಿತು. ಮನನೊಂದ ನಾನು ಹಾಗಾಗಿ ನಾನು ಅದರಂತೆ ಅನುಸರಿಸಿದೆ ಎಂದ.

ಯುವಕನ ಉತ್ತರ ಕೇಳಿ ನಾನು ವಿಸ್ಮಯಗೊಳಗಾದೆ. ಯುವಕನಲ್ಲಿ ಆತ್ಮೀಯತೆಯಿಂದ ಮಾತಾಡಿಸಿ ಆತನ ತಾಯಿಯ ಸಂಪರ್ಕ ಸಂಖ್ಯೆ ಸಂಪಾದಿಸಿದೆ. ನಂತರ ಯುವಕನ ತಾಯಿಯೊಂದಿಗೆ ಮಾತಾಡಿಸಿದೆ. ಪಾಪ.. ಆ ಅಮ್ಮ- ‘ಮನೆಯಿಂದ ಮಗ ಕಾಣೆಯಾಗಿದ್ದಾನೆ. ಅವನ ಹುಡುಕಾಟದಲ್ಲಿ ನಾವಿದ್ದೇವೆ’ ಎಂದು ಹೇಳಿಕೊಂಡರು. ಏನು ಹೆದರಬೇಡಿ, ಮಗ ಉಡುಪಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಇದ್ದಾನೆ. ನೀವು ಉಡುಪಿಗೆ ಬಂದು ನಮ್ಮನ್ನು ಸಂಪರ್ಕಿಸಿ ಮಗನನ್ನು ನಿಮ್ಮ ವಶಕ್ಕೆ ನೀಡುವ ಸುರಕ್ಷಿತ ವ್ಯವಸ್ಥೆ ನಾವು ಮಾಡುತ್ತೇವೆ ಎಂದು ಹೇಳಿ ಧೈರ್ಯ ತುಂಬಿದೆ.

ನಡೆದ ವಿದ್ಯಮಾನವನ್ನು ಗುರುಗಳು ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ಅವರಲ್ಲಿ ಹೇಳಿಕೊಂಡೆ. ಅವರು ತಕ್ಷಣ ತಮ್ಮ ಬೊಲೊರೊ ವಾಹನದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದರು. ಯುವಕನಿಗೆ ಸಾಂತ್ವನ ಹೇಳಿದರು. ನಂತರ ದೊಡ್ಡಣಗುಡ್ಠೆ ಡಾ ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿದರು.

ಆಪ್ತ ಸಮಾಲೋಚನೆ ಪ್ರಕ್ರಿಯೆಯಲ್ಲಿ ಅವನಲ್ಲಿ ಇರುವ ವೇದನೆಗಳು ತಿಳಿದು ಬಂದವು. ವಿಶು ಶೆಟ್ಟಿ ತಕ್ಷಣದ ಸ್ಪಂದನೆ, ಕರ್ತವ್ಯಪ್ರಜ್ಞೆ ಮನಸ್ಸು ಆನಂದಗೊಳಿಸಿತು. ಇನ್ನೂ ಕೆಲವು ದಿನಗಳಲ್ಲಿ ಪದವಿಧರ ಯುವಕ ಖಿನ್ನತೆ ವ್ಯಾಧಿಯಿಂದ ಹೊರಬರಬಹುದು. ಅತ್ತ ಹೆತ್ತವರು ಮಗನ ಕರೆದೊಯ್ಯಲು ಚಿತ್ರದುರ್ಗದಿಂದ ಪ್ರಯಾಣ ಬೆಳೆಸಿದ್ದಾರೆ.

ಹೆತ್ತವರು ಮನೆಯಲ್ಲಿ ಮಗನಿಲ್ಲದೆ ದುಖದಲ್ಲಿದ್ದರು. ದೀಪಾವಳಿ ಆಚರಿಸಲು ವೇದನೆ ಅವರಿಗೆ ತಡೆಯೊಡ್ಡಿತ್ತು. ಈಗ ಮಗನ ಇರುವಿಕೆ ತಿಳಿದು ದೀಪಾವಳಿ ಸಂಭ್ರಮ ಅವರ ಮನೆ ಮನದಲ್ಲಿ ಕಂಡುಬಂದಿದೆ. ನಾವು ಯಾವತ್ತೂ ಅಸಹಾಯಕ ಸ್ಥಿತಿಯಲ್ಲಿ ಯಾರನ್ನಾದರೂ ಕಂಡಾಗ ಕಡೆಗಣಿಸಬಾರದು ಎನ್ನುವ ನೀತಿ ಪಾಠ ನಮಗೆ ಈ ಘಟನೆ ಕಲಿಸಿತು.

-ತಾರಾನಾಥ್ ಮೇಸ್ತ ಶಿರೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಒಂದರ್ಧ ಗಂಟೆ ಬಿಸಿಲಲ್ಲಿ ನಿಲ್ಲಿಸುವುದರಿಂದ ಚೈನೀಸ್ ಇಂಡಿಯನ್ ಆಗಬಲ್ಲನೆ?

Upayuktha

ಕೊರೊನಾ ಬಳಿಕ ದೃಶ್ಯ ಮಾಧ್ಯಮಗಳ ಹೆಗಲೇರಿದ ಮಾದಕ ದ್ರವ್ಯದ ಬೇತಾಳ….

Harshitha Harish

ಪ್ರಚೋದನೆ…. ಸ್ವಾರ್ಥಕ್ಕಾಗಿಯಲ್ಲ, ಸಮಾಜದ ಸುಧಾರಣೆಗಾಗಿ

Upayuktha