ಸ್ಥಳೀಯ

ಅಂತರ್ಜಾಲ ಆಧಾರಿತ ಅಂತರ್ ರಾಜ್ಯ ಚುಟುಕುಗಳ ರಚನೆ ಮತ್ತು ವಾಚನ ಸ್ಪರ್ಧೆ ಯಲ್ಲಿ ಸಮ್ಯಕ್ತ್ ಜೈನ್ ದ್ವಿತೀಯ

ಕಡಬ : ದಕ್ಷಿಣ ಕನ್ನಡದ ನೂಜಿಬಾಳ್ತಿಲ ಗ್ರಾಮದ ಯುವ ಪ್ರತಿಭೆ ಇದೀಗ ಚುಟುಕು ಸಾಹಿತ್ಯದಲ್ಲೂ ತನ್ನ ಬರವಣಿಗೆ ತೋರ್ಪಡಿಸಿ ಎಲ್ಲರ ಮೆಚ್ಚುಗೆ ಗೆ ಪಾತ್ರರಾಗಿದ್ದಾರೆ.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ ) ಕೇಂದ್ರ ಸಮಿತಿ ಬೆಂಗಳೂರು ವತಿಯಿಂದ ಜಿಲ್ಲಾ ಘಟಕ ಯಾದಗಿರಿಯ ಪ್ರಾಯೋಜಕತ್ವದಲ್ಲಿ ನವೆಂಬರ್‌ 22 , 23 ಮತ್ತು 24 ರಂದು ಅಂತರ್ಜಾಲದ ಮುಖೇನ ಅಂತರ್ರಾಜ್ಯ ಮಟ್ಟದಲ್ಲಿ ಚುಟುಕು ಸಾಹಿತ್ಯ ರಚನೆ ಮತ್ತು ವಾಚನ ಸ್ಪರ್ಧೆಯು ಯಶಸ್ವಿಯಾಗಿ ನಡೆದಿದೆ.

ಈ ಕಾರ್ಯಕ್ರಮ ದಲ್ಲಿ ನೂಜಿಬಾಳ್ತಿಲ ಗ್ರಾಮದ ಸಮ್ಯಕ್ತ್ ಜೈನ್ ರವರು ದ್ವಿತೀಯ ಸ್ಥಾನವನ್ನು ಪಡೆದಿದ್ದು , ತನ್ನ ಊರಿನ ಹೆಸರನ್ನು ಮತ್ತೊಮ್ಮೆ ಅಂತರ್ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ .

ಯುವ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದು ಹಲವಾರು ಕೃತಿಗಳನ್ನು ರಚಿಸಿರುವ ಇವರು ನೂಜಿಬಾಳ್ತಿಲ ಗ್ರಾಮದ ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಮತ್ತು ಶ್ರೀಮತಿ ಮಂಜುಳಾರವರ ಸುಪುತ್ರ .

Related posts

ಉಡುಪಿ ಜಿಲ್ಲೆಯಲ್ಲಿ ಆನ್‌ಲೈನ್‌ ಮೂಲಕ ಮರಳು ಮಾರಾಟಕ್ಕೆ ಚಾಲನೆ

Upayuktha

ವಿಪತ್ತು ನಿರ್ವಹಣೆಗೆ ಬದ್ಧತೆ ಬೇಕು: ಸಂಜೀವ ಕುಮಾರ್

Upayuktha

‘ಸಂಕಲ್ಪ-2020 ಕೋವಿಡ್-19 ಆರೋಗ್ಯ ಮಾರ್ಗದರ್ಶಿ’ ಪುಸ್ತಕ ನಾಳೆ ಬಿಡುಗಡೆ

Upayuktha