ವಾಷಿಂಗ್ಟನ್: ಭಾರತದ ಯುವ ಗಣಿತಶಾಸ್ತ್ರಜ್ಞ ರಾದ ನಿಖಿಲ್ ಶ್ರೀವಾಸ್ತವ ಅವರು 2021ನೇ ಸಾಲಿನ ಮೈಕೆಲ್ ಮತ್ತು ಶೀಲಾ ಹೆಲ್ಡ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕ್ಯಾಡಿಸನ್-ಸಿಂಗರ್ ಪ್ರಾಬ್ಲಮ್ ಮತ್ತು ರಾಮಾನುಜನ್ ಗ್ರಾಫ್ ಗೆ ಸಂಬಂಧಪಟ್ಟಂತೆ ಅತಿ ದೀರ್ಘ ಪ್ರಶ್ನೆಗಳನ್ನು ಉತ್ತರಿಸಿದ್ದಕ್ಕಾಗಿ ನಿಖಿಲ್ ಶ್ರೀವಾಸ್ತವ ಅವರು ಮತ್ತಿಬ್ಬರ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದಾರೆ.
ಕ್ಯಾಲಿಫೋರ್ನಿಯಾ ವಿ.ವಿದ್ಯಾಲಯದ ಶ್ರೀವಾಸ್ತವ ಅವರು, ಬರ್ಕ್ಲಿ, ಆಡಮ್ ಮಾರ್ಕಸ್, ಎಕೋಲ್ ಪಾಲಿಟೆಕ್ನಿಕ್ ಫೆಡರಲ್ ಡಿ ಲೌಸನ್ನೆ (ಇಪಿಎಫ್ಎಲ್) ಮತ್ತು ಯೇಲ್ ವಿಶ್ವವಿದ್ಯಾಲಯದ ಡೇನಿಯಲ್ ಅಲನ್ ಸ್ಪೀಲ್ಮನ್ ಅವರ ಜೊತೆಗೆ 2021ನೇ ಸಾಲಿನ ಮೈಕೆಲ್ ಮತ್ತು ಶೀಲಾ ಹೆಲ್ಡ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಹೇಳಿಕೆಯಲ್ಲಿ ತಿಳಿಸಿದೆ.
ಇದೀಗ ಈ ಪ್ರಶಸ್ತಿಯು ಪದಕ ಮತ್ತು 1 ಲಕ್ಷ ಅಮೆರಿಕನ್ ಡಾಲರ್ ನಗದನ್ನು ಹೊಂದಿದೆ.