ದೇಶ-ವಿದೇಶ ಪ್ರಮುಖ

ದೇಶದ ಭದ್ರತೆಯಲ್ಲಿ ವಾಯುಪಡೆ ಮಹತ್ವದ ಪಾತ್ರವಹಿಸಲಿದೆ: ಏರ್‌ಚೀಫ್ ಮಾರ್ಷಲ್

ಹೈದರಾಬಾದ್: ದೇಶದ ಭದ್ರತೆ ವಿಚಾರದಲ್ಲಿ ಭಾರತೀಯ ವಾಯುಪಡೆ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ ಎಂದು ಏರ್‌ಚೀಫ್ ಮಾರ್ಷಲ್‌ ಆರ್‌.ಕೆಎಸ್ ಭದೂರಿಯಾ ಹೇಳಿದ್ದಾರೆ. ಈ ದಶಕದಲ್ಲಿ ಯುದ್ಧ ವಿಧಾನಗಳು ಮತ್ತು ಸ್ವರೂಪದಲ್ಲಿ ಮಹತ್ವದ ಬದಲಾವಣೆಗಳಾಗಿವೆ ಎಂದು ಅವರು ನುಡಿದರು.

ಭಾರತೀಯ ವಾಯುಪಡೆ ಸ್ಥಾಪನೆಯಾದಂದಿನಿಂದಲೂ ಎಲ್ಲ ಸವಾಲಿನ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಿದೆ ಎಂದು ಅವರು ತಿಳಿಸಿದರು.

‘ಪ್ರಚಲಿತ ದಶಕದಲ್ಲಿ ಯುದ್ಧದ ಸ್ವರೂಪ ಮತ್ತು ಸಮರಾಸ್ತ್ರಗಳಲ್ಲಿ ಭಾರೀ ಪ್ರಮಾಣದ ಬದಲಾವಣೆಗಳಾಗಿವೆ. ನಿರ್ದಿಷ್ಟವಾಗಿ ಈ ಬದಲಾವಣೆಗಳು ಗೋಚರವಾಗಿವೆ’ ಎಂದು ಅವರು ನುಡಿದರು.

ದುಂಡಿಗಲ್‌ನಲ್ಲಿರುವ ಏರ್‌ಫೋರ್ಸ್ ಅಕಾಡೆಮಿಯಲ್ಲಿ ನಡೆದ ಸಂಯುಕ್ತ ಪದವಿ ಪ್ರದಾನ ಪೆರೇಡ್‌ನಲ್ಲಿ ಏರ್‌ಚೀಫ್ ಮಾರ್ಷಲ್‌ ಮಾತನಾಡಿದರು.

ತರಬೇತಿ ಪೂರ್ಣಗೊಳಿಸಿದ ಯೋಧರ ಬಗ್ಗೆ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ ಅವರು, ನೂತನ ಸವಾಲುಗಳನ್ನು ಎದುರಿಸುವಲ್ಲಿ ಅವರು ಸಂಪೂರ್ಣ ಸಮರ್ಥರಾಗಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು.

ಪರೇಡ್‌ನಲ್ಲಿ 127 ಮಂದಿ ಫ್ಲೈಟ್ ಕೆಡೆಟ್‌ಗಳು ಮತ್ತು ವಾಯುಪಡೆಯ ಪದಾತಿ ಯೋಧರು ಭಾಗವಹಿಸಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕರಾವಳಿಯಲ್ಲಿ ಮುಸಲಧಾರೆ: ಹಲವೆಡೆ ಉಕ್ಕಿ ಹರಿದ ನದಿಗಳು, ಮಧೂರು ದೇಗುಲದ ಗರ್ಭಗುಡಿ ತೋಯಿಸಿದ ಮಧುವಾಹಿನಿ

Upayuktha

ಖ್ಯಾತ ಗಾಯಕ ಎಸ್‌ಪಿಬಿ ಅವರ ಪತ್ನಿಗೂ ಕೋವಿಡ್ ಪಾಸಿಟಿವ್

Harshitha Harish

ಆಳ್ವಾಸ್‌ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಸ್ಟಾರ್ಟಪ್

Upayuktha