ದೇಶ-ವಿದೇಶ ಪ್ರಮುಖ

3-4 ದಿನಗಳಲ್ಲಿ ಕರ್ನಾಟಕ, ಗೋವಾ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

ಅರಬೀ ಸಮುದ್ರದಲ್ಲಿ ಇನ್ನೆರಡು ಚಂಡಮಾರುತಗಳ ಸೃಷ್ಟಿಗೆ ತಾಲೀಮು

ಪ್ರಾತಿನಿಧಿಕ ಚಿತ್ರ

ತಿರುವನಂತಪುರಂ: ಅರಬೀ ಸಮುದ್ರದಲ್ಲಿ ಮುಂದಿನ ವಾರ ಆರಂಭಕ್ಕೆ ಅವಳಿ ಚಂಡಮಾರುತಗಳು ಕಾಣಿಸಿಕೊಳ್ಳಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಮುನ್ಸೂಚನೆ ನೀಡಿದೆ.

ಈ ಬಾರಿ ಈಶಾನ್ಯ ಮುಂಗಾರು ಕೊನೆಗೊಂಡ ಬಳಿಕ ಇದೀಗ ಎರಡನೇ ಬಾರಿಗೆ ಅವಳಿ ಚಂಡಮಾರುತದ ಹಾವಳಿ ಕಾಣಿಸಿಕೊಳ್ಳುತ್ತಿದೆ. ಅಕ್ಟೋಬರ್‌ ಅಂತ್ಯ- ನವೆಂಬರ್ ಆರಂಭದಲ್ಲಿ ಅರಬೀ ಸಮುದ್ರದಲ್ಲಿ ಖ್ಯಾರ್ ಚಂಡಮಾರುತದಿಂದಾಗಿ ಅರಬೀ ಸಮುದ್ರ ಪ್ರಕ್ಷುಬ್ದವಾಗಿ ಕರಾವಳಿ ತೀರಗಳಲ್ಲಿ ಭಾರೀ ಮಳೆಯಾಗಿತ್ತು. ಬಳಿಕ ಅತ್ಯಂತ ತೀವ್ರವಾದ ‘ಮಹಾ’ ಚಂಡಮಾರುತ ಕೆಲವು ದಿನಗಳ ಕಾಲ ಕಂಗೆಡಿಸಿತ್ತು.

ಈ ಅಕಾಲದಲ್ಲಿ ಚಂಡಮಾರುತ, ಮಳೆ ಸುರಿದರೆ ಕೃಷಿ ಉತ್ಪನ್ನಗಳೆಲ್ಲ ನಾಶವಾಗುವ ಭೀತಿಯಿದೆ. ಇದರಿಂದಾಗಿ ಕೃಷಿ ಮತ್ತು ಕೃಷಿ ಆಧರಿತ ಉದ್ಯಮಗಳು ಸಂಪೂರ್ಣ ನೆಲಕಚ್ಚುವ ಅಪಾಯ ತಲೆದೋರಿದೆ.

ಅರಬೀ ಸಮುದ್ರದ ಆಗ್ನೇಯ ಭಾಗದಲ್ಲಿ (ಅರೇಬಿಯಾ ಕರಾವಳಿ) ಮತ್ತು ಪೂರ್ವ ಮಧ್ಯ ಅರಬೀ ಸಮುದ್ರದಲ್ಲಿ ಕರ್ನಾಟಕ-ಗೋವಾ ಕರಾವಳಿ) ಅಂತಹದೇ ಸನ್ನಿವೇಶ ನಿರ್ಮಾಣವಾಗುತ್ತಿದೆ. ಹೀಗಾಗಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಂತಾರಾಷ್ಟ್ರೀಯ ಹವಾಮಾನ ಮಾದರಿಗಳ ಅಧ್ಯಯನ ಪ್ರಕಾರ, ಬಿರುಗಾಳಿ ಸೃಷ್ಟಿಯಾಗುವ ಸನ್ನಿವೇಶ ಇನ್ನೂ ಸೃಷ್ಟಿಯಾಗದಿದ್ದರೂ ಶ್ರೀಲಂಕಾ ಸಮುದ್ರ ಭಾಗದ ಸುತ್ತ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಈ ವಾರಾಂತ್ಯಕ್ಕೆ ಅಥವಾ ಮುಂದಿನ ವಾರದ ಆರಂಭಕ್ಕೆ ಪ್ರಕ್ಷುಬ್ಧತೆ ಕಾಣಿಸಿಕೊಳ್ಳಲಿದೆ.

ಲಕ್ಷದ್ವೀಪ ಮತ್ತು ನೆರೆಯ ಆಗ್ನೇಯ ಅರಬೀ ಸಮುದ್ರದಲ್ಲಿ ಈಗ ಉಂಟಾಗಿರುವ ವಾಯುಭಾರ ಕುಸಿತ ಬುಧವಾರ ಮಧ್ಹಾನ್ದ ವೇಳೆ ಮೂರು ಪಟ್ಟು ತೀವ್ರಗೊಂಡು ಆಳವಾದ ನಿಮ್ನ ಒತ್ತಡದತ್ತ ಸಾಗುತ್ತಿದೆ. ಚಂಡಮಾರುತ ಎಂದು ವರ್ಗೀಕರಿಸಲಾದ ಸ್ಥಿತಿಯತ್ತ ಸಮೀಪಿಸುತ್ತಿದೆ.

