
ಬೆಂಗಳೂರು: ಟೀಮ್ ಐ ಲೇಸಾ ತಂಡ ಗಾನ ಗಾರುಡಿಗ ಎಸ್.ಪಿ ಬಾಲಸುಬ್ರಮಣ್ಯಮ್ ಅವರಿಗೆ ನುಡಿಗಾನ ನಮನ ಸಲ್ಲಿಸಿತು.
ಟೀಮ್ ಐಲೇಸಾಕ್ಕೆ ಹೆಗಲು ಕೊಟ್ಟನಂತಹ 20 ರಾಷ್ಟ್ರಗಳು ಒಟ್ಟಾಗಿ ಐ ಲೇಸಾ ತಂಡದ ಮೂಲಕ ಬಾರದೂರಿಗೆ ತೆರಳಿದ ಬಾಲು ಸರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿತು.
ಖ್ಯಾತ ನಟಿ, ಗಾಯಕಿ, ಶ್ರೀಮತಿ ವಿನಯಪ್ರಕಾಶ್ ಅವರು ತಮ್ಮ ಮತ್ತು ಬಾಲು ಸರ್ ಜತೆಗಿನ ಒಡನಾಟದ ಬಗ್ಗೆ ತಿಳಿಸಿ ಅವರದೇ ಹಾಡುಗಳನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಚಲನ ಚಿತ್ರನಟ ಕೆ. ರವಿ ಭಟ್ ಅವರು ಅವರ ಬಾಲು ಸರ್ ಜತೆಗಿನ ಅನುಭವವನ್ನು ಹಂಚಿಕೊಂಡರು.
ಐ ಲೇಸಾದ ರೂವಾರಿ ರಾಜ್ಯ ಪ್ರಶಸ್ತಿ ವಿಜೇತ ರಮೇಶ್ಚಂದ್ರ ಅವರು ಬಾಲು ಸರ್ ಜೊತೆಗಿನ ಬಾಂಧವ್ಯವನ್ನು ಮನಕ್ಕೆ ಮುಟ್ಟುವಂತೆ ಬಿಚ್ಚಿಟ್ಟರು. ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಹಲವಾರು ಮಂದಿ ಅವರಿಗೆ ಜತೆಯಾದರು.
ಸುಧಾಕರ್ ಶೆಟ್ಟಿ ಬೆಂಗಳೂರು, ಅನಂತ್ ರಾವ್ ಬೆಂಗಳೂರು, ನವೀದ್ ಅಬುದಾಬಿ, ರವಿರಾಜ್ ಅಬುದಾಬಿ, ಮಿಸ್ ದೀಕ್ಷಾ ಶೆಟ್ಟಿಬೋಳ ದುಬೈ, ಉಮೇಶ್ ಅಸಗೋಳಿ ಯುಎಸ್ ಎ, ಸುರೇಶ ಪೂಂಜಾ ಆಸ್ಟ್ರೇಲಿಯಾ, ಭಾಸ್ಕರ್ ಶೇರಿಗಾರ್ ಯುಎಸ್ಎ, ಸರ್ವೋತ್ತಮ ಶೆಟ್ಟಿ ಅಬುದಾಬಿ, ಡಾ. ರವಿ ಶೆಟ್ಟಿ ಕತಾರ್, ಅವಿಲ್ ಡಿಸೋಜ ಯುಎಸ್ಎ, ಆತ್ಮರಾಮ್ ಆಳ್ವ ಬೆಂಗಳೂರು ಮುಂತಾದವರು ತಮ್ಮ ಮನದಾಳದ ಮಾತಿನಿಂದ ಮತ್ತು ಅವರ ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಕಾರ್ಯಕ್ರಮವನ್ನು ಮಣ್ಣ ಬಾಜನದ ಕವಿ ಶಾಂತಾರಾಮ ಶೆಟ್ಟಿ ಯವರು ನಿರೂಪಿಸಿದರು. ಸೂರಿ ಮಾರ್ನಾಡ್ ಧನ್ಯವಾದದ ಮೂಲಕ ಶ್ರದ್ಧಾಂಜಲಿ ಸಭೆ ಮುಕ್ತಾಯಗೊಂಡಿತು. ಈ ಪೂರ್ತಿ ಕಾರ್ಯಕ್ರಮವನ್ನು ಟೀಮ್ ಐಲೇಸಾ ದ ಎಲ್ಲಾ ಸದಸ್ಯರು ನಡೆಸಿಕೊಟ್ಟರು.
ಈ ಕಾರ್ಯಕ್ರಮದ ಪೂರ್ತಿ ವಿವರ ಈ ಕೆಳಗಿನ ಲಿಂಕ್ ನಲ್ಲಿದೆ.
https://www.facebook.com/ilesathevoiceofocean/videos/1260866610978770/
ಟೀಮ್ ಐಲೇಸಾ ಹಾಡಿದ ಬಾಲು ಸರ್ ಅವರ ಹಾಡುಗಳು ಜೊತೆಗಿವೆ. ಅದಕ್ಕೂ ಒಮ್ಮೆ ಕಣ್ಣಾಗಿಸಿ ಕಿವಿಯಾಗಿಸಿ.
ಬಾಲು ಸರ್ ಮತ್ತೊಮ್ಮೆ ಹುಟ್ಟಿ ಬನ್ನಿ ಕರ್ನಾಟಕದಲ್ಲೇ ಹುಟ್ಟಿಬನ್ನಿ.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.