ದೇಶ-ವಿದೇಶ ನಿಧನ ಸುದ್ದಿ

ಭಾರತದ ಖಗೋಳ ವಿಜ್ಞಾನಿ ಡಾ.ಗೋವಿಂದ್ ಸ್ವರೂಪ್ ನಿಧನ

ಪುಣೆ/ ಹೊಸದಿಲ್ಲಿ:  ಭಾರತದ ರೇಡಿಯೊ ಖಗೋಳ ವಿಜ್ಞಾನ ಜನಕ ಡಾ.ಗೋವಿಂದ್ ಸ್ವರೂಪ್ (91) ಅವರು ಪುಣೆಯಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.  .

ಅನಾರೋಗ್ಯದಿಂದ ಬಳಲುತ್ತಿದ್ದು ಇದರ ಜೊತೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಹಲವು ವಲಯಗಳಲ್ಲಿ ಮಹತ್ವದ ಸಂಶೋಧನೆಗಳ ಕೊಡುಗೆ ನೀಡಿರುವ ಡಾ. ಸ್ವರೂಪ್, ರೇಡಿಯೊ ಖಗೋಳ ವಿಜ್ಞಾನ ಮುಂಚೂಣಿಯ ವಿಜ್ಞಾನಿಯಾಗಿದ್ದರು. ಅವರ ಕೊಡುಗೆಯನ್ನು ಸ್ಮರಿಸಿರುವ ಪ್ರಧಾನಿ  ನರೇಂದ್ರ ಮೋದಿ ಅವರ ಹತ್ತಿರದವರಿಗೆ ಧೈರ್ಯ ತುಂಬಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ ಸಹ ಅಗಲಿದ ವಿಜ್ಞಾನಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದರು.

ಇವರು ಪದ್ಮಶ್ರೀ, ಡಾ. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, ಎಚ್.ಕೆ. ಫಿರೋಡಿಯಾ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಸ್ವರೂಪ್ ಭಾಜನರಾಗಿದ್ದಾರೆ.

Related posts

ಸಿಎಎ ವಿರೋಧಿಸಿ 11 ಮುಖ್ಯಮಂತ್ರಿಗಳಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ

Upayuktha

ದೇಶದ ಭದ್ರತೆಯಲ್ಲಿ ವಾಯುಪಡೆ ಮಹತ್ವದ ಪಾತ್ರವಹಿಸಲಿದೆ: ಏರ್‌ಚೀಫ್ ಮಾರ್ಷಲ್

Upayuktha

ಇಸ್ರೇಲ್‌ ನಿರ್ಮಿತ 210 ಟ್ಯಾಂಕ್ ನಾಶಕ ಕ್ಷಿಪಣಿಗಳು ಭಾರತೀಯ ಸೇನೆಯ ಬತ್ತಳಿಕೆಗೆ

Upayuktha