Others ದೇಶ-ವಿದೇಶ ಪ್ರಮುಖ

3 ವರ್ಷಗಳಲ್ಲಿ ಪ್ರತಿ ಗ್ರಾಮ ಪಡೆಯಲಿದೆ ಒಎಫ್‌ಸಿ ನೆಟ್‌ವರ್ಕ್: ಪ್ರಧಾನಿ ಮೋದಿ

ನವದೆಹಲಿ: ಮುಂದಿನ 1,000 ದಿನಗಳಲ್ಲಿ ಭಾರತದ ಪ್ರತಿ ಗ್ರಾಮವು ಫೈಬರ್ ಆಫ್ಟಿಕ್ ಕೇಬಲ್ ಜಾಲದಿಂದ ಸಂಪರ್ಕಿತಗೊಳ್ಳಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಐತಿಹಾಸಿ ಕೆಂಪುಕೋಟೆಯ ಮೇಲೆ ಶನಿವಾರ 74 ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಅವರು, 2014ಕ್ಕಿಂತ ಮೊದಲು ಕೇವಲ 60 ಪಂಚಾಯತ್‌ಗಳಿಗೆ ಒಎಫ್‌ಸಿ ಸಂಪರ್ಕವಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ 1.5 ಲಕ್ಷ ಗ್ರಾಮ ಪಂಚಾಯತ್‌ಗಳು ಆನ್‌ಲೈನ್ ಆಗಿ ಪರಿವರ್ತನೆಗೊಂಡಿವೆ. ಮುಂದಿನ 3 ವರ್ಷಗಳಲ್ಲಿ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಇಂಟರ್ನೆಟ್ ಸೌಲಭ್ಯ ದೊರಕಲಿದೆ ಎಂದು ಹೇಳಿದರು.

ಅರಬ್ಬಿ ಸಮುದ್ರದಲ್ಲಿರುವ ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪಕ್ಕೆ ಜಲಾಂತರ್ಗಾಮಿ ಒಎಫ್‌ಸಿ ಜಾಲದ ಸಂಪರ್ಕ ಒದಗಿಸುವುದಾಗಿಯೂ ಅವರು ಹೇಳಿದರು. ಕೆಲ ದಿನಗಳ ಹಿಂದಷ್ಟೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಿಗೆ ಸಂಪರ್ಕ ಕಲ್ಪಿಸುವ 2,312 ಕಿ.ಮೀ ಉದ್ದದ ಜಲಾಂತರ್ಗಾಮಿ ಒಎಫ್‌ಸಿ ಕೇಬಲ್ ಜಾಲವನ್ನು ಪ್ರಧಾನಿ ಉದ್ಘಾಟಿಸಿದ್ದರು. ದಾಖಲೆಯ ಒಂದೂವರೆ ವರ್ಷದಲ್ಲಿ ಆ ಯೋಜನೆ ಪೂರ್ಣಗೊಂಡಿತ್ತು.

ಪ್ರಧಾನಿ ಮೋದಿಯವರು ಆರೋಗ್ಯಸೇವೆ, ಉದ್ಯೋಗ ಅಥವಾ ಶಿಕ್ಷಣ ಯಾವುದೇ ಕ್ಷೇತ್ರವಾದರೂ ಭಾರತದ ಹಳ್ಳಿಗಳು ಆನ್‌ಲೈನ್ ಸಂಪರ್ಕ ಹೊಂದಬೇಕು ಎಂದು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಇದನ್ನು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪುನರುಚ್ಚರಿಸಿದ ಅವರು, ಡಿಜಿಟಲ್ ಇಂಡಿಯಾದ ಕನಸು ನನಸಾಗಬೇಕಾದರೆ ಗ್ರಾಮೀಣ ಭಾರತದ ಸಹಭಾಗಿತ್ವ ಅತ್ಯಗತ್ಯ. ನಾವು ತ್ವರಿತಗತಿಯಲ್ಲಿ ನಮ್ಮ ಒಎಫ್‌ಸಿ ಜಾಲವನ್ನು ವಿಸ್ತರಿಸುತ್ತಿದ್ದೇವೆ ಎಂದರು.

ಒಎಫ್‌ಸಿಯು ಭವಿಷ್ಯದ ಹೈ ಸ್ಪೀಡ್ ಬ್ರಾಂಡ್‌ಬ್ಯಾಂಡ್ ಸೇವೆ ಎಂಬುದಾಗಿ ಪರಿಗಣಿತವಾಗಿದ್ದು, ಪ್ರತಿ ಸೆಕೆಂಡ್‌ಗೆ 10 ಜಿಬಿ ವೇಗದೊಂದಿಗೆ ಡೇಟಾ ವರ್ಗಾವಣೆ ಸಾಧ್ಯವಾಗುತ್ತದೆ.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಮಧ್ಯಪ್ರದೇಶ: ಪ್ರಧಾನಿ ಮೋದಿ ಅವರಿಂದ ಇಂದು 1.75 ಲಕ್ಷ ಮನೆಗಳ ಉದ್ಘಾಟನೆ

Upayuktha

ಮಂಗಳೂರಿನಲ್ಲಿ ರಾಘವೇಶ್ವರ ಶ್ರೀಗಳಿಂದ ಫೆ.16ಕ್ಕೆ ವಿಶ್ವವಿದ್ಯಾ ಸಂವಾದ

Upayuktha

ವಲಸೆ ಕಾರ್ಮಿಕರಿಗೆ 4 ವಿಶೇಷ ವಿಮಾನ ಒದಗಿಸಿದ ಅಮಿತಾಬ್ ಬಚ್ಚನ್

Upayuktha

Leave a Comment

error: Copying Content is Prohibited !!