ಪ್ರಮುಖ ವಾಣಿಜ್ಯ

ಸಿಎ ಪರೀಕ್ಷೆಗಳ ಮುಂದೂಡಿಕೆ; ಹೊಸ ದಿನಾಂಕಗಳು ಪ್ರಕಟ

ಹೊಸದಿಲ್ಲಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್‌ನಲ್ಲಿ ನಿಗದಿಯಾಗಿದ್ದ ತನ್ನ ಎಲ್ಲ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ಇಂದು ಪ್ರಕಟಿಸಿದೆ.

ಹೊಸ ಸ್ಕೀಂ ಅಡಿಯಲ್ಲಿ ಬರುವ ಲೆಕ್ಕ ಪರಿಶೋಧಕರ ಫೌಂಡೇಶನ್ ಕೋರ್ಸ್‌, ಹಳೆ ಸ್ಕೀಂ ಅಡಿಯಲ್ಲಿ ಬರುವ ಇಂಟರ್‌ಮೀಡಿಯೇಟ್ (ಐಪಿಸಿ), ಹೊಸ ಸ್ಕೀಂ ಅಡಿಯಲ್ಲಿ ಇಂಟರ್‌ಮಿಡಿಯೇಟ್ ಮತ್ತು ಹಳೆಯ ಮತ್ತು ಹೊಸ ಸ್ಕೀಂ ಅಡಿಯಲ್ಲಿ ನಡೆಸಲಾಗುವ ಅಂತಿಮ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಜುಲೈ 15ರಂದು ಪ್ರಕಟಿಸಲಾದ ಮತ್ತು ಅಕ್ಟೋಬರ್ 8ರಂದು ಪ್ರಕಟಿಸಲಾದ ಅಧಿಸೂಚನೆಗಳ ಮುಂದುವರಿದ ಭಾಗವಾಗಿ ಈ ಪ್ರಕಟಣೆ ಹೊರಡಿಸಲಾಗಿದೆ. ಹಿಂದಿನ ಎರಡೂ ಸೂಚನೆಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳು, ಪರೀಕ್ಷಕರು ಮತ್ತು ಮೇಲ್ವಿಚಾರಕರು ಅನುಸರಿಸಬೇಕಾದ ಸೂಚನೆಗಳನ್ನು ನೀಡಲಾಗಿತ್ತು.

ಪೂರ್ವ ನಿಗದಿಯಂತೆ ಸಿಎ ಪರೀಕ್ಷೆಗಳು ನವೆಂಬರ್ 1ರಿಂದ 18ರ ವರೆಗೆ ನಡೆಯಬೇಕಾಗಿತ್ತು. ಆದರೆ ಇದೀಗ ಮುಂದೂಡಲಾದ ದಿನಾಂಕದಂತೆ ನವೆಂಬರ್ 21ರಿಂದ ಡಿಸೆಂಬರ್ 14ರ ವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಿಸಲಾಗಿದೆ.

ವಿವರಗಳು ಈ ಕೆಳಗಿನಂತಿವೆ:
ಹೊಸ ಸ್ಕೀಂ ಅಡಿಯಲ್ಲಿ ಫೌಂಡೇಶನ್ ಕೋರ್ಸ್‌ಗೆ ಡಿಸೆಂಬರ್‌ 8, 10, 26 ಮತ್ತು 28ರಂದು; ಹಳೆಯ ಸ್ಕೀಂ ಅಡಿಯಲ್ಲಿ ಇಂಟರ್‌ಮೀಡಿಯೇಟ್‌ (ಐಪಿಸಿ) ಗೆ ನವೆಂಬರ್ 22, 24, 26 ಮತ್ತು 28ರಂದು ಹಾಗೂ ಗ್ರೂಪ್‌ 1ಕ್ಕೆ ಡಿಸೆಂಬರ್ 1, 3 ಮತ್ತು ಗ್ರೂಪ್ 2ಕ್ಕೆ ಡಿಸೆಂಬರ್ 5ರಂದು ಪರೀಕ್ಷೆಗಳು ನಡೆಯುತ್ತವೆ.

ಹೊಸ ಸ್ಕೀಂ ಅಡಿಯಲ್ಲಿ ಐಪಿಸಿಗೆ ನವೆಂಬರ್ 22, 24, 26 ಮತ್ತು 28ರಂದು; ಗ್ರೂಪ್‌ 1ಕ್ಕೆ ಡಿಸೆಂಬರ್‌ 1, 3 ಮತ್ತು 5ರಂದು ಹಾಗೂ ಗ್ರೂಪ್ 2ಕ್ಕೆ ಡಿಸೆಂಬರ್ 7ರಂದು ಪರೀಕ್ಷೆಗಳು ನಡೆಯಲಿವೆ.

ಹಳೆಯ ಸ್ಕೀಂ ಅಡಿಯಲ್ಲಿ ಅಂತಿಮ ಪರೀಕ್ಷೆಯು ನವೆಂಬರ್‌ 21, 23, 25 ಮತ್ತು 27ರಂದು; ಗ್ರೂಪ್‌ 1ಕ್ಕೆ ನವೆಂಬರ್ 29, ಡಿಸೆಂಬರ್‌ 2, 4 ಮತ್ತು 6ರಂದು; ಪರೀಕ್ಷೆಗಳು ನಡೆಯಲಿವೆ.

ನೂತನ ಸ್ಕೀಂ ಅಡಿಯಲ್ಲಿಗ್ರೂಪ್‌ 1ರ ಅಂತಿಮ ಪರೀಕ್ಷೆಗಳು ನವೆಂಬರ್ 21, 23, 25 ಮತ್ತು 27ರಂದು ಹಾಗೂ ಗ್ರೂಪ್ 2ಕ್ಕೆ ನವೆಂಬರ್ 29, ಡಿಸೆಂಬರ್‌ 2, 4 ಮತ್ತು 6ರಂದು ಪರೀಕ್ಷೆಗಳು ನಡೆಯುವುದಾಗಿ ಮಂಡಳಿ ಪ್ರಕಟಿಸಿದೆ.

ಪರೀಕ್ಷಾ ದಿನಾಂಕಗಳಂದು ಕೇಂದ್ರ ಅಥವಾ ರಾಜ್ಯ ಸರಕಾರಗಳು ಸಾರ್ವಜನಿಕ ರಜೆಗಳನ್ನು ಘೋಷಿಸಿದಲ್ಲಿ ಅದು ಈ ಪರೀಕ್ಷೆಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇನ್ನಷ್ಟು ಮಾಹಿತಿಗಳು ಮತ್ತು ಸಕಾಲಿಕ ಸೂಚನೆಗಳಿಗಾಗಿ ಐಸಿಎಐ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸುವಂತೆ ಕೋರಲಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಇಂದಿನ ಪೆಟ್ರೋಲ್- ಡೀಸೆಲ್ ಬೆಲೆ (ಮಾರ್ಚ್ 7)

Upayuktha

ಚಂಪಾ ಷಷ್ಠಿ ಉತ್ಸವ: ಕುಕ್ಕೆಯಲ್ಲಿ ಹೂವಿನ ತೇರು

Upayuktha

ಬಿಗಿ ಭದ್ರತೆ ನಡುವೆ ಕಾಶ್ಮೀರ ಕಣಿವೆಯಲ್ಲಿ ಶಾಂತಿಯುತ ಬಕ್ರೀದ್

Upayuktha

Leave a Comment