ಕ್ರಿಕೆಟ್ ಕ್ರೀಡೆ ದೇಶ-ವಿದೇಶ ಪ್ರಮುಖ

ಕೋವಿಡ್-19 ಭೀತಿ: ಈ ಬಾರಿಯ ಐಪಿಎಎಲ್ ಕೂಟವನ್ನು ಅಮಾನತು ಮಾಡಲು ನಿರ್ಧರಿಸಿದ ಬಿಸಿಸಿಐ

ಹೊಸದಿಲ್ಲಿ: ಆಟಗಾರರಲ್ಲಿ ಕೋವಿಡ್-19 ಸೋಂಕು ಕಂಡು ಬರುತ್ತಿರುವ ಕಾರಣದಿಂದ ಈ ಬಾರಿಯ ಐಪಿಎಎಲ್ ಕೂಟವನ್ನು ಅಮಾನತು ಮಾಡಲು ಬಿಸಿಸಿಐ ನಿರ್ಧರಿಸಿದೆ.

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಈ ಬಗ್ಗೆ ಮಾಹಿತಿ ನೀಡಿದ್ದು, 2021ನೇ ಸಾಲಿನ ಐಪಿಎಲ್ ಕೂಟವನ್ನು ಸ್ಥಗಿತಗೊಳಿಸಲಾಗಿದೆ, ಮುಂದೆ ಮತ್ತೆ ಕೂಟ ಆಯೋಜಿಸಲು ಪ್ರಯತ್ನಿಸುತ್ತೇವೆ. ಆದರೆ ರದ್ದು ಮಾಡಿಲ್ಲ ಎಂದಿದ್ದಾರೆ.

ಮೂವರು ಆಟಗಾರರು ಸೇರಿದಂತೆ ಒಟ್ಟು ಆರು ಮಂದಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಬಾಲಾಜಿ, ಸಿಎಓ ವಿಶ್ವನಾಥನ್ ಮತ್ತು ಬಸ್ ಕ್ಲೀನರ್ ಗೆ ಕೋವಿಡ್ ಸೋಂಕು ದೃಢವಾಗಿತ್ತು.

ಇಂದು ಸನ್ ರೈಸರ್ಸ್ ಹೈದರಾಬಾದ್ ತಂಡದ ವೃದ್ದಿಮಾನ್ ಸಾಹಾ ಕೂಡಾ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ.

ಕೆಕೆಆರ್ ತಂಡದ ಆಟಗಾರರಿಗೆ ಕೋವಿಡ್ ಸೋಂಕು ದೃಢವಾದ ಕಾರಣ ಸೋಮವಾರ ಆರ್ ಸಿಬಿ ವಿರುದ್ಧ ನಡೆಯಬೇಕಿದ್ದ ಪಂದ್ಯ ಮುಂದೂಡಲಾಗಿತ್ತು, ಚೆನ್ನೈ ಕ್ಯಾಂಪ್ ನಲ್ಲಿ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಸಿಎಸ್ ಕೆ- ರಾಜಸ್ಥಾನ ನಡುವಿನ ಪಂದ್ಯವೂ ಮುಂದೂಡಲಾಗಿತ್ತು. ಆದರೆ ಇದೀಗ ಸಂಪೂರ್ಣ ಕೂಟವನ್ನೇ ಅಮಾನತು ಮಾಡಲಾಗಿದೆ.

Related posts

ಮೋದಿಯವರ ಮುಂದೆ ಅಸಾಧ್ಯವೆಂಬ ಶಬ್ದವೇ ಇಲ್ಲ: ಕೆ. ಶ್ರೀಕಾಂತ್

Upayuktha

ತಂತ್ರಜ್ಞಾನ, ಆಲೋಚನೆಯನ್ನು ವಿಸ್ತರಿಸುವ ಮಾಧ್ಯಮ ವಿಜ್ಞಾನ: ಡಾ. ಕೆ. ಚಿನ್ನಪ್ಪಗೌಡ

Upayuktha

ಬೋವಿಕಾನ ಬಳಿ ಸಿಮೆಂಟ್ ಲಾರಿ ಡಿಕ್ಕಿ: ಬೈಕ್ ಸವಾರ, ಯಕ್ಷಗಾನ ಕಲಾವಿದ ಮೃತ್ಯು

Upayuktha