ದೇಶ-ವಿದೇಶ

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಎಚ್ ಎಸ್ ಪ್ರಣಯ್ ಅವರಿಗೆ ಕೋವಿಡ್ ನೆಗೆಟಿವ್

ಬ್ಯಾಂಕಾಕ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಎಚ್ ಎಸ್ ಪ್ರಣಯ್ ಅವರಿಗೆ ಕೊರೋನಾ ನೆಗಟಿವ್ ಬಂದಿದ್ದು, ಇಬ್ಬರೂ ಥಾಯ್ಲೆಂಡ್ ಓಪನ್ ಗೆ ಸಜ್ಜಾಗುತ್ತಿದ್ದಾರೆ.

  ಈ ಇಬ್ಬರೂ ಆಟಗಾರರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಥಾಯ್ಲೆಂಡ್ ಓಪನ್ ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇಬ್ಬರಿಗೂ ನೆಗಟಿವ್ ಬಂದಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಮತ್ತು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ತಿಳಿಸಿದೆ.

ಥಾಯ್ಲೆಂಡ್ 2021ರ ಟೂರ್ನಿಯಲ್ಲಿ ಭಾಗವಹಿಸಲು ತಯಾರಾಗಿದ್ದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾಗೆ ಕೊರೋನಾ ಪಾಸಿಟಿವ್ ಬಂದಿದ್ದು ಈ ಬಗ್ಗೆ ಸ್ವತಃ ಸೈನಾ ಟ್ವೀಟ್‌ನಲ್ಲಿ ಗೊಂದಲವನ್ನು ವ್ಯಕ್ತಪಡಿಸಿದ್ದರು.

ಸೈನಾ ನೆಹ್ವಾಲ್‌ ಹಾಗೂ ಎಚ್ ಎಸ್ ಪ್ರಣಯ್ ಅವರಿಗೆ ಕೊರೋನಾ ವೈರಸ್ ಪಾಸಿಟಿವ್ ಎಂಬುದು ಸುಳ್ಳು ವರದಿ ಎಂದು ಪ್ರಕಟಿಸಿದ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್, ಬುಧವಾರದಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಈ ಇಬ್ಬರೂ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಬಿಜೆಪಿ ಆದಾಯ ದ್ವಿಗುಣ, ಕಾಂಗ್ರೆಸ್ ಆದಾಯ 4.5 ಪಟ್ಟು ಹೆಚ್ಚಳ

Upayuktha

ರಾಮ ಮಂದಿರಕ್ಕಾಗಿ 28 ವರ್ಷಗಳಿಂದ ಉಪವಾಸ ವ್ರತದಲ್ಲಿರುವ ಈ ಅಜ್ಜಿ

Upayuktha News Network

3 ವರ್ಷಗಳಲ್ಲಿ ಪ್ರತಿ ಗ್ರಾಮ ಪಡೆಯಲಿದೆ ಒಎಫ್‌ಸಿ ನೆಟ್‌ವರ್ಕ್: ಪ್ರಧಾನಿ ಮೋದಿ

Upayuktha News Network