ಕತೆ-ಕವನಗಳು

*ರಾಷ್ಟ್ರೀಯ ಭಾವೈಕ್ಯತೆಯ ಭಾರತ*

 

ತುತ್ತ ತುದಿಯಲ್ಲಿ ಹಿಮರಾಶಿಯ ಕಾಶ್ಮೀರ,
ಕೆಳಗೆ ಮೆರೆವ ತಿಳಿ ನೀಲ ಸಾಗರ.


ಸಾಲು ಸಾಲು ನಿತ್ಯಹರಿದ್ವರ್ಣದ ಕಾಡುಗಳು,
ಮೈ ತುಂಬಿ ಹರಿವ ನದಿಗಳು.
ಕೌತುಕ ಸೃಷ್ಟಿಸುವ ಬೆಟ್ಟಗಳು,
ಪ್ರವಾಸಿಗರ ಮನಸೂರೆಗೊಳ್ಳುವ ಶಿಲ್ಪಕಲೆಗಳು.
ಆಕರ್ಷಕಮಯವಾದ ಮರುಭೂಮಿ…
ವಿಸ್ತಾರವಾದ ಬಯಲು ಪ್ರದೇಶ.
ಎಲ್ಲ ಅವಿತುಕೊಂಡಿರುವ ಈ ಭರತಭೂಮಿ,
ಈ ಪುಣ್ಯಭೂಮಿಗೆ ಶಿರ ನಮಾಮಿ.
ರಾಮಾಯಣ -ಮಹಾಭಾರತ, ಗೀತೆಯ ಸಾರ…
ಹುಟ್ಟಿ ಬೆಳೆದರು ಚಿಂತನೆ ಚಿಲುಮೆಗಳಾದ ಬುದ್ಧ -ಮಹಾವೀರ.
ಹಿಂದೂ -ಮುಸ್ಲಿಂ -ಕ್ರೈಸ್ತ, ಹಲವು ಧರ್ಮಿಯರ ಆಶ್ರಯತಾಣ,
ದಾಸ, ಆಚಾರ್ಯರ, ಋಷಿಮುನಿಗಳ ನೆಲೆವೀಡು ಪಾವನ.
ಸಮಾನತೆಯ ಹರಿಕಾರ -ಧೀಮಂತ ಬಸವಣ್ಣ,
ವಿಶ್ವದಾರ್ಶನಿಕ -ಸಾಂಸ್ಕೃತಿಕ ರಾಯಭಾರಿ ವಿವೇಕಾನಂದರ ನೆಲವಿದು ಅಣ್ಣ.
ಜ್ಞಾನದ ಬೆಳಕಿನ ಕಿಡಿ ಬೆಳಗಿದ ಸಂವಿಧಾನಶಿಲ್ಪಿ ಅಂಬೇಡ್ಕರ್,
ಮಾನವಜನಾಂಗದ ಕೌತುಕ, ಶಾಂತಿದೂತ ಮಹಾತ್ಮಾಗಾಂಧಿ.
ಸತ್ಯ -ಅಹಿಂಸೆ -ವೈಚಾರಿಕತೆಗೆ ಹೆಸರು,
ಪ್ರೀತಿ -ತ್ಯಾಗ -ನಿಸ್ವಾರ್ಥ -ಮಾನವೀಯತೆಯಿಂದ ಮೆರೆವರು.
ಶಾಂತಿ -ಸಹೋದರತೆ -ಭ್ರಾತೃತ್ವಗಳ ಒಡಲು,
ರಾಷ್ಟ್ರೀಯ ಭಾವೈಕ್ಯತೆಗೆ ಹೆಸರಾದ ಭಾರತಾಂಬೆಯ ಮಡಿಲು.

✍ನಾರಾಯಣ. ಕುಂಬ್ರ
ಲ್ಯಾಬ್ ಸಹಾಯಕರು,
ರಸಾಯನ ಶಾಸ್ತ್ರ ವಿಭಾಗ.
ವಿವೇಕಾನಂದ ಕಾಲೇಜು
ನೆಹರುನಗರ, ಪುತ್ತೂರು.

Related posts

ಕವಿತೆ: ಒತ್ತಾಸೆ

Upayuktha

ಕವನ: ನೀಲಾಕಾಶವೇ ಕ್ಷಮಿಸಿಬಿಡು

Upayuktha

ಚಿತ್ರ ಕವನ: ಕುಸುಮ ನವಿಲು

Upayuktha

Leave a Comment

error: Copying Content is Prohibited !!