ಅಪಘಾತ- ದುರಂತ ಚಂದನವನ- ಸ್ಯಾಂಡಲ್‌ವುಡ್

ನಟಿ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಕಾರು ಅಪಘಾತ; ಇಬ್ಬರು ಸಾವು

ಸಾಂದರ್ಭಿಕ ಚಿತ್ರ (ಕೃಪೆ: ಹ್ಯಾನ್ಸ್ ಆಫ್ ಇಂಡಿಯಾ)

ಹುಬ್ಬಳ್ಳಿ:

 ಮಾಜಿ ಸಚಿವೆ ಹಾಗೂ ಖ್ಯಾತ ನಟಿ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಕಾರೊಂದು ಶುಕ್ರವಾರ ರಾತ್ರಿ ಹುಬ್ಬಳ್ಳಿ ಹೊರವಲಯದಲ್ಲಿ  ಅಪಘಾತಕ್ಕೀಡಾಗಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.

 

ಗದಗದಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು ಮತ್ತು ಹುಬ್ಬಳ್ಳಿಯಿಂದ ಗದಗನತ್ತ ಹೊರಟಿದ್ದ ಬೊಲೆನೋ ಕಾರಿನ ನಡುವೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.

ಈ ದುರಂತ ದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೊಲೀಸ್ ಮೂಲಗಳಿಂದ ತಿಳಿದಿರುವ ಮಾಹಿತಿ ಪ್ರಕಾರ ಅಪಘಾತಕ್ಕೀಡಾದ ಕಾರು ಮಾಜಿ ಸಚಿವೆ  ಹಾಗೂ ಚಿತ್ರನಟಿ ಉಮಾಶ್ರಿ ಯವರಿಗೆ ಸೇರಿದ್ದು. ಉಮಾಶ್ರೀ ಅವರನ್ನು ಬಿಟ್ಟು ಕಾರಿನ ಚಾಲಕ ತಮ್ಮೂರಿಗೆ ಹೊರಟಿದ್ದ ವೇಳೆ ಹುಬ್ಬಳ್ಳಿ ತಾಲ್ಲೂಕಿನ ಬಂಡಿವಾಡ ಸಮೀಪದಲ್ಲಿ ಈ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಒಬ್ಬರು ಧಾರವಾಡ ಮೂಲದ ಸ್ಮಿತಾ ಕಟ್ಟಿ ಎಂದು ತಿಳಿದುಬಂದಿದೆ. ಇನ್ನೊಬ್ಬ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗುತ್ತಿದೆ. ಮೃತರು ಮತ್ತು ಗಾಯಾಳುಗಳೆಲ್ಲರೂ ಕಾರಿನಲ್ಲಿದ್ದವರೂ ಎಂದು ತಿಳಿದುಬಂದಿದೆ.

ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Related posts

ದಾವಣಗೆರೆ: ಲಾರಿಗೆ ಡಿಕ್ಕಿ ಹೊಡೆದು ಸುಟ್ಟು ಕರಕಲಾಯ್ತು ಕಾರು, ಒಳಗಿದ್ದವರು ಅದೃಷ್ಟವಶಾತ್ ಪಾರು

Harshitha Harish

ಪುತ್ತೂರು- ಈಶ್ವರಮಂಗಲ ಬಳಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ

Upayuktha

ಇಂದಿನ ಐಕಾನ್: ಕನ್ನಡ ಸಿನೆಮಾದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್

Upayuktha