ಮುಂಬಯಿನಿಂದ ಆಗ್ನೇಯಕ್ಕೆ 600 ಕಿ.ಮೀ ದೂರದಲ್ಲಿ ಹಾಗೂ ಪಣಜಿಯ ಪಶ್ಚಿಮ ಭಾಗದಿಂದ ನೈಋತ್ಯಕ್ಕೆ 490 ಕಿ.ಮೀ ದೂರದಲ್ಲಿ ಇದು ಕೇಂದ್ರೀಕೃತವಾಗಿದೆ. ಇದು ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದ್ದರೂ ಭಾರತದ ಕರಾವಳಿಗೆ ನೇರವಾಗಿ ಅಪ್ಪಳಿಸುವ ಸಾಧ್ಯತೆ ಸದ್ಯಕ್ಕೆ ಕಾಣಿಸುತ್ತಿಲ್ಲ. ವಾಯುವ್ಯ ಸಮುದ್ರ ಭಾಗದತ್ತ ಅದು ಚಲಿಸುತ್ತಿದೆ.

ಇನ್ನೊಂದು ವಾಯುಭಾರ ಕುಸಿತ ಅರಬೀ ಸಮುದ್ರದ ದಂಡೆ (ಅರಬ್ ಕರಾವಳಿಯ ಎದುರು) ಯಲ್ಲಿ 650 ಕಿ.ಮೀ ಆಗ್ನೇಯ ಭಾಗದ ಸೊಕ್ಟೋರಾ (ಯೆಮೆನ್) ಮತ್ತು ಬೊಸಾಸೋ (ಸೊಮಾಲಿಯಾ) ದಿಂದ 920 ಕಿ.ಮೀ ಆಗ್ನೇಯ ಭಾಗದಲ್ಲಿ ಉಂಟಾಗಿದೆ. ಮುಂದಿನ ಮೂರು ದಿನಗಳಲ್ಲಿ ಅದು ಸೊಮಾಲಿಯಾ ಕರಾವಳಿಯತ್ತ ಚಲಿಸುವ ನಿರೀಕ್ಷೆಯಿದೆ.

ಕಳೆದ ನಾಲ್ಕು ದಶಕಗಳ ಇತಿಹಾಸವನ್ನು ಗಮನಿಸಿದರೆ ಇದೊಂದು ಹೊಸ ದಾಖಲೆಯ ಸೃಷ್ಟಿಗೆ ಕಾರಣವಾಗಬಹುದು ಎನ್ನುತ್ತಾರೆ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ವೆದರ್‌ನ ಅಧ್ಯಕ್ಷ ಜಿ.ಪಿ ಶರ್ಮಾ.

2018ರಲ್ಲಿ ಏಳು ಚಂಡಮಾರುತಗಳು ದಾಖಲಾಗಿದ್ದವು. 1976ರಲ್ಲೂ ಇಷ್ಟೇ ಸಂಖ್ಯೆಯ ಚಂಡಮಾರುತಗಳು ಉಂಟಾಗಿದ್ದವು. ಅರಬೀ ಸಮುದ್ರದ ಕರಾವಳಿಯಲ್ಲಿ ಸೃಷ್ಟಿಯಾಗುತ್ತಿರುವ ಚಂಡಮಾರುತ, ಎಂಟನೆಯದಾಗಿದ್ದು, ಕರ್ನಾಟಕ-ಗೋವಾ ಕರಾವಳಿಯತ್ತ ಚಲಿಸುತ್ತಿರುವ ಚಂಡಮಾರುತ 9ನೆಯದಾಗಿದೆ ಎಂದು ಅವರು ತಿಳಿಸಿದರು.

ಭಾರತದಲ್ಲಿ ಚಂಡಮಾರುತಗಳಿಗೆ ಹೆಸರಿಡುವ ಪದ್ಧತಿ 1999ರಲ್ಲಿ ಒಡಿಶಾ ಕರಾವಳಿಗೆ ಸೂಪರ್ ಸೈಕ್ಲೋನ್ ಅಪ್ಪಳಿಸಿದ ಬಳಿಕವಷ್ಟೇ ಆರಂಭವಾಯಿತು. ಅದಕ್ಕೂ ಮೊದಲು ಬಂಗಾಳ ಕೊಲ್ಲಿಯ ಚಂಡಮಾರುತ, ಅರಬೀ ಸಮುದ್ರದ ಚಂಡಮಾರುತ ಎಂದಷ್ಟೇ ಹೆಸರಿಸಲಾಗುತ್ತಿತ್ತು. 2004ರಲ್ಲಿ ಚಂಡಮಾರುತಗಳಿಗೆ ನಾಮಕರಣದ ಮಾಡುವ ಪದ್ಧತಿ ಆರಂಭವಾಯಿತು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಚಂದಿರನ ನೆಲದಲ್ಲಿ ಇಡಿಯಾಗಿರುವ ವಿಕ್ರಮ್ ಲ್ಯಾಂಡರ್; ಮತ್ತೆ ಸಂಪರ್ಕದ ಭರವಸೆಯಲ್ಲಿ ಇಸ್ರೋ

Upayuktha

ಬಿಎಸ್‌ವೈ ಇಳಿಸಲು ಬಿಜೆಪಿಯಲ್ಲೇ ಸಂಚು: ಸಿದ್ದರಾಮಯ್ಯ ಆರೋಪ

Upayuktha

615 ಕೋಟಿ ರೂ ವೆಚ್ಚದಲ್ಲಿ ಚಂದ್ರಯಾನ-3ಗೆ ಇಸ್ರೋ ಸಿದ್ಧತೆ: ವರ್ಷದೊಳಗೆ ಉಡ್ಡಯನ ಸಾಧ್ಯತೆ

Upayuktha